ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Liver Health: ಸಮಸ್ಯೆಗಳ ಮೂಲವಾಗುತ್ತಿದೆ ಫ್ಯಾಟಿ ಲಿವರ್‌; ಯಕೃತ್ತಿನ ಆರೋಗ್ಯ ಸುಧಾರಣೆಗೆ ಈ 5 ಆಹಾರಗಳನ್ನು ನಿಯಮಿತವಾಗಿ ಸೇವಿಸಿ

Liver Health: ಸಮಸ್ಯೆಗಳ ಮೂಲವಾಗುತ್ತಿದೆ ಫ್ಯಾಟಿ ಲಿವರ್‌; ಯಕೃತ್ತಿನ ಆರೋಗ್ಯ ಸುಧಾರಣೆಗೆ ಈ 5 ಆಹಾರಗಳನ್ನು ನಿಯಮಿತವಾಗಿ ಸೇವಿಸಿ

  • Healthy Food for Liver: ಯಕೃತ್ತು ದೇಹದ ಪ್ರಮುಖ ಅಂಗ. ಇದು ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆಮಟ್ಟವನ್ನು ನಿಯಂತ್ರಿಸುವುದು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಸರಿಯಾದ ಪೋಷಣೆಯೊಂದಿಗೆ ಯಕೃತ್ತಿನ ಆರೈಕೆ ಮಾಡುವುದು ಬಹಳ ಮುಖ್ಯ.

ಯಕೃತ್ತು ಅಥವಾ ಲಿವರ್‌ ದೇಹದ ವಿವಿಧ ಅಗತ್ಯಗಳನ್ನು ಪೂರೈಸುವ ಶಕ್ತಿ ಕೇಂದ್ರವಾಗಿದೆ. ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಪೌಷ್ಟಿಕತಜ್ಞರು 5 ರೀತಿಯ ಆಹಾರಗಳನ್ನು ಸೂಚಿಸುತ್ತಾರೆ. ನಿಮ್ಮ ಯಕೃತ್ತು ಆರೋಗ್ಯವಾಗಿರಲು ನಿಯಮಿತವಾಗಿ ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿಯಿರಿ.
icon

(1 / 6)

ಯಕೃತ್ತು ಅಥವಾ ಲಿವರ್‌ ದೇಹದ ವಿವಿಧ ಅಗತ್ಯಗಳನ್ನು ಪೂರೈಸುವ ಶಕ್ತಿ ಕೇಂದ್ರವಾಗಿದೆ. ಯಕೃತ್ತಿನ ಆರೋಗ್ಯವನ್ನು ಸುಧಾರಿಸಲು ಪೌಷ್ಟಿಕತಜ್ಞರು 5 ರೀತಿಯ ಆಹಾರಗಳನ್ನು ಸೂಚಿಸುತ್ತಾರೆ. ನಿಮ್ಮ ಯಕೃತ್ತು ಆರೋಗ್ಯವಾಗಿರಲು ನಿಯಮಿತವಾಗಿ ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿಯಿರಿ.(File photo)

ಗೋಧಿಹುಲ್ಲು: ಇದು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಗೋಧಿಹುಲ್ಲು ಸೇವನೆ ಯಕೃತ್ತಿನ ಆರೋಗ್ಯಕ್ಕೆ ಬಹಳ ಉತ್ತಮ. ಯಕೃತ್ತಿನ ಆರೋಗ್ಯ ಸದಾ ಚೆನ್ನಾಗಿರಲು ಇದರ ರಸವನ್ನು ಸೇವಿಸಬೇಕು. 
icon

(2 / 6)

ಗೋಧಿಹುಲ್ಲು: ಇದು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಗೋಧಿಹುಲ್ಲು ಸೇವನೆ ಯಕೃತ್ತಿನ ಆರೋಗ್ಯಕ್ಕೆ ಬಹಳ ಉತ್ತಮ. ಯಕೃತ್ತಿನ ಆರೋಗ್ಯ ಸದಾ ಚೆನ್ನಾಗಿರಲು ಇದರ ರಸವನ್ನು ಸೇವಿಸಬೇಕು. (Unsplash)

ಕ್ರೂಸಿಫೆರಸ್ ತರಕಾರಿಗಳು: ಬ್ರೊಕೊಲಿ ಮತ್ತು ಬ್ರಸಲ್ಸ್ ಮೊಗ್ಗುಗಳಂತಹ ಕ್ರೂಸಿಫೆರಸ್ ತರಕಾರಿಗಳನ್ನು ತಿನ್ನುವುದು ದೇಹದ ನೈಸರ್ಗಿಕ ನಿರ್ವಿಶೀಕರಣ ಕಿಣ್ವಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಷದ ಅಂಶಗಳು ಯಕೃತ್ತಿನ ಮೇಲೆ ಪರಿಣಾಮ ಬೀರುವುದನ್ನು ಇದು ತಡೆಯುತ್ತದೆ. ಯಕೃತ್ತಿನ ಕಿಣ್ವಗಳ ರಕ್ತದ ಮಟ್ಟವನ್ನು ಸುಧಾರಿಸುತ್ತದೆ.
icon

(3 / 6)

ಕ್ರೂಸಿಫೆರಸ್ ತರಕಾರಿಗಳು: ಬ್ರೊಕೊಲಿ ಮತ್ತು ಬ್ರಸಲ್ಸ್ ಮೊಗ್ಗುಗಳಂತಹ ಕ್ರೂಸಿಫೆರಸ್ ತರಕಾರಿಗಳನ್ನು ತಿನ್ನುವುದು ದೇಹದ ನೈಸರ್ಗಿಕ ನಿರ್ವಿಶೀಕರಣ ಕಿಣ್ವಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಷದ ಅಂಶಗಳು ಯಕೃತ್ತಿನ ಮೇಲೆ ಪರಿಣಾಮ ಬೀರುವುದನ್ನು ಇದು ತಡೆಯುತ್ತದೆ. ಯಕೃತ್ತಿನ ಕಿಣ್ವಗಳ ರಕ್ತದ ಮಟ್ಟವನ್ನು ಸುಧಾರಿಸುತ್ತದೆ.(Pixabay)

ವಾಲ್‌ನಟ್‌: ಯಕೃತ್ತಿನ ಕೊಬ್ಬು ಕಡಿಮೆ ಮಾಡಲು ವಾಲ್‌ನಟ್‌ ತುಂಬಾ ಪ್ರಯೋಜನಕಾರಿ. ವಾಲ್‌ನಟ್ಸ್‌ನಲ್ಲಿ ಒಮೆಗಾ 6 ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಪರಿಣಾಮವಾಗಿ, ಇದನ್ನು ನಿಯಮಿತವಾಗಿ ತಿನ್ನುವುದರಿಂದ ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.
icon

(4 / 6)

ವಾಲ್‌ನಟ್‌: ಯಕೃತ್ತಿನ ಕೊಬ್ಬು ಕಡಿಮೆ ಮಾಡಲು ವಾಲ್‌ನಟ್‌ ತುಂಬಾ ಪ್ರಯೋಜನಕಾರಿ. ವಾಲ್‌ನಟ್ಸ್‌ನಲ್ಲಿ ಒಮೆಗಾ 6 ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಪರಿಣಾಮವಾಗಿ, ಇದನ್ನು ನಿಯಮಿತವಾಗಿ ತಿನ್ನುವುದರಿಂದ ಯಕೃತ್ತಿನ ಆರೋಗ್ಯವನ್ನು ಸುಧಾರಿಸುತ್ತದೆ.(Unsplash)

ದ್ರಾಕ್ಷಿಗಳು: ಕೆಂಪು ಮತ್ತು ಕಪ್ಪು ದ್ರಾಕ್ಷಿಗಳು ರೆಸ್ವೆರಾಟ್ರೊಲ್‌ನಂತಹ ಹಲವು ಪ್ರಯೋಜನಕಾರಿ ಸಸ್ಯ ಸಂಯುಕ್ತಗಳನ್ನು ಹೊಂದಿವೆ. ಅವು ದೇಹದಲ್ಲಿ ಉತ್ಕರ್ಷಣ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಈ ದ್ರಾಕ್ಷಿಯನ್ನು ನಿಯಮಿತವಾಗಿ ತಿನ್ನುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ.
icon

(5 / 6)

ದ್ರಾಕ್ಷಿಗಳು: ಕೆಂಪು ಮತ್ತು ಕಪ್ಪು ದ್ರಾಕ್ಷಿಗಳು ರೆಸ್ವೆರಾಟ್ರೊಲ್‌ನಂತಹ ಹಲವು ಪ್ರಯೋಜನಕಾರಿ ಸಸ್ಯ ಸಂಯುಕ್ತಗಳನ್ನು ಹೊಂದಿವೆ. ಅವು ದೇಹದಲ್ಲಿ ಉತ್ಕರ್ಷಣ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತವೆ. ಈ ದ್ರಾಕ್ಷಿಯನ್ನು ನಿಯಮಿತವಾಗಿ ತಿನ್ನುವುದರಿಂದ ಯಕೃತ್ತು ಆರೋಗ್ಯಕರವಾಗಿರುತ್ತದೆ.

ಬೀಟ್ರೂಟ್ ಜ್ಯೂಸ್: ಬೀಟ್ರೂಟ್‌ನಲ್ಲಿ ನೈಟ್ರೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇದು ಯಕೃತ್ತಿನಲ್ಲಿ ಆಕ್ಸಿಡೇಟಿವ್ ಹಾನಿ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ವಿಷದ ಅಂಶಗಳನ್ನ ಕಡಿಮೆ ಮಾಡುವ ಕಿಣ್ವಗಳನ್ನು ಸಹ ಹೆಚ್ಚಿಸುತ್ತದೆ.
icon

(6 / 6)

ಬೀಟ್ರೂಟ್ ಜ್ಯೂಸ್: ಬೀಟ್ರೂಟ್‌ನಲ್ಲಿ ನೈಟ್ರೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿವೆ. ಇದು ಯಕೃತ್ತಿನಲ್ಲಿ ಆಕ್ಸಿಡೇಟಿವ್ ಹಾನಿ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ವಿಷದ ಅಂಶಗಳನ್ನ ಕಡಿಮೆ ಮಾಡುವ ಕಿಣ್ವಗಳನ್ನು ಸಹ ಹೆಚ್ಚಿಸುತ್ತದೆ.


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು