ನಿಮಗೆ ಥೈರಾಯ್ಡ್ ಸಮಸ್ಯೆ ಇರಬಹುದು ಅನ್ಸಿದ್ರೆ ಉಗುರುಗಳನ್ನು ಗಮನಿಸಿ; ಉಗುರು ಸೂಚಿಸುವ ಥೈರಾಯ್ಡ್ ಲಕ್ಷಣಗಳಿವು
- Thyroid Nail Symptoms:ಥೈರಾಯಿಡ್ ಸಮಸ್ಯೆ ನನ್ನನ್ನು ಕಾಡುತ್ತಿರಬಹುದು ಎಂದು ನಿಮಗೆ ಅನ್ನಿಸಿದ್ರೆ, ಉಗುರುಗಳನ್ನು ಸರಿಯಾಗಿ ಗಮನಿಸಿ. ಉಗುರಿನ ಈ ಕೆಲವು ಗುಣಲಕ್ಷಣಗಳು ಥೈರಾಯಿಡ್ ಸೂಚಕವಾಗಿವೆ. ಇದನ್ನು ಗಮನಿಸುವ ಮೂಲಕ ನಿಮಗೆ ಥೈರಾಯಿಡ್ ಸಮಸ್ಯೆ ಇರುವುದು ಹೌದೋ ಅಲ್ಲವೋ ಎಂದು ತಿಳಿದುಕೊಳ್ಳಬಹುದು.
- Thyroid Nail Symptoms:ಥೈರಾಯಿಡ್ ಸಮಸ್ಯೆ ನನ್ನನ್ನು ಕಾಡುತ್ತಿರಬಹುದು ಎಂದು ನಿಮಗೆ ಅನ್ನಿಸಿದ್ರೆ, ಉಗುರುಗಳನ್ನು ಸರಿಯಾಗಿ ಗಮನಿಸಿ. ಉಗುರಿನ ಈ ಕೆಲವು ಗುಣಲಕ್ಷಣಗಳು ಥೈರಾಯಿಡ್ ಸೂಚಕವಾಗಿವೆ. ಇದನ್ನು ಗಮನಿಸುವ ಮೂಲಕ ನಿಮಗೆ ಥೈರಾಯಿಡ್ ಸಮಸ್ಯೆ ಇರುವುದು ಹೌದೋ ಅಲ್ಲವೋ ಎಂದು ತಿಳಿದುಕೊಳ್ಳಬಹುದು.
(1 / 6)
ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಥೈರಾಯ್ಡ್ ಕೂಡ ಒಂದು. ಇದು ಮಹಿಳೆಯರು ಹಾಗೂ ಪುರುಷರು ಇಬ್ಬರಲ್ಲೂ ಕಾಣಿಸುತ್ತದೆ. ಆದರೆ ಮಹಿಳೆಯರಲ್ಲಿ ಸಮಸ್ಯೆ ಹೆಚ್ಚು. ಈ ರೋಗದ ಆರಂಭಿಕ ಲಕ್ಷಣಗಳು ಸುಲಭವಾಗಿ ಅರ್ಥವಾಗದ ಕಾರಣ, ಅದಕ್ಕೆ ಚಿಕಿತ್ಸೆ ಪಡೆಯುವುದು ಸ್ವಲ್ಪ ತಡವಾಗುತ್ತದೆ. ಆದರೆ ಕೆಲವು ಸರಳ ರೋಗಲಕ್ಷಣಗಳಿಂದ ಈ ರೋಗವನ್ನು ಗುರುತಿಸಲು ಸಾಧ್ಯವಿದೆ. ಇವುಗಳಲ್ಲಿ ಉಗುರಿನಲ್ಲಿ ಗೋಚರವಾಗುವ ಲಕ್ಷಣಗಳು ಪ್ರಮುಖವಾದದ್ದು.
(2 / 6)
ಥೈರಾಯ್ಡ್ ಗ್ರಂಥಿಯು ಶ್ವಾಸನಾಳದ ಮುಂಭಾಗದಲ್ಲಿದೆ. ಈ ಗ್ರಂಥಿಯು ಚಿಟ್ಟೆಯಾಕಾರದಲ್ಲಿರುತ್ತದೆ. ಥೈರಾಯ್ಡ್ ಗ್ರಂಥಿಯಿಂದ ಸ್ರವಿಸುವ ಹಾರ್ಮೋನುಗಳು ದೇಹದ ವಿವಿಧ ಕಾರ್ಯಗಳನ್ನು ನಿಯಂತ್ರಿಸುತ್ತವೆ. ಚಯಾಪಚಯ ಕ್ರಿಯೆ, ಬೌದ್ಧಿಕ ಬೆಳವಣಿಗೆ, ಪ್ರೌಢಾವಸ್ಥೆಯ ಲಕ್ಷಣಗಳು, ಮಹಿಳೆಯರಲ್ಲಿ ಋತುಚಕ್ರ, ಗರ್ಭಧಾರಣೆ ಇತ್ಯಾದಿ.
(3 / 6)
ಥೈರಾಯ್ಡ್ ಹಾರ್ಮೋನುಗಳಲ್ಲಿ ಎರಡು ವಿಧಗಳಿವೆ. T3 ಮತ್ತು T4. ಥೈರಾಯ್ಡ್ ಸಮಸ್ಯೆಗಳಲ್ಲಿ ಎರಡು ವಿಧಗಳಿವೆ. ಹೈಪರ್ ಥೈರಾಯ್ಡಿಸಮ್, ರಕ್ತದಲ್ಲಿ ಸ್ರವಿಸುವ ಥೈರಾಯ್ಡ್ ಹಾರ್ಮೋನ್ ಪ್ರಮಾಣವು ಹೆಚ್ಚಾಗುತ್ತದೆ. ಇನ್ನೊಂದು ಹೈಪೋಥೈರಾಯ್ಡಿಸಮ್, ಇದರಲ್ಲಿ ರಕ್ತದಲ್ಲಿ ಸ್ರವಿಸುವ ಥೈರಾಯ್ಡ್ ಹಾರ್ಮೋನ್‌ನ ಪ್ರಮಾಣವು ಕಡಿಮೆಯಾಗುತ್ತದೆ.
(4 / 6)
ಥೈರಾಯ್ಡ್ ಸಮಸ್ಯೆ ಉಂಟಾದಾಗ ಆಯಾಸ, ತೂಕ ಹೆಚ್ಚಾಗುವುದು, ಶೀತ, ಕೂದಲು ಉದುರುವಿಕೆ ಮುಂತಾದ ಕೆಲವು ಲಕ್ಷಣಗಳು ಕಾಣಿಸುತ್ತವೆ. ಹಾಗೆಯೇ ಥೈರಾಯ್ಡ್ ಪರಿಣಾಮದಿಂದ ಉಗುರುಗಳಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ನೀವು ಅದರತ್ತ ಗಮನ ಹರಿಸಿದರೆ, ಆರಂಭದಲ್ಲೇ ಈ ಸಮಸ್ಯೆಯನ್ನು ಹಿಡಿಯಲು ಸಾಧ್ಯವಿದೆ.
(5 / 6)
ಉದಾಹರಣೆಗೆ, ದೀರ್ಘಕಾಲದವರೆಗೆ ಉಗುರುಗಳು ಬೆಳೆಯದೇ ಇರುವುದು ಮತ್ತು ಆಗಾಗ ಉಗುರು ತುಂಡಾಗುವುದು ಥೈರಾಯ್ಡ್ ರೋಗಲಕ್ಷಣಗಳಲ್ಲಿ ಒಂದಾಗಿದೆ. ಹೈಪೋಥೈರಾಯ್ಡಿಸಮ್‌ನಿಂದ ದೇಹದ ಎಲ್ಲಾ ಕಾರ್ಯಗಳು ನಿಧಾನಗೊಳ್ಳುತ್ತವೆ. ಇದು ಉಗುರುಗಳ ಮೇಲೂ ಪರಿಣಾಮ ಬೀರುತ್ತದೆ.
(6 / 6)
ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಷನ್ ಪ್ರಕಾರ, ಥೈರಾಯ್ಡ್ ದೇಹದ ಬೆವರು ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆ ಇದ್ದವರಿಗೆ ಬೆವರುವುದು ಕಡಿಮೆ. ಇದರೊಂದಿಗೆ ಉಗುರುಗಳು, ಕೂದಲು ಮತ್ತು ಚರ್ಮ ಹೆಚ್ಚು ಒಣಗುತ್ತದೆ. ಪರಿಣಾಮವಾಗಿ, ಕೂದಲು ಉದುರುವುದು, ಪದೇ ಪದೇ ಉಗುರುಗಳು ತುಂಡಾಗುವುದು ಮತ್ತು ಚರ್ಮ ಬಿರುಕಾಗುವುದು ಇಂತಹ ಸಮಸ್ಯೆಗಳು ಕಾಣಿಸಬಹುದು.
ಇತರ ಗ್ಯಾಲರಿಗಳು