Heat Wave: ಬಿಸಿಗಾಳಿಯ ಅಪಾಯ ಕಡಿಮೆ ಮಾಡುವ ತಂತ್ರಗಳಿವು, ನಿಮಗಿದು ತಿಳಿದಿರಲೇಬೇಕು
- ಕಳೆದ ಕೆಲವು ದಿನಗಳಿಂದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯ ಪ್ರಮಾಣ ಏರಿಕೆಯಾಗುತ್ತಿದೆ. ರಾಜ್ಯದಲ್ಲೂ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು, ಈ ಸಮಯದಲ್ಲಿ ಒಂದಿಷ್ಟು ಮುಂಜಾಗೃತ ಕ್ರಮಗಳನ್ನು ಅನುಸರಿಸಲೇಬೇಕು. ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ಈ ತಂತ್ರ ಅನುಸರಿಸೋಕೆ ಮರಿಬೇಡಿ.
- ಕಳೆದ ಕೆಲವು ದಿನಗಳಿಂದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯ ಪ್ರಮಾಣ ಏರಿಕೆಯಾಗುತ್ತಿದೆ. ರಾಜ್ಯದಲ್ಲೂ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿದ್ದು, ಈ ಸಮಯದಲ್ಲಿ ಒಂದಿಷ್ಟು ಮುಂಜಾಗೃತ ಕ್ರಮಗಳನ್ನು ಅನುಸರಿಸಲೇಬೇಕು. ಬಿಸಿಗಾಳಿಯಿಂದ ರಕ್ಷಿಸಿಕೊಳ್ಳಲು ಈ ತಂತ್ರ ಅನುಸರಿಸೋಕೆ ಮರಿಬೇಡಿ.
(1 / 7)
ಹೀಟ್‌ವೇವ್ ಅಥವಾ ಬಿಸಿಗಾಳಿಯ ಆರಂಭಿಕ ಎಚ್ಚರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ನಮ್ಮ ಸಂಪೂರ್ಣ ದಿನ ಹೇಗಿರಬೇಕು ಎಂಬುದನ್ನು ನಾವು ಮೊದಲೇ ಪ್ಲಾನ್ ಮಾಡಬೇಕು. ನಮ್ಮ ಯಾವುದೇ ಹೊರಾಂಗಣ ಚಟುವಟಿಕೆಯನ್ನು ಸಾಧ್ಯವಾದಷ್ಟು ಸಂಜೆಯ ನಂತರ ಮಾಡಿಕೊಳ್ಳುವುದು ಉತ್ತಮ. (Rahul Raut/HT PHOTO)
(2 / 7)
ದಿನವಿಡೀ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿಯಿರಿ, ದ್ರವಾಹಾರ ಸೇವನೆಗೆ ಹೆಚ್ಚಿನ ಒತ್ತು ನೀಡಿ. ರಾಗಿ ಅಂಬಲಿ, ಮಜ್ಜಿಗೆಯಂತಹ ಪದಾರ್ಥಗಳನ್ನು ಹೆಚ್ಚು ಸೇವಿಸಿ. ನೀರಿನಾಂಶ ಹೆಚ್ಚಿರುವ ಹಣ್ಣುಗಳ ಸೇವನೆಗೆ ಒತ್ತು ನೀಡಿ.
(3 / 7)
ಬಿಸಿಲಿನ ತಾಪ ಜೋರಾಗಿರುವ ಜೊತೆಗೆ ಹಲವು ನಗರಗಳಲ್ಲಿ ಬಿಸಿಗಾಳಿಯೂ ಹೆಚ್ಚಿದೆ. ಇದರಿಂದ ಅಲರ್ಟ್ ಘೋಷಿಸಲಾಗಿದೆ. ಬಿಸಿಗಾಳಿಯು ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಹೀಟ್‌ವೇವ್ ಹೀಟ್‌ಸ್ಟ್ರೋಕ್‌ಗೂ ಕಾರಣವಾಗಬಹುದು. ಇದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಈ ಕೆಲವು ಸರಳ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. (File Photo)
(4 / 7)
ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಹೊರಾಂಗಣ ಚಟುವಟಿಕೆಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅದರಲ್ಲೂ ಬಿಸಿಲಿನ ತಾಪ ಜೋರಿರುವ ಹೊತ್ತಿನಲ್ಲಿ ದೇಹಕ್ಕೆ ಹೆಚ್ಚು ಶ್ರಮ ಎನ್ನಿಸುವ ಕೆಲಸಗಳನ್ನು ಮಾಡದೇ ಇರುವುದು ಉತ್ತಮ. (Photo by Patrick T. Fallon / AFP)
(5 / 7)
ಎಲ್ಲೇ ಹೋಗಿರಲಿ ನೀರು ನಿಮ್ಮ ಜೊತೆಗೆ ಇರಬೇಕು. ಕುಡಿಯುವ ನೀರು ಇಲ್ಲದೇ ಹೊರಗಡೆ ಹೋಗಬೇಡಿ. ಸ್ವಿಮ್ಮಿಂಗ್ ಫೂಲ್, ಸ್ಪ್ರೇ ಪ್ಯಾಡ್‌ಗಳು ಶಾಖದ ಹೊಡೆತ ತಪ್ಪಿಸಲು ಸಹಾಯ ಮಾಡುತ್ತವೆ. (File Photo/AP)
(6 / 7)
ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ತೆಳುವಾಗಿರುವ ಬಟ್ಟೆ ಆರಿಸಿಕೊಳ್ಳುವುದು ಬಹಳ ಮುಖ್ಯ. ಬೇಸಿಗೆಗೆ ಹತ್ತಿ ಬಟ್ಟೆ ಧರಿಸುವುದು ಬಹಳ ಉತ್ತಮ. ಕಾಟನ್ ಬಟ್ಟೆಗಳು ಕೂಡ ಬಿಸಿಲಿನ ತಾಪ ತಡೆಯಲು ನೆರವಾಗುತ್ತವೆ. ಹೊರಗಡೆ ಹೋಗುವಾಗ ತಪ್ಪದೇ ಸನ್‌ಸ್ಕ್ರೀನ್ ಲೋಷನ್ ಬಳಸಿ. ಜೊತೆಗೆ ಟೋಪಿ, ಛತ್ರಿ ತೆಗೆದುಕೊಂಡು ಹೋಗಲು ಮರೆಯಬೇಡಿ. (Photo by Frederic J. BROWN / AFP)
ಇತರ ಗ್ಯಾಲರಿಗಳು