ಈ 5 ಪದಾರ್ಥಗಳನ್ನು ತಪ್ಪಿಯೂ ಔಷಧಿಗಳೊಂದಿಗೆ ಸೇವಿಸಬೇಡಿ, ಇದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು
ಅನಾರೋಗ್ಯವಿದ್ದಾಗ ಔಷಧಿ ಸೇವಿಸುವುದು ಸಹಜ, ಜೊತೆಗೆ ಆ ಸಮಯದಲ್ಲಿ ಆರೋಗ್ಯಕರ ಆಹಾರಗಳ ಸೇವನೆಗೂ ಹೆಚ್ಚು ಒತ್ತು ನೀಡುತ್ತೇವೆ. ಆದರೆ ಔಷಧಿಗಳ ಜೊತೆ ಈ ಕೆಲವು ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಂತಹ 5 ಆಹಾರ ಪದಾರ್ಥಗಳು ಯಾವುದು ನೋಡಿ.
(1 / 9)
ಆರೋಗ್ಯ ಕಾಪಾಡಿಕೊಳ್ಳಲು ಮನುಷ್ಯ ತನ್ನ ಆಹಾರ ಕ್ರಮದಲ್ಲಿ ಆರೋಗ್ಯಕರ ಪದಾರ್ಥಗಳನ್ನು ಸೇರಿಸಿಕೊಳ್ಳಲು ಬಯಸುತ್ತಾನೆ. ಆದರೆ ಆಹಾರ ನಿಯಮಗಳ ಬಗ್ಗೆ ಸರಿಯಾದ ಜ್ಞಾನದ ಕೊರತೆಯಿಂದಾಗಿ, ಅದೇ ಮನುಷ್ಯ ತನ್ನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಬದಲು, ಹಾನಿ ಮಾಡಲು ಪ್ರಾರಂಭಿಸುತ್ತಾನೆ. ಆಹಾರದ ಬಗೆಗಿನ ಈ ರೀತಿಯ ನಿಯಮ ಔಷಧಿಗಳಿಗೂ ಅನ್ವಯಿಸುತ್ತದೆ. ಔಷಧಿಗಳನ್ನು ಸೇವಿಸುವಾಗ ತಪ್ಪಿಯೂ ಈ ಕೆಲವು ಆಹಾರಗಳನ್ನು ತಿನ್ನಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
(shutterstock)(2 / 9)
ಹಾಲು ಅಥವಾ ಹಣ್ಣಿನ ರಸದ ಜೊತೆಗೆ ಔಷಧಿ ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ ಈ ಅಭ್ಯಾಸಕ್ಕೆ ಇಂದೇ ಕೊನೆ ಹಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ಮತ್ತು ಔಷಧ ಎರಡರ ಪರಿಣಾಮವು ದೇಹಕ್ಕೆ ತಾಕುವುದಿಲ್ಲ. ಈ ಸಂದರ್ಭ ಔಷಧಿ ತೆಗೆದುಕೊಳ್ಳುವಾಗ ಯಾವೆಲ್ಲಾ ವಸ್ತುಗಳನ್ನು ಸೇವಿಸಬಾರದು ಎಂಬುದನ್ನು ಇಲ್ಲಿ ನೋಡೋಣ.
(shutterstock)(3 / 9)
ದ್ರಾಕ್ಷಿ ರಸ
ತಪ್ಪಿಯೂ ದ್ರಾಕ್ಷಿ ರಸವನ್ನು ಯಾವುದೇ ಔಷಧಿಯೊಂದಿಗೆ ಕುಡಿಯಬಾರದು. ದ್ರಾಕ್ಷಿಹಣ್ಣಿನ ರಸವು ಎಲ್ಲಾ ರೀತಿಯ ಔಷಧಿಗಳೊಂದಿಗೆ ಪ್ರತಿಕೂಲವಾಗಿ ಪ್ರತಿಕ್ರಿಯಿಸುತ್ತದೆ. ದ್ರಾಕ್ಷಿಹಣ್ಣಿನ ರಸದಲ್ಲಿರುವ ಕೆಲವು ಸಂಯುಕ್ತಗಳು ಔಷಧಿಗಳೊಂದಿಗೆ ಸೇರಿಸಿ ಔಷಧಿಯ ಪರಿಣಾಮವನ್ನು ಕಡಿಮೆ ಮಾಡಬಹುದು.
(4 / 9)
ಬ್ರೊಕೊಲಿ, ಮೊಳಕೆ, ಕೇಲ್
ರಕ್ತ ತೆಳುಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುವಾಗ ಬ್ರೊಕೊಲಿ, ಮೊಳಕೆಕಾಳುಗಳು, ಕೇಲ್ ಮತ್ತು ಪಾಲಕ್ ಸೊಪ್ಪಿನಂತಹ ವಿಟಮಿನ್ ಕೆ ಸಮೃದ್ಧವಾಗಿರುವ ತರಕಾರಿಗಳನ್ನು ಸೇವಿಸಬಾರದು. ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಕೆ ಸೇವನೆಯು ರಕ್ತ ತೆಳುಗೊಳಿಸುವ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು.
(5 / 9)
ಕ್ಯಾನ್‌ಬೆರಿ ಜ್ಯೂಸ್
ಕ್ಯಾನ್‌ಬೆರಿ ರಸವು ಕೆಲವು ಔಷಧಿಗಳೊಂದಿಗೆ ವ್ಯತಿರಿಕ್ತ ಪರಿಣಾಮ ಬೀರಬಹುದು. ನೀವು ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕ್ಯಾನ್‌ಬೆರಿ ರಸವನ್ನು ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸಿ.
(6 / 9)
ಕಾಫಿ
ಔಷಧಿಯ ಜೊತೆಗೆ ಕಾಫಿಯನ್ನು ಕುಡಿಯಬಾರದು. ಕಾಫಿಯಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ಔಷಧದ ಪರಿಣಾಮವನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಇದು ಔಷಧದ ಅಡ್ಡಪರಿಣಾಮಗಳನ್ನು ಹೆಚ್ಚಿಸಬಹುದು.
(7 / 9)
ವೈನ್
ವೈನ್‌ನಲ್ಲಿರುವ ಆಲ್ಕೋಹಾಲ್ ಕೆಲವು ಪ್ರತಿಜೀವಕಗಳೊಂದಿಗೆ ಪ್ರತಿಕ್ರಿಯಿಸಬಹುದು. ಇದು ಹೊಟ್ಟೆ ಉಬ್ಬರ, ವಾಂತಿ, ಬೆವರುವುದು, ತಲೆನೋವು ಮತ್ತು ಹೃದಯ ಬಡಿತ ಹೆಚ್ಚಾಗುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
(8 / 9)
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ಇತರ ಗ್ಯಾಲರಿಗಳು