Weight Loss: ಒಂದೇ ವಾರದಲ್ಲಿ ತೂಕ ಕಡಿಮೆ ಆಗ್ಬೇಕಾ, ಹಾಗಿದ್ರೆ 7 ದಿನ ಈ ಡಯೆಟ್ ಕ್ರಮ ಪಾಲಿಸಿ ನೋಡಿ
- ಇತ್ತೀಚಿನ ದಿನಗಳಲ್ಲಿ ಹಲವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವ್ಯಾಯಾಮದ ಜೊತೆಗೆ ಆಹಾರಕ್ರಮದ ಮೇಲೂ ಗಮನ ಹರಿಸಬೇಕು. ಒಂದೇ ವಾರದಲ್ಲಿ ತೂಕ ಇಳಿಬೇಕು ಅನ್ನೋ ಆಸೆ ನಿಮಗೂ ಇದ್ರೆ ಈ ಡಯೆಟ್ ಕ್ರಮವನ್ನು ನೀವೂ ಪಾಲಿಸಿ ನೋಡಿ.
- ಇತ್ತೀಚಿನ ದಿನಗಳಲ್ಲಿ ಹಲವರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವ್ಯಾಯಾಮದ ಜೊತೆಗೆ ಆಹಾರಕ್ರಮದ ಮೇಲೂ ಗಮನ ಹರಿಸಬೇಕು. ಒಂದೇ ವಾರದಲ್ಲಿ ತೂಕ ಇಳಿಬೇಕು ಅನ್ನೋ ಆಸೆ ನಿಮಗೂ ಇದ್ರೆ ಈ ಡಯೆಟ್ ಕ್ರಮವನ್ನು ನೀವೂ ಪಾಲಿಸಿ ನೋಡಿ.
(1 / 9)
ಆಹಾರತಜ್ಞರ ಪ್ರಕಾರ ಅವರ ಪ್ರಕಾರ ವೇಗವಾಗಿ ತೂಕ ಇಳಿಯಲು 7 ದಿನಗಳ ಈ ಡಯೆಟ್ ಪ್ಲಾನ್ ಪಾಲಿಸಬೇಕು. ಇದನ್ನು ಅನುಸರಿಸುವ ಮೂಲಕ ಬಹಳ ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಆ ಡಯೆಟ್ ಕ್ರಮ ಹೇಗಿರುತ್ತೆ ನೋಡಿ.
(2 / 9)
ಮೊದಲ ದಿನ ಉಪಾಹಾರಕ್ಕಾಗಿ ನೀವು ಓಟ್‌ಮೀಲ್ ತೆಗೆದುಕೊಳ್ಳಬಹುದು. ಮಧ್ಯಾಹ್ನದ ಊಟಕ್ಕೆ 100 ಗ್ರಾಂ ಯಾವುದೇ ತರಕಾರಿ ಜೊತೆಗೆ 100 ಮಿಲಿ ದಾಲ್, 30 ಗ್ರಾಂ ಬ್ರೌನ್ ರೈಸ್, 100 ಗ್ರಾಂ ಸಲಾಡ್ ಸೇವಿಸಬೇಕು. ಸಂಜೆ ಹೊತ್ತು ಗ್ರೀನ್ ಟೀ ಕುಡಿಯಬೇಕು ಹಾಗೂ 1 ಕಪ್ ನೆನೆಸಿದ ಬಾದಾಮಿ ತಿನ್ನಬೇಕು. ರಾತ್ರಿ ಊಟಕ್ಕೆ ಬೇಯಿಸಿದ ಚೀಸ್, 200 ಗ್ರಾಂ ಬೇಯಿಸಿದ ತರಕಾರಿ, 30 ಗ್ರಾ ಕ್ವಿನೋವಾ ತಿನ್ನಬೇಕು.
(3 / 9)
ಎರಡನೇ ದಿನ ಬೆಳಗಿನ ಉಪಾಹಾರಕ್ಕೆ 100 ಗ್ರಾಂ ಸಾಂಬಾರ್, 20ಗ್ರಾಂ ಟೊಮೆಟೊ ಪಚಡಿ ಜೊತೆ 100 ಗ್ರಾಂ ಇಡ್ಲಿ ಹಾಗೂ ಒಂದು ಲೋಟ ಮಜ್ಜಿಗೆ ಸೇವಿಸಿ. ಮಧ್ಯಾಹ್ನದ ಊಟಕ್ಕೆ 100 ಗ್ರಾಂ ಮಿಶ್ರ ತರಕಾರಿಗಳು, 100 ಗ್ರಾಂ ಗ್ರೀನ್ ಸಲಾಡ್, 2 ರೊಟ್ಟಿ ತಿನ್ನಿ. ಸಂಜೆ 1 ಕಪ್ ಮೊಸರಿನೊಂದಿಗೆ ಸ್ವಲ್ಪ ಅಗಸೆ ಬೀಜದ ಪುಡಿ ಬೆರೆಸಿ ತಿನ್ನಿ. ರಾತ್ರಿ ಊಟಕ್ಕೆ 50 ಗ್ರಾಂ ಪನೀರ್ ಟಿಕ್ಕಾ, 30 ಗ್ರಾಂ ಬ್ರೌನ್ ರೈಸ್ ಮತ್ತು 100 ಗ್ರಾಂ ಬೇಯಿಸಿದ ತರಕಾರಿಗಳು.
(4 / 9)
ಮೂರನೇ ದಿನ ಬೆಳಗಿನ ಉಪಾಹಾರಕ್ಕೆ ಒಂದು ಸಣ್ಣ ಪ್ಲೇಟ್ ತರಕಾರಿ ಅವಲಕ್ಕಿ ಹಾಗೂ 1 ಗ್ಲಾಸ್ ಹಣ್ಣಿನ ರಸ. ಮಧ್ಯಾಹ್ನದ ಊಟಕ್ಕೆ 1 ಬಟ್ಟಲು ತರಕಾರಿ ಬೇಳೆ ಸಂಬಾರ್, 2 ಗೋಧಿ ರೊಟ್ಟಿ ಮತ್ತು ಸಲಾಡ್, ಸಂಜೆ ಗ್ರೀನ್ ಟೀ ಜೊತೆ 20 ಗ್ರಾಂ ನೆನೆಸಿದ ವಾಲ್‌ನಟ್ ಸೇವಿಸಿ. ರಾತ್ರಿ ಊಟಕ್ಕೆ 100 ಗ್ರಾಂ ಬೇಯಿಸಿದ ತರಕಾರಿಗಳೊಂದಿಗೆ 100 ಗ್ರಾಂ ಬೇಯಿಸಿದ ಚೀಸ್, 100 ಗ್ರಾಂ ಕ್ವಿನೋವಾ ತಿನ್ನಬೇಕು.
(5 / 9)
ನಾಲ್ಕನೇ ದಿನ ಉಪಾಹಾರಕ್ಕೆ 100 ಗ್ರಾಂ ಓಟ್ ಚಿಲ್ಲಾ. ಮಧ್ಯಾಹ್ನದ ಊಟಕ್ಕೆ 100ಗ್ರಾಂ ಪಾಲಕ್ ಮತ್ತು ಸೋಯಾಬೀನ್ ತರಕಾರಿ, 2 ಗೋಧಿ ರೊಟ್ಟಿಗಳು, 100 ಗ್ರಾಂ ಸಲಾಡ್. ಸಂಜೆ ಒಂದು ಕಪ್ ಹಸಿರು ಚಹಾದೊಂದಿಗೆ ನೆನೆಸಿದ ಬಾದಾಮಿ ಒಂದು ಹಿಡಿ. ರಾತ್ರಿ ಊಟಕ್ಕೆ 100 ಗ್ರಾಂ ಲಘುವಾಗಿ ಹುರಿದ ತರಕಾರಿಗಳನ್ನು 1 ಸಣ್ಣ ಬೌಲ್ ಕ್ವಿನೋವಾ.
(6 / 9)
5ನೇ ದಿನ ಬೆಳಗಿನ ಉಪಾಹಾರಕ್ಕಾಗಿ 2 ಚಪಾತಿ ಪಲ್ಯ, ನೆನೆಸಿದ ಬೇಳೆಕಾಳು. ಸಂಜೆ 1 ಕಪ್ ಮೊಸರಿನೊಂದಿಗೆ ಸ್ವಲ್ಪ ಅಗಸೆ ಬೀಜದ ಪುಡಿ ಸೇರಿಸಿ ಸೇವಿಸಿ. ರಾತ್ರಿ ಊಟಕ್ಕೆ 200 ಗ್ರಾಂ ಬೇಯಿಸಿದ ತರಕಾರಿಗಳು, 30 ಗ್ರಾಂ ಬ್ರೌನ್ ರೈಸ್ ಜೊತೆ 50ಗ್ರಾಂ ಗ್ರಿಲ್ಡ್ ಚೀಸ್ ಸೇವಿಸಿ.
(7 / 9)
ಆರನೇ ದಿನ ಬೆಳಗಿನ ಉಪಾಹಾರಕ್ಕೆ ಗಂಜಿ ಮತ್ತು ಮಜ್ಜಿಗೆ. ಮಧ್ಯಾಹ್ನದ ಊಟಕ್ಕೆ 100 ಗ್ರಾಂ ಮಿಶ್ರ ತರಕಾರಿಗಳೊಂದಿಗೆ 2 ಗೋಧಿ ರೊಟ್ಟಿ ಮತ್ತು ಸಲಾಡ್. ಸಂಜೆ 1 ಕಪ್ ಮೊಸರಿನಲ್ಲಿ ಸ್ವಲ್ಪ ಅಗಸೆ ಬೀಜದ ಪುಡಿ ಸೇರಿಸಿ ತಿನ್ನಬಹುದು. ರಾತ್ರಿ ಊಟಕ್ಕೆ 100 ಗ್ರಾಂ ಬೇಯಿಸಿದ ತರಕಾರಿಗಳು, 30 ಗ್ರಾಂ ಬ್ರೌನ್ ರೈಸ್, 75 ಗ್ರಾಂ ಬೇಯಿಸಿದ ಚೀಸ್ ಸೇವಿಸಿ.
(8 / 9)
ಏಳನೇ ದಿನ ಚಟ್ನಿಯೊಂದಿಗೆ 1 ಸಾದಾ ಗೋಧಿ ದೋಸೆ, ಬೆಳಗಿನ ಉಪಾಹಾರಕ್ಕೆ 1 ಗ್ಲಾಸ್ ತಾಜಾ ಹಣ್ಣಿನ ರಸ, ಮಧ್ಯಾಹ್ನದ ಊಟಕ್ಕೆ ಒಂದು ಬೌಲ್ ದಾಲ್ ತಡ್ಕಾ, 2 ಗೋಧಿ ರೊಟ್ಟಿ, 100 ಗ್ರಾಂ ಸಲಾಡ್. ಸಂಜೆ ಒಂದು ಕಪ್ ಗ್ರೀನ್ ಟೀ ಜೊತೆ ನೆನೆಸಿಟ್ಟ 20ಗ್ರಾಂ ವಾಲ್‌ನಟ್ ಸೇವಿಸಿ. ರಾತ್ರಿ ಊಟಕ್ಕೆ 100 ಗ್ರಾಂ ಸ್ವಲ್ಪ ಹುರಿದ ತರಕಾರಿಗಳು ಹಾಗೂ 1 ಸಣ್ಣ ಬೌಲ್ ಕ್ವಿನೋವಾ.
ಇತರ ಗ್ಯಾಲರಿಗಳು