ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಚರ್ಮದ ಆರೋಗ್ಯದವರೆಗೆ: ಪ್ರತಿದಿನ ಬಾದಾಮಿ ತಿನ್ನುವುದರ ಪ್ರಯೋಜನಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಚರ್ಮದ ಆರೋಗ್ಯದವರೆಗೆ: ಪ್ರತಿದಿನ ಬಾದಾಮಿ ತಿನ್ನುವುದರ ಪ್ರಯೋಜನಗಳಿವು

ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಚರ್ಮದ ಆರೋಗ್ಯದವರೆಗೆ: ಪ್ರತಿದಿನ ಬಾದಾಮಿ ತಿನ್ನುವುದರ ಪ್ರಯೋಜನಗಳಿವು

ಬಾದಾಮಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಹೀಗಾಗಿ ಇವುಗಳನ್ನು ಪ್ರತಿದಿನ ತಿನ್ನುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ರೋಗನಿರೋಧಕ ಶಕ್ತಿ ಹೆಚ್ಚಳದಿಂದ ಚರ್ಮದ ಆರೋಗ್ಯದವರೆಗೆ ಬಾದಾಮಿಯ ಪ್ರಯೋಜನ ಹಲವು. ಇಲ್ಲಿದೆ ಈ ಬಗ್ಗೆ ಇನ್ನಷ್ಟು ಮಾಹಿತಿ.

ಬಾದಾಮಿ ಆರೋಗ್ಯಕರ ಮತ್ತು ಅತ್ಯಂತ ಪೌಷ್ಟಿಕ ದ್ವಿದಳ ಧಾನ್ಯಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಾದಾಮಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಮತ್ತು ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
icon

(1 / 9)

(Canva)

ಬಾದಾಮಿ ನೆನಪಿನ ಶಕ್ತಿಯನ್ನು ಸುಧಾರಿಸಲು, ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಮೆದುಳಿನ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿರುವ ಎರಡು ಪ್ರಮುಖ ಪೋಷಕಾಂಶಗಳೆಂದರೆ ರೈಬೋಫ್ಲೇವಿನ್ ಮತ್ತು ಎಲ್-ಕಾರ್ನಿಟೈನ್. ಇದು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 
icon

(2 / 9)

(Pixabay)

ಬಾದಾಮಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಬಾದಾಮಿಯು ಜ್ವರ ಮತ್ತು ನೆಗಡಿಯಂತಹ ವೈರಲ್ ಸೋಂಕುಗಳ ವಿರುದ್ಧ ಹೋರಾಡುವ ಬಿಳಿ ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಬಾದಾಮಿಯಲ್ಲಿರುವ ಸಂಯುಕ್ತಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
icon

(3 / 9)

ಬಾದಾಮಿ ತಿನ್ನುವುದರಿಂದ ಶಕ್ತಿ ಹೆಚ್ಚಳ, ಆರೋಗ್ಯಕರ ಮತ್ತು ಬಲವಾದ ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಬಾದಾಮಿಯು ಮೊಟ್ಟೆಗಳಿಗಿಂತ ಹೆಚ್ಚಿನ ಪ್ರೋಟೀನ್ ಅನ್ನು ಒದಗಿಸುತ್ತದೆ. ಬಾದಾಮಿಯಲ್ಲಿರುವ ಮ್ಯಾಂಗನೀಸ್ ಮತ್ತು ತಾಮ್ರವು ಮೈಟೊಕಾಂಡ್ರಿಯಾವನ್ನು ಶಕ್ತಿ ಉತ್ಪಾದನೆಗೆ ಅಡ್ಡಿಪಡಿಸುವ ಫ್ರೀ ರಾಡಿಕಲ್‍ಗಳಿಂದ ರಕ್ಷಿಸುತ್ತದೆ.
icon

(4 / 9)

ಬಾದಾಮಿಯಲ್ಲಿರುವ ರಂಜಕ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ರಂಜಕವು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
icon

(5 / 9)

ಬಾದಾಮಿ ತಿನ್ನುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ, ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಟೆಚಿನ್, ಎಪಿಕಾಟೆಚಿನ್ ಮತ್ತು ಫ್ಲೇವನಾಯ್ಡ್‌ಗಳಿವೆ. ಚರ್ಮಕ್ಕೆ ಪ್ರಯೋಜನಕಾರಿಯಾಗಿರುವುದರಿಂದ ಬಾದಾಮಿ ಹಾಲನ್ನು ಸಾಬೂನುಗಳಂತಹ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ. 
icon

(6 / 9)

ಬಾದಾಮಿಯಲ್ಲಿ ಹಲವು ಆರೋಗ್ಯ ಪ್ರಯೋಜನಗಳಿವೆ ಎಂದು ಹೆಚ್ಚೆಚ್ಚು ಸೇವಿಸಬಾರದು. ಮಿತವಾಗಿ ಸೇವಿಸುವುದು ಉತ್ತಮ. ಪ್ರತಿ ದಿನಕ್ಕೆ ನಾಲ್ಕು ಬಾದಾಮಿಗಳಿಗಿಂತ ಹೆಚ್ಚು ತಿನ್ನಬೇಡಿ. ಹಿಂದಿನ ರಾತ್ರಿ ಅವುಗಳನ್ನು ನೆನೆಸಿ ಮರುದಿನ ಬೆಳಿಗ್ಗೆ ತಿನ್ನಿ. ಇವು ನಿಮ್ಮ ಆರೋಗ್ಯಕ್ಕೆ ಉತ್ತಮ.
icon

(7 / 9)

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
icon

(8 / 9)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.
icon

(9 / 9)

ಇತರ ಗ್ಯಾಲರಿಗಳು