ಕನ್ನಡ ಸುದ್ದಿ  /  Photo Gallery  /  Health News Karnataka School 60 Lakh Children Get Raagi Malt As Supplementary Food With Healthy Diet Kub

ವಿದ್ಯಾರ್ಥಿಗಳಿಗೆ ಈಗ ರಾಗಿ ಮಾಲ್ಟ್‌, 60 ಲಕ್ಷ ಸರ್ಕಾರಿ ಶಾಲೆ ಮಕ್ಕಳಿಗೆ ವಿತರಣೆ, ಹೇಗಿತ್ತು ಎಲ್ಲೆಡೆ ಮಕ್ಕಳ ಖುಷಿ photos

  • ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಅನ್ನಭಾಗ್ಯ, ಹಾಲು, ಮೊಟ್ಟೆ, ಚಿಕ್ಕಿ. ಬಾಳೆಹಣ್ಣಿನ ನಂತರ ಈಗ ರಾಗಿ ಮಾಲ್ಟ್‌ ಸರದಿ. ಮಕ್ಕಳು ಆರೋಗ್ಯಕರವಾಗಿರಲೆಂದು ಶಾಲಾ ಶಿಕ್ಷಣ ಇಲಾಖೆ ವಾರದಲ್ಲಿ ಮೂರು ದಿನ ನೀಡಲಿದೆ. ಗುರುವಾರ ಯೋಜನೆ ಚಾಲನೆ ದೊರೆತಿದೆ. ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ನಾನಾ ಕಡೆಗಳಲ್ಲಿ ಮಕ್ಕಳು ಮಾಲ್ಟ್‌ ಸೇವಿಸಿ ಖುಷಿ ಪಟ್ಟರು. ಇದರ ಚಿತ್ರ ನೋಟ ಇಲ್ಲಿದೆ

ಕರ್ನಾಟಕದಲ್ಲಿ ನಿತ್ಯ 60 ಲಕ್ಷದಂತೆ ವಾರಕ್ಕೆ 1.80 ಕೋಟಿ ಮಕ್ಕಳು ರಾಗಿ ಮಾಲ್ಟ್‌ ವಿತರಣೆ ಯೋಜನೆಯ ಲಾಭ ಪಡೆಯಲಿದ್ದಾರೆ. ಮಕ್ಕಳಿಗೆ ಪೌಷ್ಟಿಕಾಂಶ ನೀಡುವ ನಿಟ್ಟಿನಲ್ಲಿ ಸರ್ಕಾರ ರಾಗಿ ಮಾಲ್ಟ್ ನೀಡುವ ನಿರ್ಧಾರ ಕೈಗೊಂಡಿದೆ. 
icon

(1 / 7)

ಬೆಂಗಳೂರಿನ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಚಟುವಟಿಕೆಗೆ ಖುದ್ದು ರಾಗಿ ಮಾಲ್ಟ್‌ ಸೇವಿಸಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
icon

(2 / 7)

 ವಾರದಲ್ಲಿ ಐದು ದಿನ ಹಾಲು ಕೊಡುವ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸಿದೆವು. ಕೆಎಂಎಫ್‌ ಮೂಲಕ ಮಕ್ಕಳಿಗೆ ಹಾಲು ಹೋಗುತ್ತದೆ. ಈ ಹಾಲಿನ ಹಣವನ್ನು ಸರ್ಕಾರ ಕೆಎಂಎಫ್‌ ಗೆ ನೀಡುತ್ತದೆ. ಆ ಮೂಲಕ ಕೆಎಂಎಫ್‌ ಗೆ ಹಾಲು ಸರಬರಾಜು ಮಾಡುವ ರೈತರಿಗೆ ನೆರವಾಗುವ ತೀರ್ಮಾನ ಮಾಡಿದೆವು. ಇದರ ಜತೆಗೆ ಕಳೆದ ಬಜೆಟ್ ನಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಶುರು ಮಾಡಿದೆವು ಎನ್ನುವುದು ಮಕ್ಕಳಿಗೆ ಮಾಲ್ಟ್‌ ಕುಡಿಸಿದ ಸಿಎಂ ಸಿದ್ದರಾಮಯ್ಯ ಅವರು ನೀಡಿದ ವಿವರಣೆ.
icon

(3 / 7)

2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಹುಪೌಷ್ಠಿಕಾಂಶವುಳ್ಳ ಸಾಯಿ ಶ್ಯೂರ್ ರಾಗಿ ಮಾಲ್ಟ್ ಹೆಲ್ತ್ ಮಿಕ್ಸ್ ವಿತರಿಸುವ ಕಾರ್ಯಕ್ರಮಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಚಾಲನೆ ನೀಡಿದರು.
icon

(4 / 7)

ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ರಾಗಿಮಾಲ್ಟ್‌ ವಿತರಿಸುವ ಯೋಜನೆಗೆ ಶಾಸಕ ವೆಂಕಟಶಿವಾರೆಡ್ಡಿ ಚಾಲನೆ ನೀಡಿದರು.
icon

(5 / 7)

ಬಂಗಾರಪೇಟೆ ತಾಲ್ಲೂಕು ಮಟ್ಟದ ರಾಗಿ ಮಾಲ್ಟ್ ವಿತರಣಾ ಕಾರ್ಯಕ್ರಮಕ್ಕೆ ಬಂಗಾರಪೇಟೆಯ ಮಾದರಿ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್  ರಶ್ಮಿ , ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
icon

(6 / 7)

ಹಳೆ ಬಾಗಲಕೋಟೆ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸಭಾಭವನದಲ್ಲಿ 2023-24ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಹುಪೌಷ್ಠಿಕಾಂಶವುಳ್ಳ ಸಾಯಿ ಶ್ಯೂರ್ ರಾಗಿ ಮಾಲ್ಟ್ ಹೆಲ್ತ್ ಮಿಕ್ಸ್ ವಿತರಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ಜಾನಕಿ‌ ಕೆ.ಎಂ  ಚಾಲನೆ‌ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸಿಇಓ ಶಶಿಧರ‌ ಕುರೇರ, ಶಾಲಾ‌ ಶಿಕ್ಷಣ‌ ಇಲಾಖೆಯ ಉಪ ನಿರ್ದೇಶಕ ಬಿ.ಕೆ.ನಂದನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
icon

(7 / 7)

IPL_Entry_Point

ಇತರ ಗ್ಯಾಲರಿಗಳು