ಮಾವಿನಹಣ್ಣು ತಿಂದ ತಕ್ಷಣಕ್ಕೆ ನೀರು ಕುಡಿಯಬಾರದು ಅನ್ನೋದೇಕೆ? ಇಲ್ಲಿದೆ ಕಾರಣ
- ಇದು ಮಾವಿನಹಣ್ಣಿನ ಕಾಲ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನಹಣ್ಣುಗಳು ಲಭ್ಯವಿರುವ ಸಮಯ. ಮಾವಿನಹಣ್ಣು ಆರೋಗ್ಯಕ್ಕೆ ಬಹಳ ಉತ್ತಮ. ಆದರೂ ಮಾವಿನಹಣ್ಣು ಸೇವಿಸುವಾಗ ಕೆಲವು ವಿಷಯಗಳನ್ನು ಗಮನಿಸಬೇಕು. ಅದರಲ್ಲಿ ಮಾವಿನಹಣ್ಣು ತಿಂದಾಕ್ಷಣ ನೀರು ಕುಡಿಯಬಾರದು ಎನ್ನುವ ವಿಚಾರವೂ ಒಂದು. ಇದಕ್ಕೆ ಕಾರಣವೇನು ನೋಡಿ.

(1 / 7)
ಮಾವಿನ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ, ಆ ಕಾರಣಕ್ಕೆ ಮಾವಿನಹಣ್ಣಿನ ಸೇವನೆ ದೇಹಕ್ಕೆ ಬಹಳ ಅವಶ್ಯ ಎಂದು ತಜ್ಞರು ಹೇಳುತ್ತಾರೆ. ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವು ಹಲವು ಕಾಯಿಲೆಗಳಿಗೆ ಮದ್ದು. ಆದರೆ ಮಾವಿನಹಣ್ಣು ತಿನ್ನುವ ವಿಚಾರದಲ್ಲಿ ಒಂದಿಷ್ಟು ನಿಯಮಗಳಿವೆ, ಅವುಗಳನ್ನು ಪಾಲಿಸದೇ ಹೋದಲ್ಲಿ ಮಾವಿನಹಣ್ಣು ಆರೋಗ್ಯಕ್ಕೆ ಹಾನಿಕರ
(2 / 7)
ಈಗ ಮಾವಿನ ಸೀಸನ್ ಆಗಿರುವುದರಿಂದ ನಿತ್ಯವೂ ಮಾವಿನ ಹಣ್ಣು ಸಿಗುತ್ತದೆ. ಇದು ಮಕ್ಕಳಿಂದ ದೊಡ್ಡವರೆಗೆ ಎಲ್ಲರೂ ಇಷ್ಟಪಟ್ಟು ತಿನ್ನುವ ಹಣ್ಣಾಗಿದೆ.
(3 / 7)
ಮಾವಿನಕಾಯಿಯನ್ನು ಚಾಕುವಿನಿಂದ ಕತ್ತರಿಸಿದರೆ ಅದು ಹುದುಗುತ್ತದೆ ಎನ್ನುತ್ತಾರೆ. ಮಾವಿನಹಣ್ಣನ್ನು ಹಲ್ಲಿನಿಂದ ಕಚ್ಚಿ ತಿಂದರೆ ರುಚಿ ಹೆಚ್ಚು ಎನ್ನುವ ಮಾತೂ ಇದೆ.
(4 / 7)
ಮಾವಿನಹಣ್ಣಿನ ಜೊತೆ ಕೆಲವು ಪದಾರ್ಥಗಳನ್ನು ತಿನ್ನಬಾರದು ಎನ್ನುತ್ತಾರೆ. ಅಲ್ಲದೇ ಮಾವು ತಿಂದ ತಕ್ಷಣ ನೀರು ಕುಡಿಯಬಾರದು ಎಂದು ಕೂಡ ಹೇಳುತ್ತಾರೆ. ಆದರೆ ಇದಕ್ಕೆ ಕಾರಣ ಏನು ಎನ್ನುವುದು ನಿಮಗೆ ತಿಳಿದಿಲ್ಲರಬಹುದು.
(5 / 7)
ಮಾವಿನ ಹಣ್ಣು ತಿಂದು ನೀರು ಕುಡಿದರೂ ಹೊಟ್ಟೆನೋವು ಬರುತ್ತದೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನೂ ಉಂಟು ಮಾಡಬಹುದು. ಕೆಲವೊಮ್ಮೆ ವಾಂತಿ, ವಾಕರಿಕೆಗೂ ಕಾರಣವಾಗುತ್ತದೆ.
(6 / 7)
ಮೊಸರು ಅನ್ನದೊಂದಿಗೂ ಮಾವಿನ ಹಣ್ಣನ್ನು ತಿನ್ನಬಾರದು. ಮಾವಿನಹಣ್ಣಿನ ಜೊತೆಗೆ ಮಸಾಲೆಯುಕ್ತ ಆಹಾರವನ್ನು ಸಹ ಸೇವಿಸಬಾರದು. ಇದರೊಂದಿಗೆ ಅಜೀರ್ಣ, ಹೊಟ್ಟೆನೋವಿನಂತಹ ಸಮಸ್ಯೆ ಕಾಡಬಹುದು.
ಇತರ ಗ್ಯಾಲರಿಗಳು