Monsoon Health: ಮಳೆಗಾಲದಲ್ಲಿರಲಿ ಯಕೃತ್ತಿನ ಕಾಳಜಿ; ಸೋಂಕಿನ ಅಪಾಯ ತಡೆಯಲು ವೈದ್ಯರು ನೀಡಿದ ಸಲಹೆ ಹೀಗಿದೆ
- Liver infections in monsoon: ಮಳೆಗಾಲದಲ್ಲಿ ಯಕೃತ್ತಿನ ಸೋಂಕು ಸಾಮಾನ್ಯ. ನಮ್ಮ ದೈನಂದಿನ ಅಭ್ಯಾಸಗಳು ಈ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ದೇಹದ ಪ್ರಮುಖ ಅಂಗವಾಗಿರುವ ಯಕೃತ್ತಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಲಿವರ್ ಅಥವಾ ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಸಲಹೆ.
- Liver infections in monsoon: ಮಳೆಗಾಲದಲ್ಲಿ ಯಕೃತ್ತಿನ ಸೋಂಕು ಸಾಮಾನ್ಯ. ನಮ್ಮ ದೈನಂದಿನ ಅಭ್ಯಾಸಗಳು ಈ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ದೇಹದ ಪ್ರಮುಖ ಅಂಗವಾಗಿರುವ ಯಕೃತ್ತಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಲಿವರ್ ಅಥವಾ ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಕೆಲವು ಸಲಹೆ.
(1 / 13)
ಮಳೆಗಾಲದಲ್ಲಿನ ತಂಪಾದ ವಾತಾವರಣವು ದೇಹ, ಮನಸ್ಸಿಗೆ ಖುಷಿ ನೀಡಿದರೂ ಸಹ, ಈ ಸಮಯದಲ್ಲಿ ಹಲವು ರೋಗಗಳು ನಮ್ಮನ್ನು ಕಾಡಬಹುದು. ನಿರಂತರ ಮಳೆ ಮತ್ತು ಆರ್ದ್ರ ವಾತಾವರಣದಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಹರಡುತ್ತವೆ. ಇದು ನಮ್ಮ ಯಕೃತ್ತಿನ ಆರೋಗ್ಯ ಹದಗೆಡಲು ಕಾರಣವಾಗಬಹುದು. ಆದ್ದರಿಂದ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯ. ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್‌ಪ್ಲಾಂಟ್ ಲೀಡ್ ಸರ್ಜನ್ ಡಾ. ಅಮೀತ್ ಮಂಡೋಟ್ ಯಕೃತ್ತಿನ ಆರೋಗ್ಯ ಮತ್ತು ರೋಗ ತಡೆಗಟ್ಟುವಿಕೆಗಾಗಿ ಕೆಲವು ಪ್ರಮುಖ ಸಲಹೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.(Freepik)
(2 / 13)
ವ್ಯಾಕ್ಸಿನೇಷನ್: ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಹೆಪಟೈಟಿಸ್ ಎ, ಹೆಪಟೈಟಿಸ್ ಬಿ ವಿರುದ್ಧ ಲಸಿಕೆಯನ್ನು ಪಡೆಯುವುದು ಅವಶ್ಯ. (Pixabay)
(3 / 13)
ಸುರಕ್ಷಿತ ಲೈಂಗಿಕ ಕ್ರಿಯೆ: ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಸೇರಿದಂತೆ ಲೈಂಗಿಕವಾಗಿ ಹರಡುವ ಸೋಂಕುಗಳಿಂದ ರಕ್ಷಿಸಲು ಕಾಂಡೋಮ್‌ಗಳನ್ನು ಬಳಸಿ.(Oleksandr Latkun/Zoonar/picture alliance)
(4 / 13)
ಈ ವಸ್ತುಗಳನ್ನು ಹಂಚಿಕೊಳ್ಳಬೇಡಿ: ರೇಜರ್‌ಗಳು, ಟೂತ್‌ಬ್ರಷ್‌ಗಳು ಇತ್ಯಾದಿ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
(5 / 13)
ನೈರ್ಮಲ್ಯವನ್ನು ಕಾಪಾಡಿಕೊಳ್ಳಿ: ಸೋಂಕು ಹರಡುವುದನ್ನು ತಪ್ಪಿಸಲು ಟಾಯ್ಲೆಟ್, ಬಾತ್‌ರೂಮ್ ಬಳಕೆಯ ನಂತರ ಮತ್ತು ತಿನ್ನುವ ಮೊದಲು ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ.(Unsplash)
(6 / 13)
ಸುರಕ್ಷಿತ ಟ್ಯಾಟೂಗಳು: ಟ್ಯಾಟೂ ಹಾಕಿಸಿಕೊಳ್ಳುವುದು, ಕಿವಿ, ಮೂಗು ಚುಚ್ಚಿಸಿಕೊಳ್ಳುವುದು ಇವುಗಳನ್ನು ಮಾಡಿಸಿಕೊಳ್ಳುವ ಮೊದಲು ಸಲಕರಣೆಗಳಿಗೆ ಸರಿಯಾದ ಸ್ಯಾನಿಟೈಸ್ ಮಾಡಿದ್ದಾರೋ ಇಲ್ಲವೋ ಖಚಿತಪಡಿಸಿಕೊಳ್ಳಿ. ಈ ವಿಷಯದಲ್ಲಿ ಸಾಕಷ್ಟು ಜಾಗರೂಕರಾಗಿರುವುದು ಅವಶ್ಯ. (Unsplash)
(7 / 13)
ಆಲ್ಕೋಹಾಲ್ ಸೇವನೆಗೆ ಕಡಿವಾಣ ಹಾಕಿ: ಅತಿಯಾದ ಆಲ್ಕೋಹಾಲ್ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ. ಹಾಗಾಗಿ ಆಲ್ಕೋಹಾಲ್ ಸೇವನೆಗೆ ಕಡಿವಾಣ ಹಾಕಿ. (Unsplash)
(8 / 13)
ಆರೋಗ್ಯಕರ ಆಹಾರ ಸೇವಿಸಿ: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಲೀನ್ ಪ್ರೋಟೀನ್ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಸಕ್ಕರೆ ಅಂಶ ಇರುವ ಆಹಾರಗಳ ಸೇವನೆಯನ್ನು ಮಿತಿಗೊಳಿಸಿ.
(9 / 13)
ನಿಯಮಿತವಾಗಿ ವ್ಯಾಯಾಮ ಮಾಡಿ: ನಿಯಮಿತ ದೈಹಿಕ ಚಟುವಟಿಕೆಯು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕೊಬ್ಬಿನ ಕಾರಣದಿಂದ ಉಂಟಾಗುವ ಯಕೃತ್ತಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.(Freepik)
(10 / 13)
ಒಬ್ಬರಿಗೆ ಬಳಸಿದ ಸೂಜಿಗಳನ್ನು ಇನ್ನೊಬ್ಬರಿಗೆ ಬಳಸುವುದು ಅಥವಾ ಇಂತಹ ಯಾವುದೇ ಔಷಧೀಯ ಸಾಮಗ್ರಿಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಬೇಡಿ.
(11 / 13)
ಔಷಧಿಗಳ ವಿಚಾರದಲ್ಲಿ ಜಾಗೃತೆ ಇರಲಿ: ಸೂಚಿಸಲಾದ ಔಷಧಿಗಳ ಪ್ರಮಾಣವನ್ನು ಅನುಸರಿಸಿ. ಸರಿಯಾದ ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಯಕೃತ್ತಿಗೆ ಹಾನಿ ಮಾಡುವ ಔಷಧಿಗಳನ್ನು ಬಳಸುವುದನ್ನು ತಪ್ಪಿಸಿ.
(12 / 13)
ನಿಯಮಿತ ಆರೋಗ್ಯ ತಪಾಸಣೆ: ನಿಯಮಿತ ವೈದ್ಯಕೀಯ ತಪಾಸಣೆಗಳು ಯಕೃತ್ತಿನ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಮತ್ತು ಯಕೃತ್ತಿನ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.(Unsplash)
ಇತರ ಗ್ಯಾಲರಿಗಳು