ತ್ವಚೆಯ ಅಂದದಿಂದ ಹೃದಯದ ಆರೋಗ್ಯದವರೆಗೆ, ಪ್ರತಿದಿನ 2 ತುಳಸಿ ಎಲೆ ತಿನ್ನುವುದರಿಂದಾಗುವ ಪ್ರಯೋಜನಗಳಿವು
- Tulsi leaves: ಪ್ರತಿದಿನ ಎರಡು ತುಳಸಿ ಎಲೆಗಳನ್ನು ತಿನ್ನುವುದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ. ಅಧಿಕ ರಕ್ತದೊತ್ತಡ ನಿಯಂತ್ರಣದಿಂದ ಹೃದ್ರೋಗ ನಿವಾರಣೆಯವರೆಗೆ ತುಳಸಿ ಎಲೆ ಸೇವನೆಯಿಂದಾಗುವ ಪ್ರಯೋಜನ ತಿಳಿಯಿರಿ.
- Tulsi leaves: ಪ್ರತಿದಿನ ಎರಡು ತುಳಸಿ ಎಲೆಗಳನ್ನು ತಿನ್ನುವುದರಿಂದ ಆರೋಗ್ಯಕ್ಕಿದೆ ನೂರಾರು ಪ್ರಯೋಜನ. ಅಧಿಕ ರಕ್ತದೊತ್ತಡ ನಿಯಂತ್ರಣದಿಂದ ಹೃದ್ರೋಗ ನಿವಾರಣೆಯವರೆಗೆ ತುಳಸಿ ಎಲೆ ಸೇವನೆಯಿಂದಾಗುವ ಪ್ರಯೋಜನ ತಿಳಿಯಿರಿ.
(1 / 6)
ತುಳಸಿ ಗಿಡ ಬಹುತೇಕ ಎಲ್ಲರ ಮನೆಗಳಲ್ಲೂ ಇರುತ್ತದೆ. ಪ್ರತಿದಿನ ಎರಡು ಎಲೆಗಳನ್ನು ಜಗಿಯುವುದು ಅಥವಾ ತುಳಸಿ ರಸವನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ. ಶೀತ ಮತ್ತು ಕೆಮ್ಮಿನಂತಹ ಸಾಮಾನ್ಯ ಸಮಸ್ಯೆಗಳು ಗುಣವಾಗುವ ಜೊತೆಗೆ, ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. (Unsplash)
(2 / 6)
ತುಳಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯಕ. ಪ್ರತಿದಿನ ತುಳಸಿ ಎಲೆಗಳನ್ನು ತಿನ್ನುವುದರಿಂದ ಕೆಲವು ರೋಗಗಳು ಬಾರದಂತೆ ತಡೆಯಬಹುದು.(Unsplash)
(3 / 6)
ತುಳಸಿ ಎಲೆಗಳನ್ನು ಪ್ರತಿದಿನ ಜಗಿಯುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇದು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ. ಹಾಗಾಗಿ ಪ್ರತಿದಿನ ಬೆಳಗ್ಗೆ ತುಳಸಿ ಎಲೆ ತಿನ್ನುವುದನ್ನು ರೂಢಿಸಿಕೊಳ್ಳಿ.(Unsplash)
(4 / 6)
ತುಳಸಿ ಎಲೆಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ತಡೆಯಬಹುದು.(Unsplash)
(5 / 6)
ತುಳಸಿ ಎಲೆಗಳು ಹೃದಯದ ಆರೋಗ್ಯಕ್ಕೂ ಉತ್ತಮ. ಇವುಗಳನ್ನು ಪ್ರತಿದಿನ ತಿನ್ನುವುದರಿಂದ ಹೃದಯದ ಕಾರ್ಯಕ್ಷಮತೆ ವೃದ್ಧಿಸುತ್ತದೆ.(Unsplash)
ಇತರ ಗ್ಯಾಲರಿಗಳು