ಕನ್ನಡ ಸುದ್ದಿ  /  Photo Gallery  /  Health Tips Benefits Of Kalonji Health Benefits Everyone Sholud Know Health Health Weight Loss Diabetes Control Rst

Benefits of Kalonji: ಕಹಿ ಅನ್ನೋ ಕಾರಣಕ್ಕೆ ಕರಿಜೀರಿಗೆ ತಿನ್ನದೇ ಇರಬೇಡಿ; ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ

ಕಪ್ಪು ಜೀರಿಗೆ ಅಥವಾ ಕರಿ ಜೀರಿಗೆ ಸಿಕ್ಕಾಪಟ್ಟೆ ಕಹಿ ಇರುತ್ತದೆ. ಆದರೆ ಇದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಅಲರ್ಜಿ ನಿವಾರಣೆಯಿಂದ ಹಿಡಿದು ರೋಗನಿರೋಧಕ ಶಕ್ತಿ ಹೆಚ್ಚುವವರೆಗೆ ಕರಿ ಜೀರಿಗೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳನ್ನು ತಿಳಿಯಿರಿ.

ಕರಿ ಜೀರಿಗೆಗೆ ಆಯುರ್ವೇದದಲ್ಲಿ ಬಹಳ ಮಹತ್ವವಿದೆ. ಇದು ಕಹಿ ಎನ್ನುವ ಕಾರಣಕ್ಕೆ ಹಲವರು ಇದನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ ಇದನ್ನು ಆರೋಗ್ಯದ ಕಣಜ ಎಂದರೂ ತಪ್ಪಾಗಲಿಕ್ಕಿಲ್ಲ. ಚರ್ಮದ ಸಕಲ ಸಮಸ್ಯೆಗೂ ಇದೇ ಮದ್ದು. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
icon

(1 / 8)

ಅಸ್ತಮಾ, ಉಸಿರಾಟದ ಅಲರ್ಜಿಯಂತಹ ಸಮಸ್ಯೆಗಳನ್ನು ನಿವಾರಿಸುವ ಗುಣ ಕರಿಜೀರಿಗೆಗಿದೆ. ಇದು ಶೀತವನ್ನು ತ್ವರಿತವಾಗಿ ಗುಣಪಡಿಸುತ್ತದೆ. ಕಫ ಕಡಿಮೆಯಾಗಲು ಕರಿಜೀರಿಗೆ ಬಳಸುವ ಕ್ರಮ ಬಂಗಾಳದ ಕಡೆ ರೂಢಿಯಲ್ಲಿದೆ. ಬೆಚ್ಚಗಿನ ನೀರಿನಲ್ಲಿ ಕರಿಜೀರಿಗೆ ಎಣ್ಣೆ ಹಾಗೂ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಒಂದು ಚಮಚ ಕಪ್ಪು ಜೀರಿಗೆ, ಮೂರು ಚಮಚ ಜೇನುತುಪ್ಪ, ಎರಡು ಚಮಚ ತುಳಸಿ ಎಲೆಯ ರಸವನ್ನು ಒಟ್ಟಿಗೆ ಸೇವಿಸುವುದರಿಂದ ನೆಗಡಿ ಸೇರಿದಂತೆ ಜ್ವರವೂ ಕಡಿಮೆಯಾಗುತ್ತದೆ.
icon

(2 / 8)

ತೂಕ ಇಳಿಸಲು ಬಯಸುವವರು ಕರಿಜೀರಿಗೆ ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ದೇಹದಲ್ಲಿ ಚಯಾಪಚಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಕರಿಜೀರಿಗೆಯಲ್ಲಿ ನೀರಿನಲ್ಲಿ ಕುದಿಸಿ, ಆ ನೀರನ್ನು ಬಿಸಿ ಇರುವಾಗಲೇ ಕುಡಿಯುವುದರಿಂದ ತೂಕ ಇಳಿಕೆಯಾಗುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. 
icon

(3 / 8)

ಕರಿಜೀರಿಗೆಯ ಎಣ್ಣೆಯು ಆರೋಗ್ಯದ ಮೇಲೆ ಮ್ಯಾಜಿಕ್‌ ಮಾಡಬಹುದು. ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಸುತ್ತಿದ್ದರೆ, ಇದರ ಸೇವನೆ ಉತ್ತಮ. ಒಂದು ಚಮಚ ಕರಿ ಜೀರಿಗೆ ಎಣ್ಣೆಯನ್ನು ಬಿಸಿ ನೀರಿಗೆ ಹಾಕಿ ಆ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. 
icon

(4 / 8)

ಕರಿಜೀರಿಗೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಇದು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅರ್ಧ ಬಟ್ಟಲು ತಣ್ಣನೆಯ ಹಾಲಿಗೆ ಒಂದು ಚಿಟಿಕೆ ಕಪ್ಪು ಜೀರಿಗೆ ಪುಡಿಯನ್ನು ಸೇರಿಸಿ ಕುಡಿದರೆ ಅಜೀರ್ಣ ಕಡಿಮೆಯಾಗುತ್ತದೆ. ಕಪ್ಪು ಜೀರಿಗೆಯಿಂದ ತಯಾರಿಸಿದ ಈ ಎಣ್ಣೆಯನ್ನು ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಇದು ಮೈಗ್ರೇನ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಎಣ್ಣೆಯಿಂದ ಹಣೆಗೆ ಮಸಾಜ್ ಮಾಡುವುದರಿಂದ ಮೈಗ್ರೇನ್ ನೋವನ್ನು ನಿವಾರಿಸಬಹುದು.
icon

(5 / 8)

ಮಧುಮೇಹ ನಿಯಂತ್ರಣಕ್ಕೆ ಕಪ್ಪು ಜೀರಿಗೆ ಸೇವನೆ ಬಹಳ ಉತ್ತಮ. ಮಧುಮೇಹಿಗಳು ಕಪ್ಪು ನೀರಿಗೆಯನ್ನು ಕುದಿಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಬಹುದು. 
icon

(6 / 8)

ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ. ದೇಹದಲ್ಲಿನ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸುವ ಮೂಲಕ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ಹಾಲಿನೊಂದಿಗೆ ಕಹಿಜೀರಿಗೆ ಎಣ್ಣೆಯನ್ನು ಮಿಶ್ರಣ ಮಾಡಿ ಕುಡಿಯುವುದು ಉತ್ತಮ ವಿಧಾನ. 
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(8 / 8)

IPL_Entry_Point

ಇತರ ಗ್ಯಾಲರಿಗಳು