ಗುಡುಗು ಮಿಂಚಿನ ಸಂಚಿಗೆ ಬಲಿಯಾಗದಿರಿ; ಸಿಡಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಈ ನಿಯಮಗಳನ್ನು ಅನುಸರಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗುಡುಗು ಮಿಂಚಿನ ಸಂಚಿಗೆ ಬಲಿಯಾಗದಿರಿ; ಸಿಡಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಈ ನಿಯಮಗಳನ್ನು ಅನುಸರಿಸಿ

ಗುಡುಗು ಮಿಂಚಿನ ಸಂಚಿಗೆ ಬಲಿಯಾಗದಿರಿ; ಸಿಡಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಈ ನಿಯಮಗಳನ್ನು ಅನುಸರಿಸಿ

  • ಈ ವರ್ಷ ಬಿಸಿಲಿನ ಅಬ್ಬರದಷ್ಟೇ ಸಿಡಿಲಿನ ಅರ್ಭಟವೂ ಜೋರಾಗಿದೆ. ಮಳೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆಯ ಸಂದರ್ಭ ಸಿಡಿಲಿನ ಹೊಡೆತಕ್ಕೆ ಹಲವರು ಬಲಿಯಾಗಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಸಿಡಿತ ಹೊಡೆತ ಹೆಚ್ಚಿರಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಆ ಕಾರಣಕ್ಕೆ ಸಿಡಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ನೀವು ಈ ಕ್ರಮಗಳನ್ನು ಪಾಲಿಸಬೇಕು. 

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪ ಬಹಳ ಜೋರಾಗಿದೆ. ಕೆಲವೆಡೆ ಮಳೆ ಸುರಿದರೂ ಕೆಲವು ಸ್ಥಳಗಳಲ್ಲಿ ಹನಿ ಮಳೆಯೂ ಬಂದಿಲ್ಲ. ಆದರೆ ಬಿಸಿಲಿನಷ್ಟೇ ಈ ವರ್ಷ ಸಿಡಿಲಿನ ಅಬ್ಬರವೂ ಜೋರಿದೆ. ರಾಜ್ಯದಲ್ಲಿ ಈಗಾಗಲೇ ಹಲವರು ಸಿಡಿಲಿನ ಹೊಡೆತಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರವು ಈ ವರ್ಷ ಗುಡುಗು, ಮಿಂಚು, ಸಿಡಿಲಿನ ಪ್ರಭಾವ ಹೆಚ್ಚಿರುವ ಬಗ್ಗೆ ಮಾಹಿತಿ ನೀಡಿದ್ದು ಎಚ್ಚರಿಕೆ ಸೂಚಿಸಿದೆ. 
icon

(1 / 14)

ಸಿಡುಲು ನೈಸರ್ಗಿಕವಾದರೂ ಕೂಡ ಸಿಡಿಲಿನ ಅಬ್ಬರದಿಂದ ನಮ್ಮನ್ನ ಕಾಪಾಡಿಕೊಳ್ಳಲು ಕೆಲವು ನಿಯಮಗಳನ್ನು ಅನುಸರಿಸಬೇಕು. ಸಿಡಿಲಿನಿಂದ ಕೇವಲ ಮನುಷ್ಯರು ಮಾತ್ರ ದನ-ಕರು, ಪ್ರಾಣಿ, ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹಾಗಾಗಿ ಈ ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು. 
icon

(2 / 14)

ಗುಡುಗು-ಮಿಂಚು ಬರುವಾಗ ಸೂಚನೆ ಸಿಗುತ್ತದೆ. ವಾತಾವರಣ ಬದಲಾಗಿ ಗುಡುಗು ಮಿಂಚು ಬರುತ್ತದೆ ಎನ್ನಿಸಿದಾಕ್ಷಣ ನೀವು ಸೂಕ್ತ ಜಾಗವನ್ನು ಕಂಡುಕೊಳ್ಳಬೇಕು. ನೀವು ಬಯಲು ಪ್ರದೇಶದಲ್ಲಿದ್ದರೆ, ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ, ನಿಲ್ಲಬೇಡಿ.
icon

(3 / 14)

ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.
icon

(4 / 14)

ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಅಡಿಗೆ ನಿಲ್ಲುವುದು ಸಹಜ. ಆದರೆ ಸಿಡಿಲು, ಗುಡುಗು ಇರುವಾಗ ತಪ್ಪಿಯೂ ಮರದಡಿಗೆ ನಿಲ್ಲಬೇಡಿ. ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.
icon

(5 / 14)

ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ. ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ. 
icon

(6 / 14)

ಮಳೆ, ಗುಡುಗು, ಸಿಡಿಲು ಬರುವ ಮುನ್ಸೂಚನೆ ಸಿಕ್ಕರೆ ನೀವು ಕೆರೆಯಲ್ಲಿ ಈಜುವುದು, ಸ್ನಾನ ಮಾಡುವುದು ಅಥವಾ ಗದ್ದೆಯಲ್ಲಿ ಕೆಲಸ ಮಾಡುವುದು ಹೀಗೆ ನೀರಿನಲ್ಲಿ ಇದ್ದರೆ ಕೂಡಲೇ ಅಲ್ಲಿಂದ ದೂರ ಬನ್ನಿ. 
icon

(7 / 14)

ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ. ಇಂತಹ ವಸ್ತುಗಳ ಮೇಲೆ ಸಿಡಿಲು ಎರಗುವ ಸಾಧ್ಯತೆ ಹೆಚ್ಚು. 
icon

(8 / 14)

ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ಇವುಗಳಿಂದ ದೊರವಿರಿ. ಯಾಕೆಂದರೆ ಕಬ್ಬಿಣದ ವಸ್ತುಗಳಿಗೆ ಸಿಡಿಲು ಬಡಿಯುವ ಸಂಭವ ಅಧಿಕ. 
icon

(9 / 14)

ಮಳೆ ಬರುವ ಸಮಯದಲ್ಲಿ ಟೆರೇಸ್‌ ಮೇಲೆ ಹೋಗಿ ಸ್ವಚ್ಛ ಮಾಡುವ ಅಭ್ಯಾಸ ಹಲವರಿಗಿರುತ್ತದೆ. ಆದರೆ ನಿಮಗೆ ಇದು ಸಾವಿನ ಬಾಗಿಲು ತೆರೆಯುವಂತೆ ಮಾಡಬಹುದು. 
icon

(10 / 14)

ಸಿಡಿಲು ಬರುವಾಗ ಸಾಧ್ಯವಾದಷ್ಟು ಮನೆಯೊಳಗೆ ಇರಿ. ಮಳೆ ನೋಡುವ ಸಲುವಾಗಿ ಕಿಟಕಿ ಬಳಿ ನಿಲ್ಲುವುದು ಸರಿಯಲ್ಲ. ಕಿಟಕಿಯಂತಹ ಕಬ್ಬಿಣದ ವಸ್ತುಗಳಿಗೆ ಸಿಡಿಲು ಎರಗುತ್ತದೆ. 
icon

(11 / 14)

ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಬಳಕೆ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಾಹಸವೂ ಬೇಡ. ಸಾಧ್ಯವಾದಷ್ಟು ಗುಡುಗು, ಸಿಡಿಲಿನ ಸಂದರ್ಭ ಎಲೆಕ್ಟ್ರಾನಿಕ್‌ ವಸ್ತುಗಳ ಬಳಕೆ ಕಡಿಮೆ ಮಾಡುವುದು ಉತ್ತಮ. 
icon

(12 / 14)

ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
icon

(13 / 14)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(14 / 14)

ಇತರ ಗ್ಯಾಲರಿಗಳು