Diabetes Symptoms: ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ಮಧುಮೇಹದ ಅಸಹಜ ರೋಗಲಕ್ಷಣಗಳಿವು; ನಿರ್ಲಕ್ಷ್ಯ ಮಾಡಿದ್ರೆ ಅಪಾಯ ಖಚಿತ
Diabetes symptoms: ಮಧುಮೇಹ ಪ್ರಪಂಚದಲ್ಲಿ ಹಲವಾರು ಜನರನ್ನು ಕಾಡುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆ. ವರ್ಷದಿಂದ ವರ್ಷಕ್ಕೆ ಮಧುಮೇಹಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮಧುಮೇಹದ ಕೆಲವು ಅಸಹಜ ರೋಗಲಕ್ಷಣಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಸಂಕೇತಗಳನ್ನು ನಿರ್ಲಕ್ಷ್ಯ ಮಾಡದಿರಿ.
(1 / 10)
ವಿಶ್ವ ಆರೋಗ್ಯ ಸಂಸ್ಥೆ 2025ರ ವರದಿಯ ಪ್ರಕಾರ ಭಾರತದಲ್ಲಿ 100 ಕೋಟಿ ಅಧಿಕ ಮಂದಿ ಡಯಾಬಿಟಿಸ್ ಅಥವಾ ಮಧುಮೇಹದಿಂದ ಬಳಸುತ್ತಿದ್ದಾರೆ. ಇದೊಂದು ಗುಣಪಡಿಸಲಾಗದ ಕಾಯಿಲೆಯಾದ ಕಾರಣ ಇದರ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಡಯಾಬಿಟಿಸ್ ಆರಂಭಿಕ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಸಾಮಾನ್ಯ ಲಕ್ಷಣಗಳು ಹೊರತು ಪಡಿಸಿಯೂ ಡಯಾಬಿಟಿಸ್‌ನ ಕೆಲವು ಅಸಮಾನ್ಯ ಲಕ್ಷಣಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.
(2 / 10)
ಚರ್ಮದಲ್ಲಿನ ಬದಲಾವಣೆ ನಮ್ಮ ಚರ್ಮವು ದೇಹದೊಳಗೆ ಏನು ನಡೆಯುತ್ತಿದೆ ಎಂಬುದನ್ನು ಸೂಚಿಸುವ ಅಂಗಾಂಶವಾಗಿದೆ. ಮಧುಮೇಹದ ಲಕ್ಷಣಗಳು ಕೂಡ ಚರ್ಮದಲ್ಲಿ ಕಾಣಿಸುತ್ತವೆ. ಮಧುಮೇಹ ಬರುವ ಆರಂಭದಲ್ಲಿ ಕುತ್ತಿಗೆ, ಕಂಕುಳ ಸುತ್ತಲೂ, ತೊಡೆಸಂಧಿಗಳಲ್ಲಿ ಚರ್ಮ ಕಪ್ಪಾಗುತ್ತದೆ. ವಿಶೇಷವಾಗಿ ಚರ್ಮ ಮಡಿಕೆಯಾಗುವ ಭಾಗದಲ್ಲಿ ಬದಲಾವಣೆ ಉಂಟಾದರೆ ಇದನ್ನು ನಿರ್ಲಕ್ಷ್ಯ ಮಾಡದಿರಿ.
(freepik)(3 / 10)
ಪದೇ ಪದೇ ಸೋಂಕಿಗೆ ಒಳಗಾಗುವುದು ನೀವು ಪದೇ ಪದೇ ಸೋಂಕಿಗೆ ಒಳಗಾದರೆ ಇದು ಮಧುಮೇಹದ ಸೂಚಕವಾಗಿರಬಹುದು. ಗುಕ್ಲೋಸ್ ಮಟ್ಟದಲ್ಲಿನ ವ್ಯತ್ಯಾಸವು ರೋಗನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ. ಇದರಿಂದ ಪದೇ ಪದೇ ಸೋಂಕು ಕಾಣಿಸುತ್ತದೆ.
(4 / 10)
ಪೆರಿಯೊಡಾಂಟಿಟಿಸ್ ಇದು ವಸಡಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇದರಿಂದಾಗಿ ಗಂಭೀರ ಸ್ವರೂಪದ ಸಮಸ್ಯೆ ಕಾಣಿಸಬಹುದು. ಇದರಿಂದಾಗಿ ವಸಡು ಹಾಗೂ ಹಲ್ಲಿನ ನಡುವೆ ಅಂತರ ಉಂಟಾಗಬಹುದು. ನಿರಂತರವಾಗಿ ಉಸಿರಿನ ದುರ್ವಾಸನೆ, ವಸಡಿನಿಂದ ರಕ್ತಸ್ರಾವ ಕಾಣಿಸಬಹುದು. ಈ ರೀತಿ ಲಕ್ಷಣಗಳು ಕಂಡು ಬಂದರೆ ಕೂಡಲೇ ನೀವು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪರೀಕ್ಷೆ ಮಾಡಿಸಿಕೊಳ್ಳಬೇಕು.
(5 / 10)
ದೃಷ್ಟಿ ಮಸುಕಾಗುವುದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಳಿತವು ದೃಷ್ಟಿ ದೋಷಕ್ಕೆ ಕಾರಣವಾಗಬಹುದು. ಇದರಿಂದ ನಿಮಗೆ ಕಣ್ಣು ಮಸುಕಾಗಿ ಕಾಣಿಸಬಹುದು. ಇದ್ದಕ್ಕಿದ್ದಂತೆ ವಸ್ತುಗಳು ಅಸ್ಪಷ್ಟವಾಗಿ ಗೋಚರಿಸಬಹುದು. ನೀವು ಈ ರೀತಿಯ ಲಕ್ಷಣ ಅನುಭವಿಸಿದರೆ ಕೂಡಲೇ ವೈದ್ಯರ ಬಳಿ ಸಲಹೆ ಪಡೆದುಕೊಳ್ಳಿ.
(6 / 10)
ಶ್ರವಣದೋಷರಕ್ತದಲ್ಲಿನ ಸಕ್ಕರೆಯ ಮಟ್ಟ ಅಧಿಕವಾದಾಗ ಕಿವಿಯಲ್ಲಿನ ಸಣ್ಣ ರಕ್ತನಾಳಗಳು ಮತ್ತು ನರಗಳಿಗೆ ಹಾನಿಯಾಗಬಹುದು. ಇದು ಕಿವುಡತನ ಹಾಗೂ ಶ್ರವಣ ಸಮಸ್ಯೆಗಳಿಗೆ ಕಾರಣವಾಗಬಹುದು.
(7 / 10)
ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದು ಚಿಕ್ಕ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದು ಸಾಮಾನ್ಯ, ಆದರೂ ಒಂದು ವಯಸ್ಸನ್ನು ಮೀರಿದ ನಂತರವೂ ಮಕ್ಕಳು ರಾತ್ರಿ ವೇಳೆ ಪದೇ ಪದೇ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದರೆ ಇದನ್ನು ನೀವು ನಿರ್ಲಕ್ಷಿಸುವಂತಿಲ್ಲ. ಮಕ್ಕಳ ಮೂತ್ರ ವಿರ್ಸಜನೆಯ ವಿಚಾರದಲ್ಲಿ ಅಸಹಜತೆ ಕಂಡುಬಂದರೆ ನೀವು ಕೂಡಲೇ ವೈದ್ಯರಲ್ಲಿ ತೋರಿಸಬೇಕು.
(8 / 10)
ಮನಸ್ಥಿತಿಯ ಬದಲಾವಣೆ ಮಧುಮೇಹವು ನಮ್ಮ ದೇಹದ ಮೇಲೆ ಮಾತ್ರವಲ್ಲ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಳಿತವು ಮೂಡ್ ಸ್ವಿಂಗ್, ಕಿರಿಕಿರಿ, ಏಕಾಗ್ರತೆಯ ಕೊರತೆಯಂತಹ ಲಕ್ಷಣಗಳನ್ನೂ ಉಂಟು ಮಾಡಬಹುದು. ಇದು ಖಿನ್ನತೆ ಹಾಗೂ ಆತಂಕಕ್ಕೂ ಕಾರಣವಾಗುತ್ತದೆ.
(9 / 10)
ಜುಮ್ಮೆನಿಸುವಿಕೆ ಹಾಗೂ ಮರಗಟ್ಟುವಿಕೆ ನರ ಸಮಸ್ಯೆಗಳು ಮಧುಮೇಹಿಗಳಲ್ಲಿ ಸಾಮಾನ್ಯವಾಗಿದೆ. ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ ಕೈಕಾಲುಗಳು ಜುಮ್ಮೆನಿಸುವಿಕೆ, ಪಾದಗಳು ಮರಗಟ್ಟುವುದು ಇವೆಲ್ಲವೂ ಸಾಮಾನ್ಯವಾಗಿದೆ.
ಇತರ ಗ್ಯಾಲರಿಗಳು