Home Remedies: ಕಾಡುವ ನೆಗಡಿಗೆ ಸುಲಭದ ಮನೆಮದ್ದುಗಳಿವು: ಈ 7 ಅಂಶಗಳು ತಿಳಿದಿದ್ರೆ ನೆಗಡಿ ನಿರ್ವಹಣೆ ಸುಲಭ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Home Remedies: ಕಾಡುವ ನೆಗಡಿಗೆ ಸುಲಭದ ಮನೆಮದ್ದುಗಳಿವು: ಈ 7 ಅಂಶಗಳು ತಿಳಿದಿದ್ರೆ ನೆಗಡಿ ನಿರ್ವಹಣೆ ಸುಲಭ

Home Remedies: ಕಾಡುವ ನೆಗಡಿಗೆ ಸುಲಭದ ಮನೆಮದ್ದುಗಳಿವು: ಈ 7 ಅಂಶಗಳು ತಿಳಿದಿದ್ರೆ ನೆಗಡಿ ನಿರ್ವಹಣೆ ಸುಲಭ

  • ಮಳೆಗಾಲ ಆರಂಭವಾದ ಕೂಡಲೇ ಶೀತ, ನೆಗಡಿಯಂತಹ ಸಮಸ್ಯೆಗಳು ಬಾಧಿಸುವುದು ಸಹಜ. ನಿರಂತರವಾಗಿ ಸೋರುವ ಮೂಗು ನಮಗೆ ಕಿರಿಕಿರಿ ಉಂಟು ಮಾಡುತ್ತದೆ. ಕೆಲವೊಮ್ಮೆ ಎಷ್ಟೇ ಔಷಧಿ ಸೇವಿಸಿದ್ರೂ ಇದು ಕಡಿಮೆ ಆಗುವುದಿಲ್ಲ. ಇದಕ್ಕಾಗಿ ನೀವು ಮನೆಮದ್ದಿನ ಮೊರೆ ಹೋಗಬಹುದು. ಇದು ಹೆಚ್ಚು ಪರಿಣಾಮಕಾರಿ ಕೂಡ ಹೌದು.

ಮಳೆಗಾಲದಲ್ಲಿ ನಿರಂತರವಾಗಿ ಮೂಗು ಸೋರುವ ಸಮಸ್ಯೆ ಹಲವರಿಗಿದೆ. ಇದಕ್ಕಾಗಿ ವೈದ್ಯರಿಂದ ಔಷಧಿ ಪಡೆದ್ರು ಕಡಿಮೆ ಆಗಿರುವುದಿಲ್ಲ. ಅದಕ್ಕಾಗಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಈ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಬಹುದು. ಇದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗೋದು ಖಂಡಿತ. 
icon

(1 / 9)

ಮೂಗು ಸೋರುವುದನ್ನು ತಡೆಯಲು ಕ್ಯಾಮೊಮೈಲ್‌ ಟೀ, ಶುಂಠಿ ಟೀ ಅಥವಾ ಪುದಿನಾ ಟೀಯಂತಹ ಗಿಡಮೂಲಿಕೆ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಗಿಡಮೂಲಿಕೆ ಚಹಾವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಗಂಟಲು ನೋವಿನ ಶಮನಕ್ಕೂ ಉತ್ತಮ. ಇದು ಶ್ವಾಸನಾಳಗಳನ್ನು ಸ್ವಚ್ಛ ಮಾಡಲು ಕೂಡ ಸಹಕಾರಿ. 
icon

(2 / 9)

ಹಬೆ ತೆಗೆದುಕೊಳ್ಳಿ: ಶುದ್ಧವಾದ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಬಿಸಿ ಮಾಡಿ ಚೆನ್ನಾಗಿ ಕುದಿಸಿ. ಈಗ ನಿಮ್ಮ ಮುಖವನ್ನು ಹಬೆಗೆ ಹಿಡಿಯಿರಿ. ಮುಖಕ್ಕೆ ಚೆನ್ನಾಗಿ ಟವಲ್‌ ಮುಚ್ಚಿಕೊಳ್ಳಿ. ಹಬೆಯನ್ನು ಉಸಿರಾಡುವಾಗ ಆಳವಾದ ಉಸಿರು ತೆಗೆದುಕೊಳ್ಳಿ. ಇದು ಕಟ್ಟಿದ ಮೂಗಿನ ಸಮಸ್ಯೆಗೂ ಪರಿಹಾರ ನೀಡುತ್ತದೆ. ಮೂಗು ಸೋರುವುದನ್ನು ನಿಯಂತ್ರಿಸಲು ದಿನಕ್ಕೆ ಎರಡರಿಂದ ಮೂರು ಬಾರಿ ಈ ಕ್ರಮವನ್ನು ಪಾಲಿಸಬೇಕು.
icon

(3 / 9)

ಬಿಸಿ ನೀರಿನ ಸ್ನಾನ: ಸ್ರಮಿಸುವ ಮೂಗು ಅಥವಾ ಮೂಗು ಕಟ್ಟಿಕೊಳ್ಳುವುದನ್ನು ನಿವಾರಿಸಲು ಬಿಸಿನೀರಿನ ಸ್ನಾನ ಮಾಡುವುದು ಅತಿ ಅವಶ್ಯ. ಬಿಸಿ ನೀರನ್ನು ತಲೆಗೆ ಹೊಯ್ದುಕೊಳ್ಳುವುದರಿಂದ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮನಸ್ಸಿಗೆ ಹಾಯ್‌ ಎನ್ನುವ ಭಾವ ಸಿಗುತ್ತದೆ. 
icon

(4 / 9)

ಜಲನೇತಿ: ಪುರಾತನ ಪದ್ಧತಿಯಾದ ಜಲನೇತಿ ಮೂಲಕವೂ ಮೂಗು ಸೋರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನೇತಿ ಪಾಟ್‌ಗೆ ಉಪ್ಪು ನೀರು ಸೇರಿಸಿ ಒಂದು ಮೂಗಿನ ಹೊಳ್ಳೆಯಿಂದ ನೀರು ಎಳೆದುಕೊಂಡು ಇನ್ನೊಂದು ಮೂಗಿನಿಂದ ಬಿಡಬೇಕು. ಇದು ಸೈನಸ್‌ ಸಮಸ್ಯೆ ನಿವಾರಣೆಗೂ ಸಹಕಾರಿ. ಆದರೆ ಇದನ್ನು ಅನುಸರಿಸುವಾಗ ಸರಿಯಾದ ಕ್ರಮ ಪಾಲಿಸಬೇಕು. 
icon

(5 / 9)

ಮಸಾಲೆಯುಕ್ತ ಆಹಾರ ಸೇವನೆಯು ಆರಂಭದಲ್ಲಿ ಮೂಗು ಸೋರುವುದನ್ನು ಹೆಚ್ಚಿಸಬಹುದು. ಆದರೆ ನಂತರ ಇದು ನಿಧಾನಕ್ಕೆ ಮೂಗು ಸೋರುವುದನ್ನು ನಿಯಂತ್ರಿಸುತ್ತದೆ. ಮೆಣಸಿನಕಾಯಿ ಕ್ಯಾಪ್ಸೈಸಿನ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ಆಹಾರವನ್ನು ಮಸಾಲೆಯುಕ್ತವಾಗಿಸುವ ರಾಸಾಯನಿಕವಾಗಿದೆ. ನಿಮ್ಮ ಆಹಾರದಲ್ಲಿ ನೀವು ಕೇನ್ ಪೆಪರ್, ವಾಸಾಬಿ, ಶುಂಠಿ ಮತ್ತು ಇತರ ಮಸಾಲೆಗಳನ್ನು ಸೇರಿಸಬಹುದು. ಆಹಾರವನ್ನು ಬಿಸಿಯಾಗಿ ಕಾಣುವಂತೆ ಮಾಡುವುದರ ಜೊತೆಗೆ, ಈ ಮಸಾಲೆಗಳು ದೇಹದ ವಾಯುಮಾರ್ಗಗಳನ್ನು ತೆರೆಯುತ್ತವೆ ಮತ್ತು ಸೈನಸ್ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
icon

(6 / 9)

ಬಿಸಿಶಾಖ: ಮೂಗಿಗೆ ಬಿಸಿನೀರಿನ ಶಾಖ ಕೊಡುವುದರಿಂದ ಕೂಡ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಬಿಸಿನೀರಿನಲ್ಲಿ ಬಟ್ಟೆಯನ್ನು ಅದ್ದಿ ಮೂಗಿಗೆ ಹಿಡಿಯಿರಿ. ಬಟ್ಟೆಯಲ್ಲಿನ ಉಷ್ಣತೆಯು ಮೂಗಿನ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ಕಿರಿಕಿರಿಗೊಳಿಸುವ ಅಂಗಾಂಶವನ್ನು ಶಮನಗೊಳಿಸಲು ಇದು ಸಹಕಾರಿ. 
icon

(7 / 9)

ಹ್ಯುಮಿಡಿಫೈಯರ್‌ ಬಳಕೆ: ಶುಷ್ಕ ಗಾಳಿಯನ್ನು ತೇವಗೊಳಿಸಲು ಆರ್ದ್ರಕಗಳಿಂದ ನೀರನ್ನು ಆವಿಯಾಗಿ ಪರಿವರ್ತಿಸಲಾಗುತ್ತದೆ. ತೇವಾಂಶವು ಲೋಳೆಯನ್ನು ತೆಳುಗೊಳಿಸಲು ಮತ್ತು ಸ್ಥಳಾಂತರಿಸಲು ಮತ್ತು ಉಸಿರಾಡುವಾಗ ಮೂಗಿನ ಕಿರಿಕಿರಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಏಷ್ಯನ್ ಪೆಸಿಫಿಕ್ ಜರ್ನಲ್ ಆಫ್ ಅಲರ್ಜಿ ಮತ್ತು ಇಮ್ಯುನೊಲಾಜಿಯಲ್ಲಿ ಪ್ರಕಟವಾದ ಅಧ್ಯಯನವು ಹ್ಯುಮಿಡಿಫೈಯರ್‌ ಬೆಚ್ಚಗಿನ ಉಗಿಯನ್ನು ಉಸಿರಾಡುವುದರಿಂದ ಅಲರ್ಜಿಕ್ ರಿನಿಟಿಸ್‌ನಿಂದ ಉಂಟಾಗುವ ಲೋಳೆಯ ಸಂಗ್ರಹವನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿದಿದೆ.  
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(9 / 9)

ಇತರ ಗ್ಯಾಲರಿಗಳು