International Chess Day: ಚೆಸ್ ಆಡೋದ್ರಿಂದ ಬುದ್ಧಿಶಕ್ತಿ ಹೆಚ್ಚುತ್ತಾ; ಮಕ್ಕಳಿಗೆ ಸಣ್ಣ ವಯಸ್ಸಲ್ಲೇ ಚೆಸ್ ಕಲಿಸುವುದರಿಂದ ಪ್ರಯೋಜನಗಳೇನು
- Chess and Memory: ಚೆಸ್ ಆಡುವುದರಿಂದ ಮೆದುಳು ಚುರುಕಾಗಿ, ಯೋಚನಾ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ನಿಜವೇ? ಚೆಸ್ ಆಡುವುದು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿ ತಿಳಿಯಿರಿ.
- Chess and Memory: ಚೆಸ್ ಆಡುವುದರಿಂದ ಮೆದುಳು ಚುರುಕಾಗಿ, ಯೋಚನಾ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ನಿಜವೇ? ಚೆಸ್ ಆಡುವುದು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿ ತಿಳಿಯಿರಿ.
(1 / 10)
ಚೆಸ್ ಒಂದು ಪ್ರಾಚೀನ ಆಟ. ಇದರಲ್ಲಿ ದೈಹಿಕ ಶ್ರಮ ಇಲ್ಲದಿದ್ದರೂ ತಲೆಗೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಇದರ ಹೊರತಾಗಿ ಚೆಸ್ ಆಡುವುದರಿಂದ ಬುದ್ಧಿವಂತಿಕೆ ವೃದ್ಧಿಸುತ್ತದೆ, ಯೋಚನಾ ಸಾಮರ್ಥ್ಯ ಹೆಚ್ಚುತ್ತದೆ ಎಂದೇ ನಂಬಲಾಗುತ್ತದೆ. ಹೀಗಾಗಿ ಅನೇಕರಿಗೆ ಚಿಕ್ಕ ವಯಸ್ಸಿನಲ್ಲಿಯೇ ಚೆಸ್ ಕಲಿಸಲಾಗುತ್ತದೆ. ಆದರೆ ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ?
(2 / 10)
ವಯಸ್ಸಾದಂತೆ ಮೆದುಳಿನ ಸಾಮರ್ಥ್ಯ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅನೇಕ ಜನರು ವಯಸ್ಸಾದಂತೆ, ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಕೂಡಾ ಎದುರಿಸುತ್ತಾರೆ. ಇಂತಹ ಸಮಸ್ಯೆಗಳನ್ನು ತಡೆಯಲು ಚೆಸ್ ತುಂಬಾ ಸಹಾಯಕವಾಗಿದೆ. ಇದು ಈಗಾಗಲೇ ಸಾಬೀತಾಗಿದೆ.
(3 / 10)
ಚೆಸ್ ಆಟವು ಮೆದುಳಿನೊಂದಿಗೆ ಹೇಗೆ ಸಂಬಂಧ ಹೊಂದಿದೆ ಎಂಬುದನ್ನು ನೋಡೋಣ. ಈ ಕುರಿತು ಮಿದುಳು ಮತ್ತು ನರವಿಜ್ಞಾನಿ ನೇಹಾ ಕಪೂರ್ ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.
(4 / 10)
ಒತ್ತಡ ನಿಭಾಯಿಸುವ ಸಾಮರ್ಥ್ಯ ವೃದ್ಧಿಸುತ್ತದೆ: ಅನೇಕರು ವಿವಿಧ ಕಾರಣಗಳಿಗಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಚೆಸ್ ಆಡುವುದರಿಂದ ಒತ್ತಡದ ಅರಿವಾಗುವುದಿಲ್ಲ. ಇದು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಅನೇಕ ಜನರು ಈ ಆಟದಿಂದ ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಯುತ್ತಾರೆ.
(5 / 10)
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು: ಚೆಸ್ ಆಡುವುದರಿಂದ ಒಟ್ಟಾರೆ ಮೆದುಳಿನ ಆರೋಗ್ಯದ ಮೇಲಿನ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಚೆಸ್ ಆಡುವುದರಿಂದ ಆಲ್ಝೈಮರ್‌ನಂತಹ (Alzheimer) ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.
(6 / 10)
ಭಾವನೆಗಳನ್ನು ನಿಯಂತ್ರಿಸುವುದು ಸುಲಭ: ಚೆಸ್ ಆಡುವಾಗ ಆಟಗಾರರು ವಿವಿಧ ಮಾನಸಿಕ ಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ. ಒತ್ತಡ, ಖುಷಿ, ತಾಳೆ, ಸಹನೆ ಹೀಗೆ ಎಲ್ಲಾ ಭಾವನೆಗಳಿಗೆ ಈ ಆಟ ಅವಕಾಶ ನೀಡುತ್ತದೆ. ಆದ್ದರಿಂದ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೆಚ್ಚುತ್ತದೆ.
(7 / 10)
ಏಕಾಗ್ರತೆಯನ್ನು ಹೆಚ್ಚಿಸುತ್ತದೆ: ಚೆಸ್ ಆಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಬಹುದು. ಪರಿಣಾಮವಾಗಿ, ಕೆಲಸ ಅಥವಾ ಅಧ್ಯಯನದಲ್ಲಿ ಇದು ಧನಾತ್ಮಕ ಪ್ರಭಾವ ಬೀರುತ್ತದೆ. ಹೀಗಾಗಿಯೇ ಚಿಕ್ಕ ವಯಸ್ಸಿನಲ್ಲಿ ಚೆಸ್ ಆಡುವುದು ಅಧ್ಯಯನ ಹಿನ್ನೆಲೆಯಲ್ಲಿ ಉಪಯುಕ್ತ,
(8 / 10)
ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಹೆಚ್ಚುತ್ತದೆ: ಸಮಸ್ಯೆಯನ್ನು ಹೇಗೆ ಪರಿಹರಿಸುವುದು, ಅದನ್ನು ನಿಭಾಯಿಸುವುದು ಹೇಗೆ ಎಂಬ ಸಾಮರ್ಥ್ಯ ಹೆಚ್ಚುತ್ತದೆ. ಈ ಕಾರಣದಿಂದಾಗಿ, ಗಣಿತದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಕೂಡಾ ಸ್ವಲ್ಪ ಮಟ್ಟಿಗೆ ಹೆಚ್ಚಿಸಬಹುದು.
(9 / 10)
ಜ್ಞಾಪಕಶಕ್ತಿ ಸುಧಾರಿಸುತ್ತದೆ: ನಿಯಮಿತವಾಗಿ ಚೆಸ್ ಆಡುವುದರಿಂದ ಸ್ಮರಣಶಕ್ತಿ ವೃದ್ಧಿಸುತ್ತದೆ ಎಂದು ತಿಳಿದುಬಂದಿದೆ. ಇದು ಮೆದುಳಿನ ವಿವಿಧ ಭಾಗಗಳ ದಕ್ಷತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಜ್ಞಾಪಕಶಕ್ತಿ ಅಥವಾ ನೆನಪಿಡುವ ಸಾಮರ್ಥ್ಯವನ್ನು ಕೂಡ ಹೆಚ್ಚಿಸಬಹುದು.
ಇತರ ಗ್ಯಾಲರಿಗಳು