ಕನ್ನಡ ಸುದ್ದಿ  /  Photo Gallery  /  Health News Liver Health Tips In Kannada 10 Habits, Lifestyle Factors That Are Damaging Your Liver Pcp

Liver Health: ಯಕೃತ್‌ಗೆ ಹಾನಿಯುಂಟು ಮಾಡುವ 10 ಜೀವನಶೈಲಿ ಅಭ್ಯಾಸಗಳು, ಲಿವರ್‌ ಜೋಪಾನವಾಗಿಟ್ಟುಕೊಳ್ಳಲು ಟಿಪ್ಸ್‌

  • Liver health Tips: ಹೆಚ್ಚು ಸಿಹಿ ತಿನ್ನುವುದು, ವೈದ್ಯರ ಮಾರ್ಗದರ್ಶನ ಇಲ್ಲದೆ ಮಾತ್ರ, ಔಷಧ ತೆಗೆದುಕೊಳ್ಳುವುದು ಸೇರಿದಂತೆ ಹಲವು ಜೀವನಶೈಲಿ ಅಭ್ಯಾಸಗಳು ನಿಮ್ಮ ಯಕೃತ್‌ನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

ಯಕೃತ್ತು ನಮ್ಮ ದೇಹದ ಪ್ರಮುಖ ಅಂಗ. ದೇಹದ ವಿಷಕಾರಿ ಅಂಶ ತೆಗೆದು ಪ್ರೊಟಿನ್‌ ಸಂಶ್ಲೇಷಣೆ, ಜೀರ್ಣಕ್ರಿಯೆಗೆ ಅಗತ್ಯವಾದ ಪ್ರಮುಖ ಜೀವರಾಸಾಯನಿಕ ಅಂಶಗಳನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ ಇದಾಗಿದೆ. ನಾವು ಪ್ರತಿನಿತ್ಯ ಕೈಗೊಳ್ಳುವ ನಿರ್ಲಕ್ಷ್ಯವು ನಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ. ನಮ್ಮ ಅಭ್ಯಾಸಗಳು, ಜೀವನಶೈಲಿಯು ಯಕೃತಿಗೆ ಹಾನಿ ಉಂಟು ಮಾಡುತ್ತದೆ. ಪೌಷ್ಟಿಕತಜ್ಞರಾದ ಜೂಹಿ ಕಪೂರ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡ ಕೆಲವು ಅಂಶಗಳು ಈ ಮುಂದಿನಂತೆ ಇದೆ.
icon

(1 / 11)

ಯಕೃತ್ತು ನಮ್ಮ ದೇಹದ ಪ್ರಮುಖ ಅಂಗ. ದೇಹದ ವಿಷಕಾರಿ ಅಂಶ ತೆಗೆದು ಪ್ರೊಟಿನ್‌ ಸಂಶ್ಲೇಷಣೆ, ಜೀರ್ಣಕ್ರಿಯೆಗೆ ಅಗತ್ಯವಾದ ಪ್ರಮುಖ ಜೀವರಾಸಾಯನಿಕ ಅಂಶಗಳನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ ಇದಾಗಿದೆ. ನಾವು ಪ್ರತಿನಿತ್ಯ ಕೈಗೊಳ್ಳುವ ನಿರ್ಲಕ್ಷ್ಯವು ನಮ್ಮ ಆರೋಗ್ಯವನ್ನು ಹಾನಿಗೊಳಿಸುತ್ತದೆ. ನಮ್ಮ ಅಭ್ಯಾಸಗಳು, ಜೀವನಶೈಲಿಯು ಯಕೃತಿಗೆ ಹಾನಿ ಉಂಟು ಮಾಡುತ್ತದೆ. ಪೌಷ್ಟಿಕತಜ್ಞರಾದ ಜೂಹಿ ಕಪೂರ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡ ಕೆಲವು ಅಂಶಗಳು ಈ ಮುಂದಿನಂತೆ ಇದೆ.(Pixabay)

ಅತಿಯಾದ ಆಲ್ಕೋಹಾಲ್ ಸೇವನೆ: ದೀರ್ಘಕಾಲ ಅತಿಯಾದ ಆಲ್ಕೋಹಾಲ್‌ ಸೇವನೆ ಮಾಡುವುದು ಯಕೃತ್ತಿಗೆ ಹಾನಿ ಉಂಟು ಮಾಡುತ್ತದೆ. ನೀವು ನಿಮ್ಮ ಯಕೃತ್ತಿನ ಆರೋಗ್ಯದ ಕುರಿತು ಆಲೋಚಿಸಿದರೆ ಆಲ್ಕೋಹಾಲ್‌ ಸೇವನೆ ಮಿತಗೊಳಿಸಿ ಅಥವಾ ಸಂಪೂರ್ಣವಾಗಿ ತ್ಯಜಿಸಿ.
icon

(2 / 11)

ಅತಿಯಾದ ಆಲ್ಕೋಹಾಲ್ ಸೇವನೆ: ದೀರ್ಘಕಾಲ ಅತಿಯಾದ ಆಲ್ಕೋಹಾಲ್‌ ಸೇವನೆ ಮಾಡುವುದು ಯಕೃತ್ತಿಗೆ ಹಾನಿ ಉಂಟು ಮಾಡುತ್ತದೆ. ನೀವು ನಿಮ್ಮ ಯಕೃತ್ತಿನ ಆರೋಗ್ಯದ ಕುರಿತು ಆಲೋಚಿಸಿದರೆ ಆಲ್ಕೋಹಾಲ್‌ ಸೇವನೆ ಮಿತಗೊಳಿಸಿ ಅಥವಾ ಸಂಪೂರ್ಣವಾಗಿ ತ್ಯಜಿಸಿ.(Unsplash)

ಕಳಪೆ ಆಹಾರ: ಅನಾರೋಗ್ಯಕರ ಕೊಬ್ಬು, ಸಂಸ್ಕೃರಿಸಿದ ಆಹಾರವು ಹೆಚ್ಚಿನ ಕೊಬ್ಬು ಉಂಟು ಮಾಡಿ ಯಕೃತ್ತಿನ ಕಾಯಿಲೆಗೆ ಕಾರಣವಾಗುತ್ತದೆ. ಯಕೃತ್ತಿನ ಆರೋಗ್ಯ ಖಚಿತಪಡಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಬೀಜಗಳು ಇತ್ಯಾದಿಗಳನ್ನು ಸೇರಿಸಿ.
icon

(3 / 11)

ಕಳಪೆ ಆಹಾರ: ಅನಾರೋಗ್ಯಕರ ಕೊಬ್ಬು, ಸಂಸ್ಕೃರಿಸಿದ ಆಹಾರವು ಹೆಚ್ಚಿನ ಕೊಬ್ಬು ಉಂಟು ಮಾಡಿ ಯಕೃತ್ತಿನ ಕಾಯಿಲೆಗೆ ಕಾರಣವಾಗುತ್ತದೆ. ಯಕೃತ್ತಿನ ಆರೋಗ್ಯ ಖಚಿತಪಡಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಬೀಜಗಳು ಇತ್ಯಾದಿಗಳನ್ನು ಸೇರಿಸಿ.(Unsplash)

ಬೊಜ್ಜು: ತೂಕ ಹೆಚ್ಚಾಗುವುದರಿಂದ ಆಲ್ಕೋಹಾಲ್‌ ಇಲ್ಲದ ಫ್ಯಾಟಿ ಲಿವರ್‌ ಕಾಯಿಲೆ ಉಂಟಾಗುತ್ತದೆ. ಆರೋಗ್ಯಕರ ಆಹಾರ ತಿನ್ನಿ, ನಿಯಮಿತವಾಗಿ ವ್ಯಾಯಾಮ ಮಾಡಿ. ತೂಕ ಕಡಿಮೆ ಮಾಡಿಕೊಳ್ಳಲು ಉತ್ತಮವಾದ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ. 
icon

(4 / 11)

ಬೊಜ್ಜು: ತೂಕ ಹೆಚ್ಚಾಗುವುದರಿಂದ ಆಲ್ಕೋಹಾಲ್‌ ಇಲ್ಲದ ಫ್ಯಾಟಿ ಲಿವರ್‌ ಕಾಯಿಲೆ ಉಂಟಾಗುತ್ತದೆ. ಆರೋಗ್ಯಕರ ಆಹಾರ ತಿನ್ನಿ, ನಿಯಮಿತವಾಗಿ ವ್ಯಾಯಾಮ ಮಾಡಿ. ತೂಕ ಕಡಿಮೆ ಮಾಡಿಕೊಳ್ಳಲು ಉತ್ತಮವಾದ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ. (Shutterstock Image)

ವೈರಲ್‌ ಹೆಪಟೈಟಿಸ್‌: ಹೆಪಟೈಟಿಸ್‌ ಸೋಂಕುಗಳು ಕೂಡ ಯಕೃತ್ತಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. 
icon

(5 / 11)

ವೈರಲ್‌ ಹೆಪಟೈಟಿಸ್‌: ಹೆಪಟೈಟಿಸ್‌ ಸೋಂಕುಗಳು ಕೂಡ ಯಕೃತ್ತಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. (Twitter/JewelCenterNg)

ಔಷಧಗಳು ಮತ್ತು ಸಪ್ಲಿಮೆಂಟ್‌ಗಳು: ಕೆಲವೊಂದು ಔಷಧಗಳು ಕೂಡ ಲಿವರ್‌ಗೆ ಹಾನಿ ಉಂಟು ಮಾಡುತ್ತದೆ. ವೈದ್ಯರ ಸೂಚನೆ ಇಲ್ಲದೆ ಮೆಡಿಕಲ್‌ನಿಂದ ನೇರವಾಗಿ ಔಷಧ ತೆಗೆದುಕೊಳ್ಳಬೇಡಿ.
icon

(6 / 11)

ಔಷಧಗಳು ಮತ್ತು ಸಪ್ಲಿಮೆಂಟ್‌ಗಳು: ಕೆಲವೊಂದು ಔಷಧಗಳು ಕೂಡ ಲಿವರ್‌ಗೆ ಹಾನಿ ಉಂಟು ಮಾಡುತ್ತದೆ. ವೈದ್ಯರ ಸೂಚನೆ ಇಲ್ಲದೆ ಮೆಡಿಕಲ್‌ನಿಂದ ನೇರವಾಗಿ ಔಷಧ ತೆಗೆದುಕೊಳ್ಳಬೇಡಿ.(Unsplash)

ಧೂಮಪಾನ: ನೀವು ಚೈನ್‌ ಸ್ಮೋಕರ್‌ ಆಗಿದ್ದರೆ ಇದು ಕೇವಲ ಶ್ವಾಸಕೋಶ ಮಾತ್ರವಲ್ಲದೆ ಯಕೃತ್‌ಗೂ ಹಾನಿ ಉಂಟುಮಾಡುತ್ತದೆ. ಸ್ಮೋಕಿಂಗ್‌ನಿಂದ ಲಿವರ್‌ ಕ್ಯಾನ್ಸರ್‌ ಅಪಾಯವೂ ಇದೆ.
icon

(7 / 11)

ಧೂಮಪಾನ: ನೀವು ಚೈನ್‌ ಸ್ಮೋಕರ್‌ ಆಗಿದ್ದರೆ ಇದು ಕೇವಲ ಶ್ವಾಸಕೋಶ ಮಾತ್ರವಲ್ಲದೆ ಯಕೃತ್‌ಗೂ ಹಾನಿ ಉಂಟುಮಾಡುತ್ತದೆ. ಸ್ಮೋಕಿಂಗ್‌ನಿಂದ ಲಿವರ್‌ ಕ್ಯಾನ್ಸರ್‌ ಅಪಾಯವೂ ಇದೆ.(Pixabay)

ವಾತಾವರಣದ ವಿಷಗಳು: ವಾತಾವರಣದಲ್ಲಿರುವ ಕೆಲವೊಂದು ರಾಸಾಯನಿಕಗಳು ಕೂಡ ಯಕೃತ್ತಿಗೆ ಅಪಾಯಕಾರಿಯಾಗಿದೆ. ಕೆಲವೊಂದು ಕೈಗಾರಿಕೆಗಳಲ್ಲಿ ಕೆಲಸ ಮಾಡುವಾಗ ಎಚ್ಚರಿಕೆಯ ಕ್ರಮಗಳನ್ನು ವಹಿಸಿ.
icon

(8 / 11)

ವಾತಾವರಣದ ವಿಷಗಳು: ವಾತಾವರಣದಲ್ಲಿರುವ ಕೆಲವೊಂದು ರಾಸಾಯನಿಕಗಳು ಕೂಡ ಯಕೃತ್ತಿಗೆ ಅಪಾಯಕಾರಿಯಾಗಿದೆ. ಕೆಲವೊಂದು ಕೈಗಾರಿಕೆಗಳಲ್ಲಿ ಕೆಲಸ ಮಾಡುವಾಗ ಎಚ್ಚರಿಕೆಯ ಕ್ರಮಗಳನ್ನು ವಹಿಸಿ.(Shutterstock)

ವ್ಯಾಯಾಮದ ಕೊರತೆ: ನೀರಸ ಜೀವನಶೈಲಿಯೂ ಯಕೃತ್‌ಗೆ ಹಾನಿಕರ. ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ವಾಕಿಂಗ್‌, ಯೋಗ ಇತ್ಯಾದಿಗಳು ನಿಮ್ಮ ದಿನಚರಿಯ ಭಾಗವಾಗಿರಲಿ. 
icon

(9 / 11)

ವ್ಯಾಯಾಮದ ಕೊರತೆ: ನೀರಸ ಜೀವನಶೈಲಿಯೂ ಯಕೃತ್‌ಗೆ ಹಾನಿಕರ. ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ವಾಕಿಂಗ್‌, ಯೋಗ ಇತ್ಯಾದಿಗಳು ನಿಮ್ಮ ದಿನಚರಿಯ ಭಾಗವಾಗಿರಲಿ. (Unsplash)

ಅಧಿಕ ಸಿಹಿ ಸೇವನೆ: ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆ ಸೇವನೆಯೂ ಎನ್‌ಎಎಫ್‌ಎಲ್‌ಡಿಗೆ ಕಾರಣವಾಗುತ್ತದೆ. ಸಕ್ಕರೆಗೆ ಪರ್ಯಾಯವಾದ ವಸ್ತುಗಳನ್ನು ನಿಮ್ಮ ಡಯೆಟ್‌ಗೆ ಸೇರಿಸಿಕೊಳ್ಳಿ.
icon

(10 / 11)

ಅಧಿಕ ಸಿಹಿ ಸೇವನೆ: ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆ ಸೇವನೆಯೂ ಎನ್‌ಎಎಫ್‌ಎಲ್‌ಡಿಗೆ ಕಾರಣವಾಗುತ್ತದೆ. ಸಕ್ಕರೆಗೆ ಪರ್ಯಾಯವಾದ ವಸ್ತುಗಳನ್ನು ನಿಮ್ಮ ಡಯೆಟ್‌ಗೆ ಸೇರಿಸಿಕೊಳ್ಳಿ.

ಹೈಡ್ರೇಷನ್‌: ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಕೂಡ ಲಿವರ್‌ಗೆ ಹಾನಿಯಾಗುತ್ತದೆ. ನಿರ್ಜಲಿಕರಣವಾಗದಂತೆ ನೋಡಿಕೊಳ್ಳಿ. ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಿರಿ. 
icon

(11 / 11)

ಹೈಡ್ರೇಷನ್‌: ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ ಕೂಡ ಲಿವರ್‌ಗೆ ಹಾನಿಯಾಗುತ್ತದೆ. ನಿರ್ಜಲಿಕರಣವಾಗದಂತೆ ನೋಡಿಕೊಳ್ಳಿ. ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಿರಿ. (Pixabay)

ಇತರ ಗ್ಯಾಲರಿಗಳು