Dengue Prevention: ಹೆಚ್ಚುತ್ತಿರುವ ಡೆಂಗ್ಯೂ ನಿರ್ವಹಣೆ ಹೇಗೆ? ಚೇತರಿಕೆಗೆ 5 ಆಯುರ್ವೇದ ಟಿಪ್ಸ್ ಇಲ್ಲಿದೆ
- ಡೆಂಗ್ಯೂ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಸಮಗ್ರ ವಿಧಾನವನ್ನು ಹುಡುಕುತ್ತಿದ್ದೀರಾ? ಡೆಂಗ್ಯೂವಿನಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ 5 ಆಯುರ್ವೇದ ಪದಾರ್ಥಗಳು ಮತ್ತು ಪರಿಹಾರಗಳು ಇಲ್ಲಿವೆ.
- ಡೆಂಗ್ಯೂ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಸಮಗ್ರ ವಿಧಾನವನ್ನು ಹುಡುಕುತ್ತಿದ್ದೀರಾ? ಡೆಂಗ್ಯೂವಿನಿಂದ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುವ 5 ಆಯುರ್ವೇದ ಪದಾರ್ಥಗಳು ಮತ್ತು ಪರಿಹಾರಗಳು ಇಲ್ಲಿವೆ.
(1 / 9)
ಬೆಂಗಳೂರು ಸೇರಿದಂತೆ ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಈಡಿಸ್ ಈಜಿಪ್ಟಿ ಜಾತಿಯ ಹೆಣ್ಣು ಸೊಳ್ಳೆಗಳು ಕಚ್ಚಿದರೆ ಡೆಂಗ್ಯೂ ಜ್ವರ ಬರುತ್ತದೆ. ತಾಪಮಾನ, ಮಳೆಯಂತಹ ಸಂದರ್ಭಗಳಲ್ಲಿ ಈ ರೋಗ ವೇಗವಾಗಿ ಹರಡುತ್ತದೆ.
(2 / 9)
ಡೆಂಗ್ಯೂ ಜ್ವರದ ಸಾಮಾನ್ಯ ಲಕ್ಷಣಗಳು ವಾಂತಿ, ತೀವ್ರ ತಲೆನೋವು, ವಾಕರಿಕೆ, ಚರ್ಮದ ದದ್ದುಗಳು, ಕೀಲು ನೋವು, ಕಣ್ಣುಗಳ ಹಿಂದೆ ನೋವು ಹಾಗೂ ಸ್ನಾಯುಗಳ ನೋವು. ಡೆಂಗ್ಯೂಗೆ ತಕ್ಷಣಕ್ಕೆ ಚಿಕಿತ್ಸೆ ಪಡೆಯುವ ಅಗತ್ಯವಿರುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯ ಇರುತ್ತದೆ.
(3 / 9)
ಡೆಂಗ್ಯೂಗೆ ಆಯುರ್ವೇದದಲ್ಲಿ ಕೆಲವು ಪರಿಹಾರಗಳಿವೆ. ಜ್ವರದಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ. ಚೇತರಿಕೆಯ ವೇಗವನ್ನು ಹೆಚ್ಚಿಸಲು ಆಯುರ್ವೇದದ ಚಿಕಿತ್ಸೆಯನ್ನು ಪ್ರಯತ್ನಿಸಬಹುದು.
(4 / 9)
ಎಳೆನೀರು - ಆರೋಗ್ಯ, ಚರ್ಮವನ್ನು ಆರೋಗ್ಯಕರವಾಗಿಡಲು ಎಳೆನೀರು ಸಹಾಯ ಮಾಡುತ್ತದೆ. ದೇಹದಲ್ಲಿ ನಿರ್ಜಲೀಕರಣವನ್ನು ಉತ್ತೇಜಿಸುವುದಿಲ್ಲ. ಆದ್ದರಿಂದ ಇದನ್ನು ಖಂಡಿತವಾಗಿ ನಿಮ್ಮ ಆಹಾರದ ಭಾಗವಾಗಿ ಸೇರಿಸಿಕೊಳ್ಳಿ
(5 / 9)
ಮೆಂತ್ಯ ನೀರು - ಇದು ಶಕ್ತಿಯುತವಾದ ನೋವು ನಿವಾರಕವಾಗಿದೆ. ರಾತ್ರಿ ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ಫಿಲ್ಟರ್ ಮಾಡಿ ಬೆಳಗ್ಗೆ ಕುಡಿಯಿರಿ
(6 / 9)
ಪಪ್ಪಾಯಿ ಎಲೆಗಳು - ಪಪ್ಪಾಯಿ ಎಲೆಗಳು ಡೆಂಗ್ಯೂ ಚಿಕಿತ್ಸೆಗೆ ಬಹಳ ಹಿಂದಿನಿಂದಲೂ ಜನಪ್ರಿಯ ಪರಿಹಾರವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಪ್ಪಾಯಿ ಎಲೆಗಳ ರಸವನ್ನು ದಿನಕ್ಕೆರಡು ಬಾರಿಯಾದರೂ ಕುಡಿಯಿರಿ
(7 / 9)
ಬೇವಿನ ಜ್ಯೂಸ್ - ಬೇವಿನ ಎಲೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ದೇಹದಲ್ಲಿ ವೈರಸ್‌ನ ಬೆಳವಣಿಗೆ ಮತ್ತು ಹರಡುವಿಕೆಯನ್ನು ತಡೆಯಲು ಗಮನಾರ್ಹವಾಗಿ ಕೊಡುಗೆ ನೀಡುತ್ತೆ. ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತೆ. ಸ್ವಲ್ಪ ನೀರಿನಲ್ಲಿ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.
(8 / 9)
ಕಿತ್ತಳೆ ಜ್ಯೂಸ್ - ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಇದು ಕೆಲಸ ಮಾಡುತ್ತದೆ. ಕಿತ್ತಳೆ ಜ್ಯೂಸ್ ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಮಾತ್ರವಲ್ಲದೆ ದೇಹಕ್ಕೆ ಜಲಸಂಚಯನವನ್ನು ನೀಡುತ್ತದೆ.
ಇತರ ಗ್ಯಾಲರಿಗಳು