Weight Loss Tips : ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ, ತೂಕ ಇಳಿಸೋದು ಹೇಗೆಂಬ ಚಿಂತೆಯೇ, ಅಡುಗೆ ಮನೆಯಲ್ಲಿರುವ ಈ 5 ಮಸಾಲೆ ಪದಾರ್ಥ ಬಳಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Weight Loss Tips : ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ, ತೂಕ ಇಳಿಸೋದು ಹೇಗೆಂಬ ಚಿಂತೆಯೇ, ಅಡುಗೆ ಮನೆಯಲ್ಲಿರುವ ಈ 5 ಮಸಾಲೆ ಪದಾರ್ಥ ಬಳಸಿ

Weight Loss Tips : ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ, ತೂಕ ಇಳಿಸೋದು ಹೇಗೆಂಬ ಚಿಂತೆಯೇ, ಅಡುಗೆ ಮನೆಯಲ್ಲಿರುವ ಈ 5 ಮಸಾಲೆ ಪದಾರ್ಥ ಬಳಸಿ

ತೂಕ ಇಳಿಸುವುದು ಹೇಗೆ, ಹೊಟ್ಟೆ ಕೊಬ್ಬು ಕರಗಿಸುವುದು ಹೇಗೆ ಎಂಬ ಚಿಂತೆಯೇ, ವ್ಯಾಯಾಮ ನಿಯತವಾಗಿದ್ದರೂ, ಪರಿಣತರ ಸಲಹೆ ಪಡೆದು ಆಹಾರ ಕ್ರಮದ ಕಡೆಗೂ ಗಮನಹರಿಸಬಹುದು. ನಿತ್ಯ ಬಳಕೆಯ ದಾಲ್ಚಿನ್ನಿಯಿಂದ ಹಿಡಿದು ಕಾಳುಮೆಣಸಿನ ತನಕ 5 ಮಸಾಲೆ ಪದಾರ್ಥಗಳು ತೂಕ ಇಳಿಕೆಗೆ, ಹೊಟ್ಟೆ ಕೊಬ್ಬು ಕರಗಿಸಲು ನೆರವಾಗಬಹುದು. 

ತೂಕ ಇಳಿಸುವ ಕಸರತ್ತು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವಂಥದ್ದು ಇದು. ತೂಕ ನಷ್ಟ ಮತ್ತು ಕ್ಯಾಲೊರಿ ನಿರ್ವಹಣೆಗಾಗಿ ಹಲವು ಮಸಾಲೆ ಪದಾರ್ಥಗಳು, ಗಿಡಮೂಲಿಕೆಗಳನ್ನು ಬಳಸುತ್ತ ಬಂದಿದ್ದಾರೆ. ಅವುಗಳ ಪೈಕಿ 5 ಮಸಾಲೆ ಪದಾರ್ಥಗಳನ್ನು ಸೂಚಿಸಿದ್ದಾರೆ ಡಯೆಟಿಷಿಯನ್‌ ವಿಧಿ ಚಾವ್ಲಾ. 
icon

(1 / 6)

ತೂಕ ಇಳಿಸುವ ಕಸರತ್ತು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವಂಥದ್ದು ಇದು. ತೂಕ ನಷ್ಟ ಮತ್ತು ಕ್ಯಾಲೊರಿ ನಿರ್ವಹಣೆಗಾಗಿ ಹಲವು ಮಸಾಲೆ ಪದಾರ್ಥಗಳು, ಗಿಡಮೂಲಿಕೆಗಳನ್ನು ಬಳಸುತ್ತ ಬಂದಿದ್ದಾರೆ. ಅವುಗಳ ಪೈಕಿ 5 ಮಸಾಲೆ ಪದಾರ್ಥಗಳನ್ನು ಸೂಚಿಸಿದ್ದಾರೆ ಡಯೆಟಿಷಿಯನ್‌ ವಿಧಿ ಚಾವ್ಲಾ. (Image by Bruno from Pixabay)

1. ದಾಲ್ಚಿನ್ನಿ: ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿರ್ವಹಣೆಯ ವಿಚಾರದಲ್ಲಿ ಅದ್ಭುತಗಳನ್ನು ಮಾಡಬಲ್ಲದು ದಾಲ್ಚಿನ್ನಿ.  ಏಕೆಂದರೆ ಈ ದಾಲ್ಚಿನ್ನಿಯಲ್ಲಿರುವ ನೈಸರ್ಗಿಕ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
icon

(2 / 6)

1. ದಾಲ್ಚಿನ್ನಿ: ರಕ್ತದಲ್ಲಿನ ಸಕ್ಕರೆಯ ಮಟ್ಟದ ನಿರ್ವಹಣೆಯ ವಿಚಾರದಲ್ಲಿ ಅದ್ಭುತಗಳನ್ನು ಮಾಡಬಲ್ಲದು ದಾಲ್ಚಿನ್ನಿ.  ಏಕೆಂದರೆ ಈ ದಾಲ್ಚಿನ್ನಿಯಲ್ಲಿರುವ ನೈಸರ್ಗಿಕ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.(Unsplash)

2. ಅರಿಶಿನ: ಕರ್ಕ್ಯುಮಿನ್ ಎಂಬ ಶಕ್ತಿಯುತ ಸಂಯುಕ್ತವನ್ನು ಅರಶಿನವು ಹೊಂದಿದೆ, ಇದು ಉರಿಯೂತಕ್ಕೆ ಅತ್ಯುತ್ತಮ ಔಷಧೀಯ ಪರಿಹಾರವಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ. ಅದಲ್ಲದೇ, ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಅದೇ ರೀತಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಳಕ್ಕೆ ಕಾರಣವಾಗುವ ಉರಿಯೂತವನ್ನು ನಿಯಂತ್ರಿಸಲು ಕರ್ಕ್ಯುಮಿನ್‌ ಸಹಾಯ ಮಾಡುತ್ತದೆ. ಹೀಗಾಗಿ ಅರಶಿನದ ನಿಯತ ಸೇವನೆಯಿಂದ ಬೊಜ್ಜು ಬರದಂತೆ ತಡೆಯಬಹುದು
icon

(3 / 6)

2. ಅರಿಶಿನ: ಕರ್ಕ್ಯುಮಿನ್ ಎಂಬ ಶಕ್ತಿಯುತ ಸಂಯುಕ್ತವನ್ನು ಅರಶಿನವು ಹೊಂದಿದೆ, ಇದು ಉರಿಯೂತಕ್ಕೆ ಅತ್ಯುತ್ತಮ ಔಷಧೀಯ ಪರಿಹಾರವಾಗಿ ದೀರ್ಘಕಾಲದಿಂದ ಗುರುತಿಸಲ್ಪಟ್ಟಿದೆ. ಅದಲ್ಲದೇ, ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಅದೇ ರೀತಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೂಕ ಹೆಚ್ಚಳಕ್ಕೆ ಕಾರಣವಾಗುವ ಉರಿಯೂತವನ್ನು ನಿಯಂತ್ರಿಸಲು ಕರ್ಕ್ಯುಮಿನ್‌ ಸಹಾಯ ಮಾಡುತ್ತದೆ. ಹೀಗಾಗಿ ಅರಶಿನದ ನಿಯತ ಸೇವನೆಯಿಂದ ಬೊಜ್ಜು ಬರದಂತೆ ತಡೆಯಬಹುದು(Unsplash)

3. ಶುಂಠಿ : ಇದು ಜೀರ್ಣ ಕ್ರಿಯೆಗೆ ಸಂಬಂಧಿಸಿದ ಮಸಾಲೆ ಪದಾರ್ಥ. ಪುರಾತನ ಕಾಲದಿಂದಲೂ ಅಡುಗೆಯ ಭಾಗವಾಗಿ ಬಳಕೆಯಲ್ಲಿದೆ. ಶುಂಠಿಯು ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ವಿಷ ತೆಗೆಯಬಲ್ಲ ಔಷಧವಾಗಿ ಪರಿಗಣಿಸಲ್ಪಟ್ಟಿದೆ. 
icon

(4 / 6)

3. ಶುಂಠಿ : ಇದು ಜೀರ್ಣ ಕ್ರಿಯೆಗೆ ಸಂಬಂಧಿಸಿದ ಮಸಾಲೆ ಪದಾರ್ಥ. ಪುರಾತನ ಕಾಲದಿಂದಲೂ ಅಡುಗೆಯ ಭಾಗವಾಗಿ ಬಳಕೆಯಲ್ಲಿದೆ. ಶುಂಠಿಯು ಚಯಾಪಚಯವನ್ನು ಹೆಚ್ಚಿಸಲು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ವಿಷ ತೆಗೆಯಬಲ್ಲ ಔಷಧವಾಗಿ ಪರಿಗಣಿಸಲ್ಪಟ್ಟಿದೆ. (Pixabay)

4. ಕರಿಮೆಣಸು (ಕಾಳು ಮೆಣಸು): ಕರಿಮೆಣಸು ಆಹಾರದ ಪರಿಮಳವನ್ನು ಹೆಚ್ಚಿಸಲು ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೈಪರಿನ್ ಎಂಬ ಸಂಯುಕ್ತವು ಕೊಬ್ಬಿನ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.
icon

(5 / 6)

4. ಕರಿಮೆಣಸು (ಕಾಳು ಮೆಣಸು): ಕರಿಮೆಣಸು ಆಹಾರದ ಪರಿಮಳವನ್ನು ಹೆಚ್ಚಿಸಲು ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೈಪರಿನ್ ಎಂಬ ಸಂಯುಕ್ತವು ಕೊಬ್ಬಿನ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.(Pixabay)

5. ಸಾಸಿವೆ: ಅಡುಗೆಯಲ್ಲಿ ಕೊನೆಗೊಂದು ಸಾಸಿವೆ ಒಗ್ಗರಣೆ ಕೊಡದೇ ಇದ್ದರೆ, ಸಾರು, ಸಾಂಬಾರಿನ ಪರಿಮಳಕ್ಕೆ ಶಕ್ತಿ, ರುಚಿ ಎರಡೂ ಇರಲ್ಲ. ಅಷ್ಟರ ಮಟ್ಟಿಗೆ ಸಾಸಿವೆ ನಿತ್ಯಬದುಕಿನೊಳಗೆ ಮಿಳಿತವಾಗಿದೆ. ಸಾಸಿವೆಯು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ  ಕ್ಯಾಲೊರಿಗಳನ್ನು ಸುಡುವಲ್ಲಿ ನೆರವಾಗುತ್ತದೆ.
icon

(6 / 6)

5. ಸಾಸಿವೆ: ಅಡುಗೆಯಲ್ಲಿ ಕೊನೆಗೊಂದು ಸಾಸಿವೆ ಒಗ್ಗರಣೆ ಕೊಡದೇ ಇದ್ದರೆ, ಸಾರು, ಸಾಂಬಾರಿನ ಪರಿಮಳಕ್ಕೆ ಶಕ್ತಿ, ರುಚಿ ಎರಡೂ ಇರಲ್ಲ. ಅಷ್ಟರ ಮಟ್ಟಿಗೆ ಸಾಸಿವೆ ನಿತ್ಯಬದುಕಿನೊಳಗೆ ಮಿಳಿತವಾಗಿದೆ. ಸಾಸಿವೆಯು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ  ಕ್ಯಾಲೊರಿಗಳನ್ನು ಸುಡುವಲ್ಲಿ ನೆರವಾಗುತ್ತದೆ.(depositphoto)


ಇತರ ಗ್ಯಾಲರಿಗಳು