Summer Tips: ಬೇಸಿಗೆಯಲ್ಲಿ ಜ್ಯೂಸ್‌ ಕುಡಿಯೋದು ಬಿಡಿ, ಹಣ್ಣು ತಿನ್ನಿ; ಹೀಗೆ ಹೇಳೋಕೆ 5 ಕಾರಣಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Tips: ಬೇಸಿಗೆಯಲ್ಲಿ ಜ್ಯೂಸ್‌ ಕುಡಿಯೋದು ಬಿಡಿ, ಹಣ್ಣು ತಿನ್ನಿ; ಹೀಗೆ ಹೇಳೋಕೆ 5 ಕಾರಣಗಳಿವು

Summer Tips: ಬೇಸಿಗೆಯಲ್ಲಿ ಜ್ಯೂಸ್‌ ಕುಡಿಯೋದು ಬಿಡಿ, ಹಣ್ಣು ತಿನ್ನಿ; ಹೀಗೆ ಹೇಳೋಕೆ 5 ಕಾರಣಗಳಿವು

  • ಬೇಸಿಗೆಯಲ್ಲಿ ದಾಹ ನೀಗಿಸಿಕೊಳ್ಳುವ ಸಲುವಾಗಿ ಜ್ಯೂಸ್‌ ಕುಡಿಯುತ್ತೇವೆ. ಕೋಲ್ಡ್‌ ಡ್ರಿಂಕ್ಸ್‌ಗಿಂತ ಹಣ್ಣಿನ ರಸ ಉತ್ತಮ. ಆದರೆ ಹಣ್ಣಿನ ರಸಕ್ಕಿಂತ ಹಣ್ಣು ಸೇವಿಸೋದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಅದಕ್ಕೆ 5 ಕಾರಣಗಳಿವೆ. ಆ ಕಾರಣಗಳು ಏನು ನೋಡಿ.

ಬೇಸಿಗೆಯಲ್ಲಿ ತಾಜಾ ಹಣ್ಣಿನ ರಸ ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ನಾವು ಕೇಳಿರುತ್ತೇವೆ. ಅದಕ್ಕಾಗಿ ಹಣ್ಣಿನ ಜ್ಯೂಸ್‌ ಮಾಡಿ ಕುಡಿಯುತ್ತೇವೆ. ಆದರೆ ಪೌಷ್ಟಿಕ ತಜ್ಞರ ಪ್ರಕಾರ ಬೇಸಿಗೆಯಲ್ಲಿ ಹಣ್ಣಿನ ಜ್ಯೂಸ್‌ ಕುಡಿಯುವುದಕ್ಕಿಂತ ಹಣ್ಣು ಸೇವಿಸುವುದು ಉತ್ತಮ. ಹಣ್ಣಿನ ಜ್ಯೂಸ್‌ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಪೌಷ್ಟಿಕತಜ್ಞೆ ಕರಿಶ್ಮಾ ಷಾ ಹೇಳುತ್ತಾರೆ. ಇದಕ್ಕೆ ಅವರು ಹೇಳಿರುವ 5 ಕಾರಣಗಳು ಹೀಗಿವೆ. 
icon

(1 / 7)

(Freepik)

ನಾರಿನಾಂಶ ಇರುವುದಿಲ್ಲ: ಹಣ್ಣಿನ ರಸವನ್ನು ಮಿಕ್ಸಿಯಲ್ಲಿ ರುಬ್ಬುವಾಗ ಅದಕ್ಕೆ ಸಕ್ಕರೆ ಸೇರಿಸಲಾಗುತ್ತದೆ. ಅಲ್ಲದೇ ರಸವನ್ನು ಮಾತ್ರ ಸೋಸಿ ನೀಡಲಾಗುತ್ತದೆ. ಆಗ ಅದಕ್ಕೆ ಅಧಿಕ ಸಕ್ಕರೆಯಂಶ ಸೇರುತ್ತದೆ. ಜೊತೆಗೆ ನಾರಿನಾಂಶ ನಿರ್ಮೂಲನೆಯಾಗುತ್ತದೆ. ನಾರಿನಾಂಶ ಇಲ್ಲದ ಕಾರಣ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. 
icon

(2 / 7)

ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಏರಿಕೆಯಾಗುತ್ತದೆ: ಹಣ್ಣಿನ ರಸ ದೇಹದಲ್ಲಿ ತ್ವರಿತ ಸಕ್ಕರೆಯಂಶ ಬಿಡುಗಡೆ ಕಾರಣವಾಗುತ್ತದೆ. ಇದು ತಂಪು ಪಾನೀಯಗಳಂತೆ ದೇಹದಲ್ಲಿ ಕ್ಯಾಲೊರಿ ಅಂಶ ಹೆಚ್ಚಲು ಕಾರಣವಾಗುತ್ತದೆ. 
icon

(3 / 7)

ತೂಕ ಹೆಚ್ಚಾಗುವುದು: ಅತಿಯಾಗಿ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ತೂಕ ಹೆಚ್ಚುತ್ತದೆ. ಆ ಕಾರಣಕ್ಕೆ ಜ್ಯೂಸ್‌ಗಿಂತ ಹಣ್ಣು ತಿನ್ನುವುದು ಉತ್ತಮ. ಹಣ್ಣು ತಿನ್ನುವುದರಿಂದ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ದೊರೆಯುತ್ತವೆ. ನಾರಿನಾಂಶ ಸೇರಿದಂತೆ ಜೀರ್ಣಕ್ರಿಯೆ ವೃದ್ಧಿಯಾಗಲು ಇದು ಉತ್ತಮ. 
icon

(4 / 7)

ಪೋಷಕಾಂಶಗಳ ನಷ್ಟ: ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹಣ್ಣುಗಳನ್ನು ಜ್ಯೂಸ್ ಮಾಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ಪೋಷಕಾಂಶಗಳು ಕಳೆದುಹೋಗುತ್ತವೆ. ಜ್ಯೂಸ್‌ ಮಾಡಿದ ತಕ್ಷಣ ಕುಡಿಯದೇ ಇದ್ದರೆ ಪೋಷಕಾಂಶಗಳ ನಷ್ಟಕ್ಕೆ ಕಾರಣವಾಗುತ್ತದೆ.
icon

(5 / 7)

(Pixabay)

ವಸಡಿನ ಆರೋಗ್ಯಕ್ಕೂ ಕೆಟ್ಟದ್ದು: ಹಣ್ಣಿನ ರಸವು ಆಮ್ಲೀಯವಾಗಿರುತ್ತದೆ. ಜ್ಯೂಸ್‌ಗೆ ಸಕ್ಕರೆ ಸೇರಿಸುವ ಕಾರಣ ಹಲ್ಲು ಹುಳುಕಾಗುವುದು, ದಂತಕವಚ ಸವೆತ ಮುಂತಾದ ಸಮಸ್ಯೆಗಳು ಉಂಟಾಗಬಹುದು. 
icon

(6 / 7)

(Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಇತರ ಗ್ಯಾಲರಿಗಳು