ಹೊಟ್ಟೆ ತುಂಬ ಊಟ ಮಾಡಿದ್ ಮೇಲೆ ತಪ್ಪಿಯೂ ಈ 5 ಕೆಲಸಗಳನ್ನು ಮಾಡ್ಬೇಡಿ; ಇದ್ರಿಂದ ತೊಂದರೆ ತಪ್ಪಿದಲ್ಲ
- ರಾತ್ರಿಯೂಟ ಅಥವಾ ಮಧ್ಯಾಹ್ನದ ಊಟದ ನಂತರ ಕೆಲವರಿಗೆ ಟೀ ಕುಡಿಯುವುದು, ಸೀಗರೇಟ್ ಸೇದುವುದು ಇಂತಹ ಅಭ್ಯಾಸವಿರುತ್ತದೆ. ಆದರೆ ಊಟವಾದ ನಂತರ ತಪ್ಪಿಯೂ ಈ 5 ಕೆಲಸಗಳನ್ನು ಮಾಡಬಾರದು. ಇದರಿಂದ ತೊಂದರೆ ತಪ್ಪಿದ್ದಲ್ಲ. ಹಾಗಾದ್ರೆ ಆ 5 ಕೆಲಸಗಳು ಯಾವುವು ನೋಡಿ.
- ರಾತ್ರಿಯೂಟ ಅಥವಾ ಮಧ್ಯಾಹ್ನದ ಊಟದ ನಂತರ ಕೆಲವರಿಗೆ ಟೀ ಕುಡಿಯುವುದು, ಸೀಗರೇಟ್ ಸೇದುವುದು ಇಂತಹ ಅಭ್ಯಾಸವಿರುತ್ತದೆ. ಆದರೆ ಊಟವಾದ ನಂತರ ತಪ್ಪಿಯೂ ಈ 5 ಕೆಲಸಗಳನ್ನು ಮಾಡಬಾರದು. ಇದರಿಂದ ತೊಂದರೆ ತಪ್ಪಿದ್ದಲ್ಲ. ಹಾಗಾದ್ರೆ ಆ 5 ಕೆಲಸಗಳು ಯಾವುವು ನೋಡಿ.
(1 / 6)
ಹೊಟ್ಟೆ ತುಂಬುವಷ್ಟು ಊಟ ಮಾಡಿದ್ ಮೇಲೆ ಬೇಡ ಅಂದ್ರೂ ನಿದ್ದೆ ಬರೋದು ಸಹಜ. ಅದು ಮಧ್ಯಾಹ್ನದ ಊಟವಾಗಿರಲಿ, ರಾತ್ರಿ ಊಟವಾಗಿರಲಿ. ಹಾಸಿಗೆ ಮೇಲೆ ಒರಗಿ ಬಿಡೋಣ ಅನ್ನಿಸುತ್ತೆ. ಇನ್ನೂ ಕೆಲವರಿಗೆ ಊಟವಾದ ತಕ್ಷಣ ಸಿಗರೇಟ್ ಸೇದುವ ಅಭ್ಯಾಸವಿದೆ. ಕೆಲವರಿಗೆ ಊಟವಾದ ಮೇಲೆ ಟೀ ಬೇಕೇ ಬೇಕು. ಆದರೆ ನಾವು ಅನುಸರಿಸುವ ಈ ಕೆಲವು ಅಭ್ಯಾಸಗಳು ನಮ್ಮನ್ನು ಅನಾರೋಗ್ಯಕ್ಕೆ ತಳ್ಳುವುದರಲ್ಲಿ ಎರಡು ಮಾತಿಲ್ಲ. ಊಟವಾದ ತಕ್ಷಣ ಮಾಡಬಾರದಂತಹ 5 ಅಭ್ಯಾಸಗಳ ಬಗ್ಗೆ ಇಲ್ಲಿದೆ ತಿಳಿಸಲಾಗಿದೆ.
(2 / 6)
ನಿದ್ದೆ ಮಾಡ್ಬೇಡಿ: ಹೊಟ್ಟೆ ತುಂಬ ಊಟ ಮಾಡಿದ ಮೇಲೆ ಯಾವುದೇ ಕಾರಣಕ್ಕೂ ನಿದ್ದೆ ಮಾಡಬೇಡಿ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ಊಟದ ತಕ್ಷಣ ಕಿರುನಿದ್ದೆ (ನ್ಯಾಪ್) ಕೂಡ ಒಳ್ಳೆಯದಲ್ಲ.
(3 / 6)
ಧೂಮಪಾನ: ತಜ್ಞರ ಪ್ರಕಾರ ಊಟವಾದ ತಕ್ಷಣ ಒಂದು ಸಿಗರೇಟು ಸೇದುವುದು, 10 ಸಿಗರೇಟಿಗೆ ಸಮ. ಊಟದ ನಂತರ ತಪ್ಪಿಯೂ ಸಿಗರೇಟು ಸೇದಬೇಡಿ.
(4 / 6)
ಸ್ನಾನ ಮಾಡುವುದು: ಊಟದ ಮಾಡಿದ ನಂತರ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಸ್ನಾನದ ಸಮಯದಲ್ಲಿ ಹೊಟ್ಟೆಯ ಸುತ್ತಲಿನ ರಕ್ತವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಬದಲು ದೇಹದ ಇತರ ಭಾಗಗಳಿಗೆ ಹರಿಯುತ್ತದೆ.
(5 / 6)
ಹಣ್ಣು ಸೇವನೆ: ಭಿನ್ನ ಆಹಾರಗಳು, ಭಿನ್ನ ರೀತಿಯಲ್ಲಿ ಜೀರ್ಣವಾಗುತ್ತವೆ. ಊಟವಾದ ತಕ್ಷಣ ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸವಲ್ಲ. ಊಟಕ್ಕೆ ಒಂದು ಗಂಟೆ ಮೊದಲು ಅಥವಾ ಊಟವಾದ ಎರಡು ಗಂಟೆಗಳ ನಂತರ ಹಣ್ಣು ತಿನ್ನಬೇಕು. ಊಟವಾದ ನಂತರ ನೇರವಾಗಿ ಹಣ್ಣು ತಿಂದರೆ ಅದು ಜೀರ್ಣವಾಗುವುದಿಲ್ಲ.
(6 / 6)
ಟೀ ಕುಡಿಯುವ ಅಭ್ಯಾಸವೂ ಸಲ್ಲ: ಟೀ ಎಲೆಗಳು ಅಸಿಡಿಕ್ ಅಂಶವನ್ನು ಹೊಂದಿರುತ್ತವೆ. ಇದು ಜೀರ್ಣಕ್ರಿಯೆ ಹಂತದ ಮೇಲೆ ಪರಿಣಾಮ ಬೀರುತ್ತದೆ. ನೀವು ಊಟದೊಂದಿಗೆ ಪ್ರೊಟೀನ್ ಅಂಶಗಳನ್ನು ಸೇವಿಸಿದ್ದರೆ, ಊಟ ಪ್ರೊಟೀನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಊಟಕ್ಕೂ ಒಂದು ಗಂಟೆ ಮೊದಲು ಟೀ ಕುಡಿಯಿರಿ, ಊಟವಾದ ಒಂದು ಗಂಟೆಯ ಬಳಿಕ ಟೀ ಕುಡಿಯಬಹುದು ಎನ್ನುತ್ತಾರೆ ತಜ್ಞರು.
ಇತರ ಗ್ಯಾಲರಿಗಳು