ಅತ್ಯಧಿಕ ಪೋಷಕಾಂಶ ಇರುವ ಬ್ರೇಕ್‌ಫಾಸ್ಟ್ ಐಟಂಗಳಿವು; ತೂಕ ಇಳಿಸೋ ಪ್ಲಾನ್ ಇರೋರಿಗು ಇದು ಬೆಸ್ಟ್
- ಪ್ರತಿದಿನ ಬೆಳಿಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ದಿನವಿಡೀ ಕ್ರಿಯಾಶೀಲರಾಗಿ ಇರಬಹುದು. ಇದರಿಂದ ನಮ್ಮ ಒಟ್ಟಾರೆ ಆರೋಗ್ಯವೂ ಸುಧಾರಿಸುತ್ತದೆ. ತೂಕ ಇಳಿಸುವ ಪ್ಲಾನ್ ಇರುವವರಿಗೂ ಈ ಉಪಾಹಾರಗಳು ಹೇಳಿ ಮಾಡಿಸಿದವುಗಳು. ಅಂತಹ ಉಪಹಾರಗಳ ಪಟ್ಟಿ ಇಲ್ಲಿದೆ.
- ಪ್ರತಿದಿನ ಬೆಳಿಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ದಿನವಿಡೀ ಕ್ರಿಯಾಶೀಲರಾಗಿ ಇರಬಹುದು. ಇದರಿಂದ ನಮ್ಮ ಒಟ್ಟಾರೆ ಆರೋಗ್ಯವೂ ಸುಧಾರಿಸುತ್ತದೆ. ತೂಕ ಇಳಿಸುವ ಪ್ಲಾನ್ ಇರುವವರಿಗೂ ಈ ಉಪಾಹಾರಗಳು ಹೇಳಿ ಮಾಡಿಸಿದವುಗಳು. ಅಂತಹ ಉಪಹಾರಗಳ ಪಟ್ಟಿ ಇಲ್ಲಿದೆ.
(1 / 7)
ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಾವು ಆಕ್ಟಿವ್ ಆಗಿರಬೇಕು ಅಂದ್ರೆ ಪೌಷ್ಟಿಕ ಆಹಾರ ಸೇವಿಸುವುದು ಅತಿ ಅಗತ್ಯ. ಇದರಿಂದ ನಾವು ದಿನವಿಡೀ ಕ್ರಿಯಾಶೀಲರಾಗಿ ಇರಬಹುದು. ಅಲ್ಲದೇ ತೂಕ ಇಳಿಸುವ ಪ್ಲಾನ್ ಇರುವವರಿಗೂ ಇದು ಬೆಸ್ಟ್. ಹಾಗಾದರೆ ಯಾವೆಲ್ಲಾ ತಿನಿಸುಗಳು ಬ್ರೇಕ್‌ಫಾಸ್ಟ್ ಹೇಳಿ ಮಾಡಿಸಿದ್ದು ನೋಡಿ.
(2 / 7)
ಮೊಟ್ಟೆ: ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಉತ್ತಮ ಆಯ್ಕೆ. ಪ್ರೊಟೀನ್‌ನ ಮೂಲವಾಗಿರುವುದರಿಂದ, ಮೊಟ್ಟೆ ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ. ಬೆಳಗಿನ ಹೊತ್ತು ಮೊಟ್ಟೆಗಳನ್ನು ಬೇಯಿಸಿ ತಿನ್ನಬಹುದು. ಬೇಕಿದ್ದರೆ ಆಮ್ಲೆಟ್ ಅಥವಾ ಸ್ಕ್ರ್ಯಾಂಬಲ್ಡ್ ಎಗ್ ಮಾಡಿ ತಿನ್ನಬಹುದು.
(3 / 7)
ಮೊಳಕೆ ಕಾಳುಗಳು: ಮೊಳಕೆಕಾಳುಗಳು ನಮ್ಮ ಬ್ರೇಕ್‌ಫಾಸ್ಟ್‌ಗೆ ಹೇಳಿ ಮಾಡಿಸಿದಂತವು. ಬೆಳಗೆದ್ದು ಮೊಳಕೆಕಾಳು ಸೇವಿಸುವುದರಿಂದ ದಿನವಿಡೀ ಹೊಟ್ಟೆ ತುಂಬಿದಂತಿರುತ್ತದೆ. ಇದರಿಂದ ಪದೇ ಪದೇ ತಿನ್ನುವುದನ್ನು ತಪ್ಪಿಸಬಹುದು. ದೇಹಕ್ಕೆ ಚೈತನ್ಯ ನೀಡುವ ಮೂಲಕ ಶಕ್ತಿಯ ಕೊರತೆಯನ್ನು ನೀಗಿಸುತ್ತದೆ.
(4 / 7)
ಓಟ್ಸ್: ಓಟ್ಸ್ ನಾರಿನಾಂಶ ಸಮೃದ್ಧ ಆಹಾರವಾಗಿದ್ದು, ನಿಮ್ಮ ಒಟ್ಟಾರೆ ಆರೋಗ್ಯವನ್ನು ರಕ್ಷಿಸಲು ಬೆಳಗಿನ ಉಪಾಹಾರಕ್ಕಾಗಿ ಸೇವಿಸಬಹುದು. ಇದು ತೂಕ ಇಳಿಕೆಗೆ ಹೇಳಿ ಮಾಡಿಸಿದ ಉಪಾಹಾರ.
(5 / 7)
ಅಡೈ ದೋಸೆ: ಕಡಲೆ ಹಿಟ್ಟು ಮತ್ತು ಕಾಳುಗಳೊಂದಿಗೆ ತಯಾರಿಸಿದ ಅಡೈ ದೋಸೆ ದೇಹಕ್ಕೆ ಅಗತ್ಯವಾದ ಪ್ರೋಟೀನ್ ಹಾಗೂ ಪೋಷಕಾಂಶಗಳನ್ನು ಒದಗಿಸುತ್ತದೆ.
(6 / 7)
ಅವಲಕ್ಕಿ: ಅವಲಕ್ಕಿ ಹೊಟ್ಟೆ ಕೂಡ ದಿನವಿಡೀ ಹೊಟ್ಟೆ ತುಂಬಿದಂತಿರಲು ಸಹಾಯ ಮಾಡುತ್ತದೆ. ಅವಲಕ್ಕಿ ಸೇವನೆ ತೂಕ ಇಳಿಕೆಗೂ ಬೆಸ್ಟ್. ಇದು ಉತ್ತಮ ಪೌಷ್ಟಿಕ ಆಹಾರವಾಗಿದ್ದು, ನಮ್ಮ ಒಟ್ಟಾರೆ ಆರೋಗ್ಯಕ್ಕೂ ಉತ್ತಮ.
ಇತರ ಗ್ಯಾಲರಿಗಳು