Hiccups Tips: ಏನೇ ಸರ್ಕಸ್ ಮಾಡಿದ್ರು ಬಿಕ್ಕಳಿಕೆ ಕಡಿಮೆ ಆಗಲ್ವಾ? ಈ ಸಿಂಪಲ್ ಟ್ರಿಕ್ಸ್ ಅನುಸರಿಸಿ ನೋಡಿ, ತಟ್ಟಂತ ನಿಲ್ಲುತ್ತೆ
Hiccups tips: ಸಾಮಾನ್ಯವಾಗಿ ಎಲ್ಲರಿಗೂ ಬಿಕ್ಕಳಿಕೆ ಬರುತ್ತದೆ. ಕೆಲವರಿಗೆ ತಕ್ಷಣ ನಿಲ್ಲುತ್ತದೆ, ಆದರೆ ಇನ್ನೂ ಕೆಲವರಿಗೆ ನಿರಂತರವಾಗಿ ಬಿಕ್ಕಳಿಕೆ ಬರುತ್ತದೆ. ನೀರು ಕುಡಿಯುವುದರಿಂದ ಬಿಕ್ಕಳಿಕೆ ನಿಲ್ಲುತ್ತದೆ ಎಂಬ ಮಾತಿದೆ. ನೀರು ಕುಡಿದರೂ ಬಿಕ್ಕಳಿಕೆ ನಿಂತಿಲ್ಲ ಅಂದ್ರೆ ಹೀಗೆ ಮಾಡಿ, ತಕ್ಷಣ ನಿಲ್ಲದಿದ್ದರೆ ಕೇಳಿ.
(1 / 8)
ಬಿಕ್ಕಳಿಕೆ ಯಾವಾಗ ಬೇಕಾದರೂ ಬರಬಹುದು. ಸ್ವಲ್ಪ ನೀರು ಕುಡಿದ ತಕ್ಷಣ ಕೆಲವರಿಗೆ ಬಿಕ್ಕಳಿಕೆ ನಿಲ್ಲುತ್ತದೆ. ಆದರೆ ಕೆಲವೊಮ್ಮೆ ಬಿಕ್ಕಳಿಕೆ ತಾನಾಗಿಯೇ ನಿಲ್ಲುವುದಿಲ್ಲ. ಇದು ಕೆಲವು ಸೆಕೆಂಡುಗಳಿಂದ ನಿಮಿಷಗಳವರೆಗೆ ಇರುತ್ತದೆ. ತಿನ್ನುವ ಸಮಯದಲ್ಲಿ ಹೆಚ್ಚಾಗಿ ಬಿಕ್ಕಳಿಕೆ ಬರುತ್ತದೆ. ಇದನ್ನು ತಕ್ಷಣಕ್ಕೆ ನಿಲ್ಲಿಸಲು ಇಲ್ಲಿ ಕೆಲವೊಂದು ಸರಳ ಟಿಪ್ಸ್‌ಗಳಿವೆ.
(2 / 8)
ಹೆಚ್ಚು ಮಸಾಲೆಯುಕ್ತ ಆಹಾರವನ್ನು ತಿನ್ನುವುದು, ಆಲ್ಕೋಹಾಲ್, ಸೋಡಾದಂತಹ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದು ಮತ್ತು ತುಂಬಾ ಬಿಸಿಯಾದ ಅಥವಾ ತುಂಬಾ ತಣ್ಣನೆಯ ಆಹಾರವನ್ನು ತಿನ್ನುವುದು ಬಿಕ್ಕಳಿಕೆಗೆ ಕಾರಣವಾಗಬಹುದು.ಕೆಲವೊಮ್ಮೆ ಕಾರಣವೇ ಇಲ್ಲದೇ ಬಿಕ್ಕಳಿಕೆ ಬರುತ್ತದೆ.
(3 / 8)
ನೀರು ಕುಡಿದರೂ ಬಿಕ್ಕಳಿಕೆ ಕಡಿಮೆಯಾಗದಿದ್ದರೆ ಸ್ವಲ್ಪ ಹೊತ್ತು ಉಸಿರು ಬಿಗಿ ಹಿಡಿದುಕೊಳ್ಳಿ. ಉಸಿರನ್ನು 10 ರಿಂದ 20 ಸೆಕೆಂಡುಗಳ ಕಾಲ ಹಿಡಿದುಕೊಂಡು ಮತ್ತೆ ಉಸಿರು ತೆಗೆದುಕೊಳ್ಳಿ. ಸ್ವಲ್ಪ ಹೊತ್ತು ಹೀಗೆ ಮಾಡಿದರೆ ಬಿಕ್ಕಳಿಕೆ ಕಡಿಮೆಯಾಗುತ್ತದೆ.
(4 / 8)
ಬಿಕ್ಕಳಿಕೆಯನ್ನು ನಿಲ್ಲಿಸುವ ಇನ್ನೊಂದು ವಿಧಾನವೆಂದರೆ ಒಂದು ಲೋಟ ನೀರು ಕುಡಿಯುವುದು. ಆದರೆ ಸಾಮಾನ್ಯವಾಗಿ ಅಲ್ಲ, ನೀವು ಮೂಗು ಮುಚ್ಚಿಕೊಂಡು ನೀರು ಕುಡಿಯಬೇಕು. ಹೀಗೆ ಮಾಡಿದರೆ ಬಿಕ್ಕಳಿಕೆ ತಕ್ಷಣ ಕಡಿಮೆಯಾಗುತ್ತದೆ.
(5 / 8)
ಎಷ್ಟೇ ಪ್ರಯತ್ನ ಪಟ್ಟರೂ ಬಿಕ್ಕಳಿಕೆ ನಿಲ್ಲದಿದ್ದರೆ... ನಿಂಬೆಹಣ್ಣನ್ನು ಕತ್ತರಿಸಿ ಅದರ ವಾಸನೆ ಆಗ್ರಾಣಿಸಿ. ಸ್ವಲ್ಪ ಹೊತ್ತಿನ ನಂತರ ಬಿಕ್ಕಳಿಕೆ ನಿಲ್ಲುತ್ತದೆ. ಅಥವಾ ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡರೆ ಬಿಕ್ಕಳಿಕೆ ತಕ್ಷಣವೇ ನಿಲ್ಲುತ್ತದೆ.
(6 / 8)
ಒಂದು ಲೋಟ ತಣ್ಣೀರಿನಲ್ಲಿ ಸಕ್ಕರೆ ಕರಗಿಸಿ, ಸಿರಪ್ ರೀತಿ ಮಾಡಿ ಕುಡಿದರೂ ಬಿಕ್ಕಳಿಕೆ ನಿಲ್ಲುವುದಿಲ್ಲ ಆದರೆ ಎರಡು ದಿನ ಸತತವಾಗಿ ಬಿಕ್ಕಳಿಕೆ ನಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಿ.
(7 / 8)
ನೀವು ಹೊರಗಡೆ ಇರುವಾಗ ನಿಮಗೆ ಬಿಕ್ಕಳಿಕೆ ಬಂದರೆ, ಒಂದು ಕೈಯಿಂದ ಇನ್ನೊಂದು ಅಂಗೈ ಮೇಲೆ ಕೊಂಚ ಒತ್ತಿ,. ತುಂಬಾ ಗಟ್ಟಿಯಾಗಿ ಒತ್ತಲು ಪ್ರಯತ್ನಿಸಬೇಡಿ. ಇದರಿಂದ ಸ್ವಲ್ಪ ಸಮಯದ ನಂತರ ಬಿಕ್ಕಳಿಕೆ ನಿಲ್ಲುತ್ತದೆ.
ಇತರ ಗ್ಯಾಲರಿಗಳು