Health Tips: ಮಾವಿನ ಹಣ್ಣು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಲು 7 ಕಾರಣಗಳಿವು -Mango
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Health Tips: ಮಾವಿನ ಹಣ್ಣು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಲು 7 ಕಾರಣಗಳಿವು -Mango

Health Tips: ಮಾವಿನ ಹಣ್ಣು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಲು 7 ಕಾರಣಗಳಿವು -Mango

  • ಹಣ್ಣುಗಳ ರಾಜ ಮಾವು ಹೆಸರು ಹೇಳಿದರೆ ಸಾಕು ಬಾಯಲ್ಲಿ ನೀರೂರುತ್ತೆ. ಆದರೆ ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಹಲವಾರು ವೈಜ್ಞಾನಿಕ ಪ್ರಯೋಜನಗಳಿವೆ. ಮಾವಿನ ಹಣ್ಣುಗಳನ್ನು ತಿನ್ನುವ ಮೊದಲು ನೀರಿನಲ್ಲಿ ಯಾಕೆ ನೆನೆಸಿಡಬೇಕು ಅನ್ನೋದಕ್ಕೆ 7 ಕಾರಣಗಳು ಇಲ್ಲಿವೆ.

ಮಾವಿನ ಹಣ್ಣನ್ನು ತಿನ್ನುವ ಮುನ್ನ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಬೇಕು ಅಂತ ನಿಮಗೆ ಮನೆಯಲ್ಲಿ ಹಿರಿಯರು ಹೇಳಿರಬಹುದು. ಒಂದು  ಹೀಗೆ ಹೇಳದಿದ್ದರೂ ಯಾಕೆ ಈ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
icon

(1 / 8)

ಮಾವಿನ ಹಣ್ಣುಗಳಲ್ಲಿ ವಿಟಮಿನ್ ಸಿ, ಎ, ಕೆ, ಇ ಮತ್ತು ಬಿ ಹೇರಳವಾಗಿವೆ. ಮಾವಿನ ಹಣ್ಣಿನ ಕಾಂಡದಲ್ಲಿ ನೈಸರ್ಗಿಕವಾಗಿ ಕಂಡುಬರುವ ಫೈಟಿಕ್ ಆಮ್ಲವನ್ನು ಹೊಂದಿರುತ್ತದೆ. ಫೈಟಿಕ್ ಆಮ್ಲವನ್ನು ಪೋಷಕ ವಿರೋಧಿ ಅಂತ ಪರಿಗಣಿಸಲಾಗಿದೆ. ಏಕೆಂದರೆ ಇದು ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನಂತರ ಪ್ರಮುಖ ಖನಿಜಗಳ ದೇಹಕ್ಕಾಗುವ ಪ್ರಯೋಜನಗಳನ್ನ ದುರ್ಬಲಗೊಳಿಸುತ್ತದೆ.
icon

(2 / 8)

(Unsplash)

ಮಾವಿನಹಣ್ಣುಗಳು ಫೈಟೊಕೆಮಿಕಲ್‌ಗಳನ್ನು ಒಳಗೊಂಡಿರುತ್ತವೆ. ಇದು ಕಡಿಮೆ ಪ್ರಮಾಣದಲ್ಲಿ ಪ್ರಯೋಜನಕಾರಿ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯಾತ್ಮಕವಾಗಿರುತ್ತದೆ. ಮಾವಿನ ಹಣ್ಣನ್ನು ನೆನೆಸುವುದು ಈ ಫೈಟೊಕೆಮಿಕಲ್‌ಗಳ ಸಾಂದ್ರತೆಯನ್ನು ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬಿನ ಕೋಶಗಳನ್ನು ಒಡೆಯಲು ಸಹಾಯ ಮಾಡುತ್ತೆ.
icon

(3 / 8)

ಮಾವಿನ ಹಣ್ಣಿನ ಮೇಲೆ ಸಾವಯವ ಎಂದು ಲೇಬಲ್ ಅಂಟಿಸಿದ್ದರೂ ಇವುಗಳ ಮೇಲೆ ಕೀಟನಾಶಗಳು ಇರುವ ಸಾಧ್ಯತೆ ಇರುತ್ತದೆ. ಬೆಳೆಯುವ ಮಣ್ಣಿನಲ್ಲಿ ರಾಸಾಯನಿಕವಾಗಿ ರಸಗೊಬ್ಬರಗಳು ಮತ್ತು ಕೀಟನಾಶಗಳು ಹೆಚ್ಚಾಗಿ ಕಲಬೆರೆಯಾಗಿರುತ್ತವೆ. ಈ ವಿಷಯಕಾರಿ ರಾಸಾಯನಿಕಗಳು ಉಸಿರಾಟದ ಜಾಗದಲ್ಲಿ ಸೋಂಕು, ಕಣ್ಣು, ಚರ್ಮದ ಕಿರಿಕಿರಿ ಹಾಗೂ ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಕಾರಣವಾಗಬಹುದು.
icon

(4 / 8)

ಮಾವಿನ ಕಾಯಿಯನ್ನು ಕೃತಕವಾಗಿ ಹಣ್ಣು ಮಾಡಲು ಕೆಲವು ಉತ್ಪಾದಕರು ಅಥವಾ ವ್ಯಾಪಾರಿಗಳು ಕ್ಯಾಲ್ಸಿಯಂ ಕಾರ್ಬೈಟ್ ಚೀಲಗಳನ್ನು ಬಳಸುತ್ತಾರೆ. ಇದು ಅಸಿಟಿಲೀನ್ ಅನಿಲವನ್ನು ಉತ್ಪಾದಿಸಲು ಕ್ರೇಟ್‌ಗಳಲ್ಲಿನ ತೇವಾಂಶದೊಂದಿಗೆ ರಿಯ್ಯಾಕ್ಟ್ ಆಗುತ್ತದೆ. ಇದು ಕೃತಕವಾಗಿ ಮಾಗುವ ವೇಗವನ್ನು ಹೆಚ್ಚಿಸುತ್ತದೆ. ಮಾವಿನ ಹಣ್ಣನನ್ನು ನೆನೆಸುವುದರಿಂದ ಅವು ಕೃತಕವಾಗಿ ಮಾಗಿವೆಯೇ ಅಥವಾ ನೈಸರ್ಗಿಕವಾಗಿ ಮಾಗಿವೆಯೇ ಎಂಬುದು ಗೊತ್ತಾಗುತ್ತೆ.
icon

(5 / 8)

ಮಾವಿನಹಣ್ಣುಗಳು ಶಾಖ ಪ್ರಚೋದಕ ಗುಣಲಕ್ಷಣಗಳನ್ನು ಹೊಂದಿವೆ ಎಂದು ಹಲವಾರು ಬಾರಿ ಟೀಕಿಸಲಾಗಿದೆ. ಈ ಗುಣಲಕ್ಷಣಗಳು ಮೊಡನೆ, ದದ್ದುಗಳಂತಹ ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ತಲೆನೋವು, ವಾಕರಿಕೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.  ಕನಿಷ್ಠ 30 ನಿಮಿಷ ನೀರಿನಲ್ಲಿ ನೆನೆಸಿಟ್ಟರೆ ಥರ್ಮೋಜೆನಿಕ್ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇವುಗಳನ್ನು ಸೇವಿಸಿದ ನಂತರ ದೇಹದ ಬಿಸಿ ಸ್ಥಿರವಾಗಿಡಲು ನೆರವಾಗುತ್ತೆ
icon

(6 / 8)

ಆಗತಾನೆ ಮರದಿಂದ ಕಿತ್ತು ತಂದ ಮಾವಿನ ಹಣ್ಣುಗಳಲ್ಲಿ ರಸ ಅಥವಾ ಲ್ಯಾಟೆಕ್ಸ್ ಅನ್ನು ಹೊಂದಿರುತ್ತವೆ. ಇದು ಕೆಲವು ಜನರಲ್ಲಿ ಕಿರಿಕಿ ಅಥವಾ ಅಲರ್ಜಿಗೆ ಕಾರಣವಾಗುತ್ತೆ. ನೆನೆಸಿಡುವುದರಿಂದ ಹಣ್ಣಿನ ಮೇಲ್ಮೈಯಲ್ಲಿ ಲ್ಯಾಟೆಕ್ಸ್ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
icon

(7 / 8)

ಬಿಸಿ ವಾತಾವರಣದಲ್ಲಿ ಮಾವಿನ ಹಣ್ಣುಗಳನ್ನು ತೆರೆದಿಟ್ಟರೆ ತುಂಬಾ ಬೆಚ್ಚಗಿರುತ್ತವೆ. ಅವುಗಳನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ತಿಂದರೆ ಹೆಚ್ಚು ಉಲ್ಲಾಸಕರವಾಗಿರುತ್ತವೆ. ನೀರಿನಲ್ಲಿ ನೆನೆಸಿಟ್ಟಾಗ ಹಣ್ಣಿನ ಜಲಸಂಚಯವನ್ನು ಹೆಚ್ಚಿಸುತ್ತದೆ.
icon

(8 / 8)

ಇತರ ಗ್ಯಾಲರಿಗಳು