ಸ್ನಾನ ಮಾಡಲು ಇದೆ ಆಯುರ್ವೇದ ನಿಯಮ; ಈ ಸಮಯದಲ್ಲಿ ಸ್ನಾನ ಮಾಡಿದ್ರೆ ಆರೋಗ್ಯ ಕೆಡಬಹುದು, ತಿಳಿದಿರಲಿ
- ಆಯುರ್ವೇದದ ಪ್ರಕಾರ ದಿನದಲ್ಲಿ ಸ್ನಾನ ಮಾಡಲು ಕೂಡ ಕೆಲವು ನಿಯಮಗಳಿವೆ. ಹೊತ್ತಲ್ಲದ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವುದಕ್ಕಿಂತ ಅನಾನುಕೂಲವೇ ಹೆಚ್ಚು. ಹಾಗಾದರೆ ಯಾವೆಲ್ಲಾ ಸಮಯದಲ್ಲಿ ಸ್ನಾನ ಮಾಡುವಂತಿಲ್ಲ ನೋಡಿ.
- ಆಯುರ್ವೇದದ ಪ್ರಕಾರ ದಿನದಲ್ಲಿ ಸ್ನಾನ ಮಾಡಲು ಕೂಡ ಕೆಲವು ನಿಯಮಗಳಿವೆ. ಹೊತ್ತಲ್ಲದ ಹೊತ್ತಿನಲ್ಲಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುವುದಕ್ಕಿಂತ ಅನಾನುಕೂಲವೇ ಹೆಚ್ಚು. ಹಾಗಾದರೆ ಯಾವೆಲ್ಲಾ ಸಮಯದಲ್ಲಿ ಸ್ನಾನ ಮಾಡುವಂತಿಲ್ಲ ನೋಡಿ.
(1 / 7)
ಸ್ನಾನ ಮನುಷ್ಯನ ದಿನಚರಿಯ ಭಾಗವಾಗಿದೆ. ಬೇಸಿಗೆಯಲ್ಲಿ ಪದೇ ಪದೇ ಸ್ನಾನ ಮಾಡಬೇಕು ಎನ್ನಿಸುತ್ತದೆ. ಸ್ನಾನ ಮಾಡಿದ ಮೇಲೆ ಮನಸ್ಸಿಗೆ ಆಹ್ಲಾದ ಭಾವನೆ ಮೂಡುತ್ತದೆ. ಇದರಿಂದ ಆಯಾಸ, ಚಡಪಡಿಕೆ ಕಡಿಮೆಯಾಗುತ್ತದೆ. ಮನಸ್ಥಿತಿ ಸುಧಾರಿಸುತ್ತದೆ. ವಿಜ್ಞಾನದಿಂದ ಆರ್ಯವೇದದವರೆಗೆ ಸ್ನಾನದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳುತ್ತದೆ. ಆದರೆ ಸ್ನಾನ ಮಾಡಲು ಕೆಲವು ನಿಯಮಗಳಿವೆ. ದಿನದಲ್ಲಿ ಈ ಕೆಲವು ಸಮಯದಲ್ಲಿ ಸ್ನಾನ ಮಾಡುವುದು ಸೂಕ್ತವಲ್ಲ. ಇದರಿಂದ ಪ್ರಯೋಜನಕ್ಕಿಂತ ಅನಾನುಕೂಲವೇ ಹೆಚ್ಚು ಎನ್ನುತ್ತದೆ ಆಯುರ್ವೇದ.
(2 / 7)
ಬೇಸಿಗೆ ಕಾಲದಲ್ಲಿ ಹೊರಗೆ ಹೋಗಿ ಬಂದಾಗ ಬೆವರು ಸೆಖೆಯ ಕಾರಣದಿಂದ ತಣ್ಣೀರಿನ ಸ್ನಾನ ಮಾಡಬೇಕು ಅನ್ನಿಸುತ್ತದೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಾಸ್ತವಾಗಿ ಹೊರಗಿನಿಂದ ಬಂದಾಗ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಆಗ ತಣ್ಣೀರು ಸ್ನಾನ ಮಾಡಿದಾಗ ಉಷ್ಣ ಹಾಗೂ ಶೀತ ಎರಡೂ ಒಂದಾಗಿ ಆರೋಗ್ಯ ಹದಗೆಡಬಹುದು. ಇದರಿಂದ ಜ್ವರ, ಶೀತದಂತಹ ಸಮಸ್ಯೆಗಳು ಎದುರಾಗಬಹುದು.
(3 / 7)
ಆಯುರ್ವೇದದ ಪ್ರಕಾರ ರಾತ್ರಿ ಮಲಗುವ ಮುನ್ನ ಸ್ನಾನ ಮಾಡಬಾರದು. ವಾಸ್ತವವಾಗಿ, ಮಲಗುವ ಮುನ್ನ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದರಿಂದ ರಾತ್ರಿ ಹೊತ್ತು ಆರೋಗ್ಯ ಇನ್ನಷ್ಟು ಹದಗೆಡಬಹುದು. ಆದ್ದರಿಂದ, ಸ್ನಾನ ಮತ್ತು ನಿದ್ರೆಯ ನಡುವೆ ಕನಿಷ್ಠ ಎರಡರಿಂದ ಮೂರು ಗಂಟೆಗಳ ಅಂತರವಿರುವುದು ಒಳ್ಳೆಯದು. ಅಲ್ಲದೆ, ರಾತ್ರಿಯಲ್ಲಿ ಅತಿಯಾದ ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ.
(4 / 7)
ಜ್ವರ ಬಂದಾಗ ಹಲವರು ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ, ಆದರೆ ಕೆಲವರು ಸ್ನಾನ ಮಾಡುವುದರಿಂದ ಅವರಿಗೆ ಉತ್ತಮ ಭಾವನೆ ಬರುತ್ತದೆ ಎಂದು ನಂಬುತ್ತಾರೆ. ಆಯುರ್ವೇದದ ಪ್ರಕಾರ, ದೇಹದ ಉಷ್ಣತೆ ಕಡಿಮೆಯಾದಾಗ ಜ್ವರ ಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ನಾನ ಮಾಡಿದಾಗ, ಅದು ನಿಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗಾಗಿ ಜ್ವರ ಇರುವಾಗ ಸ್ನಾನ ಮಾಡದೇ ಇರುವುದು ಉತ್ತಮ.
(5 / 7)
ಆಯುರ್ವೇದದ ಪ್ರಕಾರ ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದಾಗ ಸ್ನಾನ ಮಾಡುವುದನ್ನು ತಪ್ಪಿಸಿ. ರಕ್ತದೊತ್ತಡ ಕಡಿಮೆಯಿದ್ದರೆ ಆಗ ತಕ್ಷಣ ಸ್ನಾನ ಮಾಡಬೇಡಿ. ಇದು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.
(6 / 7)
ನಿಮಗೆ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆ ಎದುರಾದಾಗ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಹಸಿವು ಕಡಿಮೆಯಾಗುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸ್ನಾನ ಮಾಡಿದಾಗ ಸಮಸ್ಯೆ ಇನ್ನಷ್ಟು ಹದಗೆಡುತ್ತದೆ.
ಇತರ ಗ್ಯಾಲರಿಗಳು