Irregular Periods: ಪದೇ ಪದೇ ಮುಟ್ಟಿನ ಸಮಸ್ಯೆ ಕಾಡ್ತಾ ಇದ್ಯಾ; ಇವು ಕಾರಣವಿರಬಹುದು, ನಿರ್ಲಕ್ಷ್ಯ ಮಾಡಿದಿರಿ
Reasons For Irregular Periods: ಇತ್ತೀಚೆಗೆ ಮಹಿಳೆಯರನ್ನು ಮುಟ್ಟಿನ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅಸಹಜ ಮುಟ್ಟಿನ ಪ್ರಕ್ರಿಯೆಗೆ ಕಾರಣಗಳು ಹಲವಿರಬಹುದು. ಹಾರ್ಮೋನ್ ಅಸಮತೋಲನ ಪ್ರಮುಖ ಕಾರಣವಾದರೆ ಉಳಿದ ಕಾರಣಗಳು ಹೀಗಿವೆ ನೋಡಿ.
(1 / 5)
ಹಾರ್ಮೋನ್ ಅಸಮತೋಲನದ ಕಾರಣಗಳಿಂದ ಮುಟ್ಟು ತಡವಾಗಿ ಆಗಬಹುದು. ಇದರಿಂದ ಹಠಾತ್ ತೂಕ ಹೆಚ್ಚಳ, ಹಠಾತ್ ತೂಕ ನಷ್ಟ ಉಂಟಾಗುವುದು ಇಂತಹ ಸಮಸ್ಯೆಗಳೂ ಎದುರಾಗಬಹುದು.
(2 / 5)
ಇತ್ತೀಚಿಗೆ ವೃತ್ತಿ, ವೈಯಕ್ತಿಕ ಜೀವನ ಸೇರಿದಂತೆ ಹಲವು ಕಾರಣಗಳಿಂದ ಒತ್ತಡ ಹೆಚ್ಚಬಹುದು. ಅಧಿಕ ಒತ್ತಡವೂ ಹಾರ್ಮೋನ್ ಅಸಮತೋಲನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಲೂ ಮುಟ್ಟಾಗುವ ಅವಧಿಯಲ್ಲಿ ವ್ಯತ್ಯಯ ಉಂಟಾಗಬಹುದು.
(3 / 5)
ಜೀವನಶೈಲಿ, ತಿನ್ನುವ ಆಹಾರವೂ ಕೂಡ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೂಡ ಮುಟ್ಟು ತಡವಾಗಿ ಆಗಬಹುದು ಅಥವಾ ಅವಧಿಪೂರ್ವ ಮುಟ್ಟು ಸಂಭವಿಸಬಹುದು.
(4 / 5)
ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವ ಮಹಿಳೆಯರು ತಮ್ಮ ದೇಹದಲ್ಲಿ ಶಕ್ತಿಯ ಕೊರತೆಯನ್ನು ಅನುಭವಿಸಬಹುದು. ಇದು ಕೂಡ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು ಎನ್ನಲಾಗುತ್ತದೆ.
ಇತರ ಗ್ಯಾಲರಿಗಳು