ಕನ್ನಡ ಸುದ್ದಿ  /  Photo Gallery  /  Health Steps To Build Better Relationship With Yourself Every Day Personal Growth Wellness Tips In Kannada Pcp

Wellness: ನಿಮ್ಮೊಂದಿಗೆ ನಿಮ್ಮ ಸಂಬಂಧ ಅತ್ಯುತ್ತಮವಾಗಿರಲಿ, ಸ್ವಯಂ ಅನುಬಂಧಕ್ಕೆ ಇಲ್ಲಿದೆ ಅಮೂಲ್ಯ ಸಲಹೆಗಳು

  • Personal growth: ನಿಮ್ಮ ಆರೋಗ್ಯಕ್ಕೆ, ವೈಯಕ್ತಿಕ ಪ್ರಗತಿಗೆ ನಿಮ್ಮ ಜತೆಗಿನ ನಿಮ್ಮ ಸಂಬಂಧ ಅತ್ಯುತ್ತಮವಾಗಿರುವುದು ಅತ್ಯಂತ ಅಗತ್ಯ. ಸ್ವಯಂ ಪ್ರೀತಿ ಹೆಚ್ಚಿಸಿಕೊಳ್ಳಲು ಇಲ್ಲೊಂದಿಷ್ಟು ಸಲಹೆಗಳಿವೆ.

ನಿಮ್ಮನ್ನು ನೀವು ಒಪ್ಪಿಕೊಳ್ಳಿ: ನೀವು ಹೇಗಿರುವಿರೋ ಹಾಗೆ ಒಪ್ಪಿಕೊಳ್ಳಲು ಕಲಿಯಿರಿ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಒಪ್ಪಿಕೊಳ್ಳಿ. ನಿಮ್ಮಲ್ಲಿರುವ ಅಡೆತಡೆಗಳು, ಕೊರತೆಗಳನ್ನು ಒಪ್ಪಿಕೊಳ್ಳಿ. ಯಾರೂ ಕೂಡ ಪರ್ಫೆಕ್ಟ್‌ ಅಲ್ಲ ಅನ್ನೋದು ತಿಳಿದಿರಿ. ನಿಮ್ಮನ್ನು ನೀವು ಪ್ರೀತಿಯಿಂದ, ಆತ್ಮೀಯತೆಯಿಂದ ನೋಡಿಕೊಳ್ಳಿ. 
icon

(1 / 6)

ನಿಮ್ಮನ್ನು ನೀವು ಒಪ್ಪಿಕೊಳ್ಳಿ: ನೀವು ಹೇಗಿರುವಿರೋ ಹಾಗೆ ಒಪ್ಪಿಕೊಳ್ಳಲು ಕಲಿಯಿರಿ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಒಪ್ಪಿಕೊಳ್ಳಿ. ನಿಮ್ಮಲ್ಲಿರುವ ಅಡೆತಡೆಗಳು, ಕೊರತೆಗಳನ್ನು ಒಪ್ಪಿಕೊಳ್ಳಿ. ಯಾರೂ ಕೂಡ ಪರ್ಫೆಕ್ಟ್‌ ಅಲ್ಲ ಅನ್ನೋದು ತಿಳಿದಿರಿ. ನಿಮ್ಮನ್ನು ನೀವು ಪ್ರೀತಿಯಿಂದ, ಆತ್ಮೀಯತೆಯಿಂದ ನೋಡಿಕೊಳ್ಳಿ. (Unsplash)

ಸ್ವಯಂ ಕಾಳಜಿಗೆ ಆದ್ಯತೆ ನೀಡಿ: ನಿಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ವಾಸ್ಥ್ಯದ ಕುರಿತು ಕಾಳಜಿ ಇರಲಿ. ನಿಮಗೆ ಶಕ್ತಿ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿ. ವ್ಯಾಯಾಮ, ಸಾಕಷ್ಟು ನಿದ್ದೆ ಇತ್ಯಾದಿಗಳಿಗೆ ಗಮನ ನೀಡಿ. ನಿಮಗೆ ಖುಷಿ ನೀಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಭಾವನಾತ್ಮಕ ಅವಶ್ಯಕತೆಗಳ ಕುರಿತು ಗಮನ ನೀಡಿ. ಧ್ಯಾನ, ಯೋಗ, ಪ್ರವಾಸ ಇತ್ಯಾದಿಗಳಿಗೆ ಗಮನ ನೀಡಿ. 
icon

(2 / 6)

ಸ್ವಯಂ ಕಾಳಜಿಗೆ ಆದ್ಯತೆ ನೀಡಿ: ನಿಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ವಾಸ್ಥ್ಯದ ಕುರಿತು ಕಾಳಜಿ ಇರಲಿ. ನಿಮಗೆ ಶಕ್ತಿ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿ. ವ್ಯಾಯಾಮ, ಸಾಕಷ್ಟು ನಿದ್ದೆ ಇತ್ಯಾದಿಗಳಿಗೆ ಗಮನ ನೀಡಿ. ನಿಮಗೆ ಖುಷಿ ನೀಡುವ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಭಾವನಾತ್ಮಕ ಅವಶ್ಯಕತೆಗಳ ಕುರಿತು ಗಮನ ನೀಡಿ. ಧ್ಯಾನ, ಯೋಗ, ಪ್ರವಾಸ ಇತ್ಯಾದಿಗಳಿಗೆ ಗಮನ ನೀಡಿ. (Unsplash)

ಆರೋಗ್ಯಕರ ಸಂಬಂಧ: ಇತರರ ಜತೆಗೆ ಆರೋಗ್ಯಕರ ಸಂಬಂಧ ಹೊಂದಿರಿ ಇದೇ ರೀತಿ ನಿಮ್ಮ ಜತೆಗಿನ ಸಂಬಂಧವೂ ಆರೋಗ್ಯಕರವಾಗಿರಲಿ. ನಿಮ್ಮ ಮಿತಿ, ಅವಶ್ಯಕತೆ, ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ಅಗತ್ಯ ಬಿದ್ದಾಗ ಇತರರಿಗೆ ನೋ ಎಂದು ಹೇಳಿರಿ.  
icon

(3 / 6)

ಆರೋಗ್ಯಕರ ಸಂಬಂಧ: ಇತರರ ಜತೆಗೆ ಆರೋಗ್ಯಕರ ಸಂಬಂಧ ಹೊಂದಿರಿ ಇದೇ ರೀತಿ ನಿಮ್ಮ ಜತೆಗಿನ ಸಂಬಂಧವೂ ಆರೋಗ್ಯಕರವಾಗಿರಲಿ. ನಿಮ್ಮ ಮಿತಿ, ಅವಶ್ಯಕತೆ, ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ಅಗತ್ಯ ಬಿದ್ದಾಗ ಇತರರಿಗೆ ನೋ ಎಂದು ಹೇಳಿರಿ.  (Unsplash)

ಸ್ವಯಂ ಪ್ರತಿಫಲನ: ನಿಮ್ಮ ಆಲೋಚನೆಗಳು, ಭಾವನೆಗಳು ವರ್ತನೆಗಳು ನಿಮ್ಮನ್ನು ಪ್ರತಿಫಲಿಸುತ್ತವೆ. ನಿಮ್ಮ ಆಂತರಿಕ ಜಗತ್ತನ್ನು ಅತ್ಯುತ್ತಮವಾಗಿಸಲು ಪ್ರಯತ್ನಿಸಿ. ನಿಮ್ಮನ್ನು ನೀವು ಅರ್ಥಮಾಡಿಕೊಂಡು ಮುಂದುವರೆಯಿರಿ. ನಿಮ್ಮೊಳಗೆ ಅತ್ಯುತ್ತಮ ಮೌಲ್ಯಗಳನ್ನು ಬೆಳೆಸಿ.
icon

(4 / 6)

ಸ್ವಯಂ ಪ್ರತಿಫಲನ: ನಿಮ್ಮ ಆಲೋಚನೆಗಳು, ಭಾವನೆಗಳು ವರ್ತನೆಗಳು ನಿಮ್ಮನ್ನು ಪ್ರತಿಫಲಿಸುತ್ತವೆ. ನಿಮ್ಮ ಆಂತರಿಕ ಜಗತ್ತನ್ನು ಅತ್ಯುತ್ತಮವಾಗಿಸಲು ಪ್ರಯತ್ನಿಸಿ. ನಿಮ್ಮನ್ನು ನೀವು ಅರ್ಥಮಾಡಿಕೊಂಡು ಮುಂದುವರೆಯಿರಿ. ನಿಮ್ಮೊಳಗೆ ಅತ್ಯುತ್ತಮ ಮೌಲ್ಯಗಳನ್ನು ಬೆಳೆಸಿ.(Unsplash)

ಸ್ವಯಂ ಸಹಾನುಭೂತಿಯನ್ನು ಬೆಳೆಸಿಕೊಳ್ಳಿ: ಆಪ್ತ ಸ್ನೇಹಿತರಿಗೆ ನೀವು ನೀಡುವ ಸಹಾನುಭೂತಿಯನ್ನು ನಿಮಗೆ ನೀವು ನೀಡಲು ಮರೆಯಬೇಡಿ. ಸವಾಲುಗಳು ಅಥವಾ ಹಿನ್ನಡೆಗಳನ್ನು ಎದುರಿಸುವಾಗ ನಿಮ್ಮೊಂದಿಗೆ ಸೌಮ್ಯವಾಗಿರಿ. ಕಠೋರವಾದ ಸ್ವಯಂ ಟೀಕೆಗೆ  ಬದಲಾಗಿ ನಿಮ್ಮನ್ನು ನೀವು ಸಹಾನುಭೂತಿಯಿಂದ ಸದಾ ಎಚ್ಚರಿಸಿ. 
icon

(5 / 6)

ಸ್ವಯಂ ಸಹಾನುಭೂತಿಯನ್ನು ಬೆಳೆಸಿಕೊಳ್ಳಿ: ಆಪ್ತ ಸ್ನೇಹಿತರಿಗೆ ನೀವು ನೀಡುವ ಸಹಾನುಭೂತಿಯನ್ನು ನಿಮಗೆ ನೀವು ನೀಡಲು ಮರೆಯಬೇಡಿ. ಸವಾಲುಗಳು ಅಥವಾ ಹಿನ್ನಡೆಗಳನ್ನು ಎದುರಿಸುವಾಗ ನಿಮ್ಮೊಂದಿಗೆ ಸೌಮ್ಯವಾಗಿರಿ. ಕಠೋರವಾದ ಸ್ವಯಂ ಟೀಕೆಗೆ  ಬದಲಾಗಿ ನಿಮ್ಮನ್ನು ನೀವು ಸಹಾನುಭೂತಿಯಿಂದ ಸದಾ ಎಚ್ಚರಿಸಿ. (Unsplash)

ಸ್ವಯಂ ಜಾಗೃತಿ ಬೆಳೆಸಿಕೊಳ್ಳಿ: ಸ್ವಯಂ ಅರಿವನ್ನು ಬೆಳೆಸಿಕೊಳ್ಳಿ: ವಿವಿಧ ಸಂದರ್ಭಗಳಲ್ಲಿ ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ಪ್ರತಿಕ್ರಿಯೆಗಳಿಗೆ ಗಮನ ಕೊಡಿ. ಸಾವಧಾನತೆಯನ್ನು ಅಭ್ಯಾಸ ಮಾಡಿಕೊಳದ್ಳಿ.  ನಿಮ್ಮ ಸ್ವಯಂ ಅರಿವನ್ನು ಹೆಚ್ಚಿಸಿಕೊಳ್ಳಿ. ಇದು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸೂಕ್ತವಾದ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. 
icon

(6 / 6)

ಸ್ವಯಂ ಜಾಗೃತಿ ಬೆಳೆಸಿಕೊಳ್ಳಿ: ಸ್ವಯಂ ಅರಿವನ್ನು ಬೆಳೆಸಿಕೊಳ್ಳಿ: ವಿವಿಧ ಸಂದರ್ಭಗಳಲ್ಲಿ ನಿಮ್ಮ ಆಲೋಚನೆಗಳು, ಭಾವನೆಗಳು ಮತ್ತು ಪ್ರತಿಕ್ರಿಯೆಗಳಿಗೆ ಗಮನ ಕೊಡಿ. ಸಾವಧಾನತೆಯನ್ನು ಅಭ್ಯಾಸ ಮಾಡಿಕೊಳದ್ಳಿ.  ನಿಮ್ಮ ಸ್ವಯಂ ಅರಿವನ್ನು ಹೆಚ್ಚಿಸಿಕೊಳ್ಳಿ. ಇದು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸೂಕ್ತವಾದ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ. (Unsplash)


ಇತರ ಗ್ಯಾಲರಿಗಳು