Food for Sleep: ಕಾಡುವ ನಿದ್ದೆ ಸಮಸ್ಯೆಯ ಪರಿಹಾರಕ್ಕೆ ಈ ಸೂಪರ್ ಫುಡ್‌ಗಳನ್ನು ಸೇವಿಸಿ; ಚೆನ್ನಾಗಿ ನಿದ್ರಿಸಿ
- Super Food for Good Sleep: ಪೌಷ್ಟಿಕಾಂಶವು ನಿದ್ದೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಅಸಮರ್ಪಕ ಆಹಾರ ಸೇವನೆಯು ಹಾರ್ಮೋನ್ ಅಸಮತೋಲನ ಅಥವಾ ಉರಿಯೂತಕ್ಕೆ ಕಾರಣವಾಗಬಹುದು. ಇದರಿಂದ ನಿದ್ರಾಹೀನತೆಯೂ ಉಂಟಾಗಬಹುದು ಎನ್ನುತ್ತಾರೆ ತಜ್ಞರು.
- Super Food for Good Sleep: ಪೌಷ್ಟಿಕಾಂಶವು ನಿದ್ದೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಅಸಮರ್ಪಕ ಆಹಾರ ಸೇವನೆಯು ಹಾರ್ಮೋನ್ ಅಸಮತೋಲನ ಅಥವಾ ಉರಿಯೂತಕ್ಕೆ ಕಾರಣವಾಗಬಹುದು. ಇದರಿಂದ ನಿದ್ರಾಹೀನತೆಯೂ ಉಂಟಾಗಬಹುದು ಎನ್ನುತ್ತಾರೆ ತಜ್ಞರು.
(1 / 8)
ʼಮೆಗ್ನೀಶಿಯಂ, ಕ್ಯಾಲ್ಸಿಯಂ, ಸತು ಹಾಗೂ ಕೆಲವು ಬಿ ವಿಟಮಿನ್‌ಗಳಂತಹ ಅಗತ್ಯ ಪೋಷಕಾಂಶಗಳು ಉತ್ತಮ ನಿದ್ದೆಗೆ ಸಹಕರಿಸುತ್ತವೆ. ಅಗತ್ಯ ಅಮೈನೋ ಆಮ್ಲ ಟ್ರಿಪ್ಟೊಫಾನ್ ಮೆದುಳಿನಲ್ಲಿ ಸಿರೊಟೊನಿನ್ ಆಗಿ ಪರಿವರ್ತಿಸಬೇಕು. ಸಿರೊಟೋನಿನ್ ಪ್ರತಿಯಾಗಿ ಮೆಲಟೋನಿನ್ ಆಗಿ ಪರಿವರ್ತನೆಯಾಗುತ್ತದೆ. ಮೆಲಟೋನಿನ್ ಹಾಗೂ ಸಿರೊಟೋನಿನ್ ಮಟ್ಟದಲ್ಲಿ ಕಡಿಮೆಯಾದರೆ ನಿದ್ರಾಹೀನತೆ ಹಾಗೂ ನಿದ್ರಾಹೀನತೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದುʼ ಎಂದು ಪೌಷ್ಟಿಕ ತಜ್ಞ ಲೋವ್ನಿತ್ ಬಾತ್ರಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. (Shutterstock)
(2 / 8)
ʼಇನ್ಸೋಮ್ನಿಯಾ ಅಥವಾ ನಿದ್ರಾಹೀನತೆ ಇಂದು ಪ್ರಪಂಚದಾದ್ಯಂತ ಹಲವರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ನಿದ್ದೆಯ ಸಮಸ್ಯೆ ಪರಿಹಾರಕ್ಕೆ ಹಲವರು ನಿದ್ದೆ ಮಾತ್ರೆ ಸೇವಿಸುತ್ತಾರೆ. ಆದರೆ ಇದರ ಬದಲು ಕೆಲವು ಸೂಪರ್ ಫುಡ್‌ಗಳನ್ನು ಸೇವಿಸಬಹುದು, ಈ ಆಹಾರಗಳು ಉತ್ತಮ ನಿದ್ದೆಗೆ ಸಹಕಾರಿʼ ಎನ್ನುತ್ತಾರೆ ಬಾತ್ರ. (Unsplash)
(3 / 8)
ರಾತ್ರಿ ಮಗಲುವ ಮೊದಲು ಒಂದು ಲೋಟ ಬಿಸಿ ಹಾಲು ಕುಡಿಯುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಹಾಲು ಟ್ರಿಪ್ಟೊಫಾನ್‌ನ ಮೂಲವಾಗಿದೆ. ಇದು ಮಾನವ ದೇಹದಿಂದ ಉತ್ಪತ್ತಿಯಾಗದ ಅತ್ಯಗತ್ಯ ಅಮೈನೋ ಆಮ್ಲವಾಗಿದೆ. ಟ್ರಿಪ್ಟೊಫಾನ್ ಸಿರೊಟೋನಿನ್ ಅನ್ನು ಮೆಲಟೋನಿನ್ ಆಗಿ ಪರಿವರ್ತನೆಗೊಳ್ಳುತ್ತದೆ. ಇವೆರಡೂ ನಿದ್ದೆಯನ್ನು ಸುಧಾರಿಸುತ್ತದೆ ಮತ್ತು ವಿಶ್ರಾಂತಿಯನ್ನು ಒದಗಿಸುತ್ತದೆ.
(4 / 8)
ಬಾರ್ಲಿ ಹುಲ್ಲಿನ ಪುಡಿ: ಕ್ಯಾಲ್ಸಿಯಂ, ಟ್ರಿಪ್ಟೊಫಾನ್, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಹಲವಾರು ನಿದ್ರೆ-ಉತ್ತೇಜಿಸುವ ಸಂಯುಕ್ತಗಳಲ್ಲಿ ಸಮೃದ್ಧವಾಗಿರುವ ಬಾರ್ಲಿ ಹುಲ್ಲಿನ ಪುಡಿಯು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.(Pinterest)
(5 / 8)
ವಾಲ್‌ನಟ್ಸ್: ಇದು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇವು ಉತ್ತಮ ನಿದ್ದೆಗೆ ಸಹಕರಿಸುತ್ತದೆ. (Unsplash)
(6 / 8)
ಹುರಿದ ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳು ಟ್ರಿಪ್ಟೊಫಾನ್‌ನ ನೈಸರ್ಗಿಕ ಮೂಲವಾಗಿದೆ, ಇದು ನಿದ್ರೆಯನ್ನು ಉತ್ತೇಜಿಸುವ ಅಮೈನೋ ಆಮ್ಲವಾಗಿದೆ. ಕುಂಬಳಕಾಯಿ ಬೀಜಗಳಲ್ಲಿನ ಸತು, ತಾಮ್ರ ಮತ್ತು ಸೆಲೆನಿಯಮ್ ನಿದ್ರೆಯ ಅವಧಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು.(Pixabay)
(7 / 8)
ಬಾಳೆಹಣ್ಣು: ಬಾಳೆಹಣ್ಣುಗಳು ಮೆಗ್ನೀಸಿಯಮ್, ಟ್ರಿಪ್ಟೊಫಾನ್, ವಿಟಮಿನ್ ಬಿ 6, ಕಾರ್ಬೋಹೈಡ್ರೇಟ್‌ಗಳು ಮತ್ತು ಪೊಟ್ಯಾಸಿಯಮ್‌ನಂತಹ ನಿದ್ರೆಯನ್ನು ಉತ್ತೇಜಿಸುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ, ಇವೆಲ್ಲವೂ ನಿದ್ದೆ ಸುಧಾರಿಸಲು ಸಹಾಯ ಮಾಡುತ್ತವೆ. (Pixabay)
ಇತರ ಗ್ಯಾಲರಿಗಳು