ಮಕ್ಕಳ ಲಂಚ್ ಬಾಕ್ಸ್ ಚಿಂತೆ ಬಿಡಿ; ನಾಳೆಯಿಂದಲೇ ಈ ಶುಚಿರುಚಿಯ ತಿನಿಸುಗಳನ್ನು ಮಾಡಿಕೊಡಿ
- ಶಾಲಾ ಮಕ್ಕಳಿಗೆ ಪ್ರತಿನಿತ್ಯ ಟಿಫಿನ್ ಬಾಕ್ಸ್‌ಗೆ ಏನಪ್ಪಾ ಮಾಡೋದು ಎಂಬುದೇ ಬಹುತೇಕ ಎಲ್ಲಾ ಪೋಷಕರ ಚಿಂತೆ. ಹೆಚ್ಚಿನ ಅಮ್ಮಂದಿರು ಹಿಂದಿನ ರಾತ್ರಿ ಈ ಯೋಚನೆಯಲ್ಲಿ ಸರಿಯಾಗಿ ನಿದ್ದೆಯೂ ಮಾಡುವುದಿಲ್ಲ. ಇನ್ಮೇಲೆ ಅಂಥಾ ಚಿಂತೆ ಬದಿಗಿಡಿ. ನಿಮ್ಮ ಮಕ್ಕಳ ಆರೋಗ್ಯದ ಕಾಳಜಿಯೊಂದಿಗೆ ನೀವು ಸರಳವಾಗಿ ತಯಾರಿಸಿ ಮಕ್ಕಳ ಬಾಕ್ಸ್‌ಗೆ ಹಾಕಿಕೊಡಬಹುದಾದ ಸ್ನ್ಯಾಕ್ಸ್ ಇಲ್ಲಿದೆ.
- ಶಾಲಾ ಮಕ್ಕಳಿಗೆ ಪ್ರತಿನಿತ್ಯ ಟಿಫಿನ್ ಬಾಕ್ಸ್‌ಗೆ ಏನಪ್ಪಾ ಮಾಡೋದು ಎಂಬುದೇ ಬಹುತೇಕ ಎಲ್ಲಾ ಪೋಷಕರ ಚಿಂತೆ. ಹೆಚ್ಚಿನ ಅಮ್ಮಂದಿರು ಹಿಂದಿನ ರಾತ್ರಿ ಈ ಯೋಚನೆಯಲ್ಲಿ ಸರಿಯಾಗಿ ನಿದ್ದೆಯೂ ಮಾಡುವುದಿಲ್ಲ. ಇನ್ಮೇಲೆ ಅಂಥಾ ಚಿಂತೆ ಬದಿಗಿಡಿ. ನಿಮ್ಮ ಮಕ್ಕಳ ಆರೋಗ್ಯದ ಕಾಳಜಿಯೊಂದಿಗೆ ನೀವು ಸರಳವಾಗಿ ತಯಾರಿಸಿ ಮಕ್ಕಳ ಬಾಕ್ಸ್‌ಗೆ ಹಾಕಿಕೊಡಬಹುದಾದ ಸ್ನ್ಯಾಕ್ಸ್ ಇಲ್ಲಿದೆ.
(1 / 6)
ಮಕ್ಕಳ ಆರೋಗ್ಯ ಕೆಡುವುದು ತುಂಬಾ ಬೇಗ. ಇದಕ್ಕೆ ಈಗಿನ ಆಹಾರ ಪದ್ಧತಿಯೂ ಪ್ರಮುಖ ಕಾರಣ. ಹೊರಗಿನ ಆಹಾರವನ್ನು ಇಷ್ಟಪಟ್ಟು ತಿನ್ನುವ ಮಕ್ಕಳಿಗೆ, ಮನೆಯೂಟ ರುಚಿಸುವುದಿಲ್ಲ. ಮಕ್ಕಳ ಆಹಾರದಲ್ಲಿ ವೈವಿಧ್ಯಯತೆ ಹೇಗೆ ತರುವುದು ಎನ್ನುವುದೇ ಪೋಷಕರ ಚಿಂತೆ. ಮಕ್ಕಳ ಆರೋಗ್ಯದ ವಿಚಾರವಾಗಿ ರಾಜಿ ಮಾಡದೆ, ಅವರಿಗಾಗಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿಕೊಡಬೇಕು. ಮಕ್ಕಳ ಶಾಲೆಯ ಟಿಫಿನ್ ಅಥವಾ ಲಂಚ್ ಬಾಕ್ಸ್‌ಗೆ ನೀವು ಮನೆಯಲ್ಲಿ ಸರಳವಾಗಿ ಮಾಡಬಹುದಾದ ಆಧುನಿಕ ಶೈಲಿಯ ರೆಸಿಪಿಗಳು ಇಲ್ಲಿವೆ ನೋಡಿ.(Unsplash)
(2 / 6)
ಚೀಸ್ ಬಾಲ್ಸ್: ಒಂದು ಬೌಲ್‌ನಲ್ಲಿ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಅದಕ್ಕೆ ಸಂಸ್ಕರಿಸಿದ ಹಿಟ್ಟು, ಕರಿಮೆಣಸು, ಗರಂ ಮಸಾಲಾ, ಚೀಸ್ ಮತ್ತು ಉಪ್ಪನ್ನು ಸೇರಿಸಿ. ಕೊತ್ತಂಬರಿ ಸೊಪ್ಪು ಸೇರಿಸಿ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿನಲ್ಲಿ ನಿಂಬೆ ಗಾತ್ರದ ಚೆಂಡುಗಳನ್ನು ಮಾಡಿ. ಎಣ್ಣೆಯನ್ನು ಬಿಸಿ ಮಾಡಿ, ಹಿಟ್ಟನ್ನು ಬ್ರೆಡ್ ಚೂರುಗಳಲ್ಲಿ ಡಿಪ್ ಮಾಡಿ ಎಣ್ಣೆಯಲ್ಲಿ ಗೋಲ್ಡನ್ ಫ್ರೈ ಆಗುವವರೆಗೆ ಫ್ರೈ ಮಾಡಿ.(istockphoto)
(3 / 6)
ಮಿನಿ ಪಿಜ್ಜಾ: ಸಂಪೂರ್ಣವಾಗಿ ಧಾನ್ಯದಿಂದ ತಯಾರಿಸಿದ ಮಫಿನ್ ಅಥವಾ ಪಿಟಾ ಬ್ರೆಡ್ ಅನ್ನು ಬೇಸ್ ಆಗಿ ಬಳಸಿ. ಅದರ ಮೇಲೆ ಟೊಮೆಟೊ ಸಾಸ್ ಹಾಗೂ ಚೀಸ್ ಹರಡಿ. ಕ್ಯಾಪ್ಸಿಕಂ, ಆಲಿವ್, ಅಣಬೆಯಂತಹ ತರಾಕಾರಿಗಳನ್ನು ಸೇರಿಸಿ. ಚೀಸ್ ಕರಗುವ ತನಕ ಬೇಯಿಸಿದರೆ, ಸರಳ ಸ್ನ್ಯಾಕ್ಸ್ ಸಿದ್ಧ.(pixabay)
(4 / 6)
ಉತ್ತಪ್ಪಂ ಪಿಜ್ಜಾ: ಮಕ್ಕಳಿಗೆ ಆಧುನಿಕ ಶೈಲಿಯ ಪಾಶ್ಚಿಮಾತ್ಯ ಆಹಾರವೆಂದರೆ ಬಾಯಿಗೆ ರುಚಿ. ನೋಡಲು ಕಣ್ಣಿಗೆ ಹಿತವಾಗಿ ಕಾಣಬೇಕು. ಹೀಗಾಗಿ ಪಿಜ್ಜಾದಂತೆ ಕಾಣುವ ಉತ್ತಪ್ಪವನ್ನು ನೀವು ಸುಲಭವಾಗಿ ಮಾಡಬಹುದು. ಇದನ್ನು ಮಾಡುವ ವಿಧಾನ ಕೂಡಾ ಸುಲಭ. ಒಂದು ಚಮಚ ಆಲಿವ್ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ ಸೇರಿಸಿ ಹುರಿಯಬೇಕು. ಇದರೊಂದಿಗೆ ಉಳಿದ ತರಕಾರಿಗಳನ್ನು ಸೇರಿಸಿ ಮತ್ತೆ 2 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಹುರಿಯಿರಿ. ಉಪ್ಪು, ಕಾಳುಮೆಣಸು, ಓರೆಗಾನೊ ಮತ್ತು ಚಿಲ್ಲಿ ಫ್ಲೇಕ್ಸ್ ಸೇರಿಸಿ. ಈ ಮಿಶ್ರಣವನ್ನು ಬದಿಗಿಡಿ. ನಂತರ ಉತ್ತಪ್ಪ ಮಾಡುವ ಪ್ಯಾನ್‌ಗೆ ಇಡ್ಲಿ ಹಿಟ್ಟನ್ನು ಉತ್ತಪ್ಪದಂತೆ ದಪ್ಪವಾಗಿ ಹರಡಿ. ದೋಸೆಯನ್ನು ಎರಡೂ ಕಡೆ ಬೇಯಿಸಿ. ಬಳಿಕ ಫ್ಲೇಮ್ ಆಫ್ ಮಾಡಿ. ಪಿಜ್ಜಾ ಸಾಸ್, ಚೀಸ್, ಮತ್ತು ಮಾಡಿಟ್ಟ ಮಿಶ್ರಣವನ್ನು ಅದರ ಮೇಲೆ ಹರಡಿ. 2 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
(5 / 6)
ಯೋಗರ್ಟ್ ಹಣ್ಣಿನ ಸಲಾಡ್: ಸ್ಟ್ರಾಬೆರೀಸ್, ಕಲ್ಲಂಗಡಿ, ದ್ರಾಕ್ಷಿ ಮತ್ತು ಸೇಬು ಹಣ್ಣು ಸೇರಿದಂತೆ ಬಣ್ಣಬಣ್ಣದ ಹಣ್ಣುಗಳ ಸಲಾಡ್ ತಯಾರಿಸಿ. ಒಂದು ಸಣ್ಣ ಮೊಸರು(ಯೋಗರ್ಟ್) ಪಾತ್ರೆಯಲ್ಲಿ ಹಾಕಿ ಅದಕ್ಕೆ ಜೇನುತುಪ್ಪದ ಹನಿಗಳನ್ನು ಹಾಕಿ. ಸರಳ ಮತ್ತು ರುಚಿಯಾದ ಸ್ನ್ಯಾಕ್ಸ್ ಸಿದ್ಧ.
ಇತರ ಗ್ಯಾಲರಿಗಳು