ಕರ್ಬೂಜ ತಿಂದ ತಕ್ಷಣ ಈ ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು, ಆರೋಗ್ಯಕ್ಕೆ ಹಾನಿಯಾಗೋದು ಖಚಿತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ಬೂಜ ತಿಂದ ತಕ್ಷಣ ಈ ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು, ಆರೋಗ್ಯಕ್ಕೆ ಹಾನಿಯಾಗೋದು ಖಚಿತ

ಕರ್ಬೂಜ ತಿಂದ ತಕ್ಷಣ ಈ ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು, ಆರೋಗ್ಯಕ್ಕೆ ಹಾನಿಯಾಗೋದು ಖಚಿತ

ಬೇಸಿಗೆ ಎನ್ನುವ ಕಾರಣಕ್ಕೆ ಕರ್ಬೂಜ ಹಣ್ಣನ್ನು ಹೆಚ್ಚು ತಿನ್ನುತ್ತಿದ್ದರೆ, ತಿಂದ ನಂತರ ತಪ್ಪಿಯೂ ಈ ಕೆಲವು ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ ಆರೋಗ್ಯಕ್ಕೆ ಹಾನಿಯಾಗೋದು ಖಚಿತ.

ಬೇಸಿಗೆಯಲ್ಲಿ ಕರ್ಬೂಜ ಅಥವಾ ಮಸ್ಕ್‌ಮೆಲನ್ ಹಣ್ಣು ಹೇರಳವಾಗಿ ಸಿಗುತ್ತದೆ. ಇದು ಆರೋಗ್ಯಕ್ಕೂ ಉತ್ತಮ. ಬೇಸಿಗೆಯ ದಾಹ ನೀಗಿಸುವ ಈ ಹಣ್ಣನ್ನು ತಿನ್ನುವಾಗ ಸ್ವಲ್ಪ ಎಚ್ಚರಿಕೆಯೂ ಅಗತ್ಯ. ಅನೇಕ ಪೌಷ್ಟಿಕತಜ್ಞರು ಕರ್ಬೂಜ ತಿಂದ ನಂತರ ಅದರೊಂದಿಗೆ ಕೆಲವು ನಿರ್ದಿಷ್ಟ ಪದಾರ್ಥಗಳನ್ನು ಸೇವಿಸಬೇಡಿ ಎಂದು ಸಲಹೆ ನೀಡುತ್ತಾರೆ. ಇಲ್ಲದಿದ್ದರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ.
icon

(1 / 9)

(shutterstock)

ಕರ್ಬೂಜದ ಜೊತೆ ಮೊಸರು ತಪ್ಪಿಯೂ ಸೇವಿಸಬಾರದು. ಕರ್ಬೂಜದಲ್ಲಿರುವ ನೀರಿನಾಂಶ ಹೊಟ್ಟೆಯಲ್ಲಿ ಆಮ್ಲವನ್ನು ಸೃಷ್ಟಿಸುತ್ತದೆ. ಆದರೆ ಮೊಸರು ತಿನ್ನುವುದರಿಂದ ಈ ಪ್ರಕ್ರಿಯೆ ನಿಲ್ಲುತ್ತದೆ. ಇದರಿಂದಾಗಿ ಅಜೀರ್ಣ ಸಮಸ್ಯೆ ಉಂಟಾಗಲು ಪ್ರಾರಂಭವಾಗುತ್ತದೆ.
icon

(2 / 9)

ಮೊಸರಿನಂತೆ, ಹಾಲನ್ನು ಕರ್ಬೂಜದೊಂದಿಗೆ ಅಥವಾ ಅದನ್ನು ತಿಂದ ನಂತರ ಸೇವಿಸಬಾರದು. ಇದಕ್ಕೆ ಕಾರಣ ಎರಡರ ಜೀರ್ಣಕ್ರಿಯೆಯ ಸಮಯ. ಕರ್ಬೂಜ ಮತ್ತು ಹಾಲಿನ ಪಿಎಚ್‌ ಮಟ್ಟದಲ್ಲಿ ವ್ಯತ್ಯಾಸವಿದೆ. ಇದರಿಂದಾಗಿ ಇದು ಜೀರ್ಣಕ್ರಿಯೆಗೆ ಹಾನಿಕಾರಕವಾಗಬಹುದು.
icon

(3 / 9)

ಕರ್ಬೂಜವನ್ನು ಎಂದಿಗೂ ಮೊಟ್ಟೆಯೊಂದಿಗೆ ತಿನ್ನಬಾರದು ಅಥವಾ ಕಲ್ಲಂಗಡಿ ತಿಂದ ತಕ್ಷಣ ಮೊಟ್ಟೆ ಅಥವಾ ಮಾಂಸವನ್ನು ತಿನ್ನಬಾರದು. ಇದು  ಅಜೀರ್ಣಕ್ಕೆ ಕಾರಣವಾಗಬಹುದು.
icon

(4 / 9)

ಕರ್ಬೂಜ ತಿಂದ ತಕ್ಷಣ ಅಥವಾ ಅದರ ಜೊತೆ ಬಾಳೆಹಣ್ಣನ್ನು ಎಂದಿಗೂ ತಿನ್ನಬಾರದು. ಬಾಳೆಹಣ್ಣಿನಲ್ಲಿ ನಾರಿನಂಶ ಹೇರಳವಾಗಿದ್ದು, ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಕರ್ಬೂಜ ಜೊತೆ ತಿಂದಾಗ ಅಜೀರ್ಣ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆ ಎದುರಾಗಬಹುದು.
icon

(5 / 9)

ಕರ್ಬೂಜವನ್ನು ಕುಡಿದ ತಕ್ಷಣ ತಂಪು ಪಾನೀಯಗಳನ್ನು ಕುಡಿಯುವುದು ಅಥವಾ ತಂಪು ಪಾನೀಯ ಕುಡಿದ ತಕ್ಷಣ ಕರ್ಬೂಜ ಸೇವಿಸುವುದರಿಂದ ಅಪಾಯ ತಪ್ಪಿದ್ದಲ್ಲ. ಇವೆರಡೂ ಒಟ್ಟಾಗಿ ಹೊಟ್ಟೆಯಲ್ಲಿ ಅನಿಲವನ್ನು ಉತ್ಪಾದಿಸುತ್ತವೆ. ಇದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಎದುರಾಗಬಹುದು. ಯಾವುದೇ ಹಣ್ಣು ತಿಂದ ಒಂದು ಗಂಟೆಯೊಳಗೆ ತಪ್ಪಿಯೂ ಸೋಡಾ ಅಥವಾ ತಂಪು ಪಾನೀಯ ಕುಡಿಯಬೇಡಿ.
icon

(6 / 9)

ಕರ್ಬೂಜ ತಿಂದ ತಕ್ಷಣ ಮಸಾಲೆಯುಕ್ತ,  ಖಾರದ ಅಥವಾ ಹುರಿದ ಆಹಾರವನ್ನು ಸೇವಿಸಬಾರದು. ಇದರಿಂದ ಹೊಟ್ಟೆಯ ಒಳಪದರದ ಮೇಲೆ ಒತ್ತಡ ಬೀಳುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಆಗಾಗ್ಗೆ ಹೊಟ್ಟೆ ನೋವು ಇರುವವರು ತಪ್ಪಿಯೂ ಕರ್ಬೂಜ ಹಾಗೂ ಮಸಾಲೆ, ಖಾರದ ಪದಾರ್ಥಗಳನ್ನು ಒಟ್ಟಿಗೆ ತಿನ್ನಬಾರದು.
icon

(7 / 9)

ಕಲ್ಲಂಗಡಿ ತಿನ್ನುವ ಮೊದಲು ಅಥವಾ ನಂತರ ತಪ್ಪಿಯೂ ಸಹ ಮದ್ಯಪಾನ ಮಾಡಬಾರದು. ಹೀಗೆ ಮಾಡುವುದರಿಂದ ಗ್ಯಾಸ್, ಅಜೀರ್ಣ ಮತ್ತು ಡಿಸ್ಪೆಪ್ಸಿಯಾ ಮುಂತಾದ ಸಮಸ್ಯೆಗಳು ಬರಲು ಪ್ರಾರಂಭಿಸುತ್ತವೆ.
icon

(8 / 9)

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
icon

(9 / 9)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು