ಉತ್ತಮ ಜೀರ್ಣಾಂಗ ವ್ಯವಸ್ಥೆಯಿಂದ ಆರೋಗ್ಯಕರ ಚರ್ಮದವರೆಗೆ: ತೆಂಗಿನೆಣ್ಣೆ ಸೇವನೆಯ ಪ್ರಯೋಜನಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉತ್ತಮ ಜೀರ್ಣಾಂಗ ವ್ಯವಸ್ಥೆಯಿಂದ ಆರೋಗ್ಯಕರ ಚರ್ಮದವರೆಗೆ: ತೆಂಗಿನೆಣ್ಣೆ ಸೇವನೆಯ ಪ್ರಯೋಜನಗಳಿವು

ಉತ್ತಮ ಜೀರ್ಣಾಂಗ ವ್ಯವಸ್ಥೆಯಿಂದ ಆರೋಗ್ಯಕರ ಚರ್ಮದವರೆಗೆ: ತೆಂಗಿನೆಣ್ಣೆ ಸೇವನೆಯ ಪ್ರಯೋಜನಗಳಿವು

Coconut Oil Benefits: ತೆಂಗಿನ ಎಣ್ಣೆಯನ್ನು ಶತಮಾನಗಳಿಂದಲೂ ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೇರಳ ಹಾಗೂ ಕರ್ನಾಟಕದ ಕರಾವಳಿಯಲ್ಲಿ ಅಡುಗೆ ತೆಂಗಿನೆಣ್ಣೆಯನ್ನು ಬಳಸಲಾಗುತ್ತದೆ. ಇದರ ಆರೋಗ್ಯ ಪ್ರಯೋಜನ ತಿಳಿದರೆ ನೀವು ಕೂಡ ದಿನನಿತ್ಯ ಅಡುಗೆಗೆ ಬಳಸುತ್ತೀರಿ.

ತೆಂಗಿನ ಎಣ್ಣೆಯನ್ನು ಆಯುರ್ವೇದದಲ್ಲಿ ಅದ್ಭುತ ಔಷಧಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯನ್ನು ತೆಂಗಿನಕಾಯಿಯ ತಿರುಳಿನಿಂದ ತಯಾರಿಸಲಾಗುತ್ತದೆ. ಈ ಎಣ್ಣೆಯನ್ನು ಶತಮಾನಗಳಿಂದಲೂ ಆಯುರ್ವೇದ ಚಿಕಿತ್ಸೆಗಳಲ್ಲಿ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದು ಚರ್ಮವನ್ನು ಪೋಷಿಸುತ್ತದೆ, ಕೂದಲನ್ನು ಬಲಪಡಿಸುತ್ತದೆ ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ.
icon

(1 / 9)

(Pinterest)

ಈ ಎಲ್ಲಾ ಪ್ರಯೋಜನಗಳ ಹೊರತಾಗಿ, ಇದರ ನಿಯತ ಬಳಕೆಯು ಚರ್ಮದ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ. ಬಹುತೇಕರು ಅಡುಗೆಯಲ್ಲಿ ತೆಂಗಿನೆಣ್ಣೆಯನ್ನು ಬಳಸಲು ಆರಂಭಿಸಿದ್ದಾರೆ. ಕರ್ನಾಟಕದ ಕರಾವಳಿಯಲ್ಲಿ ಅಡುಗೆಗೆ ತೆಂಗಿನೆಣ್ಣೆಯನ್ನು ಬಳಸಲಾಗುತ್ತದೆ. ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
icon

(2 / 9)

ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ತೆಂಗಿನ ಎಣ್ಣೆಯನ್ನು ಶತಮಾನಗಳಿಂದ ಬಳಸಲಾಗುತ್ತದೆ. ಇದು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ ಮತ್ತು ಮೃದುಗೊಳಿಸುತ್ತದೆ. ಚರ್ಮದ ಕಿರಿಕಿರಿ, ಊತ ಹಾಗೂ ಸೋಂಕನ್ನು ನಿವಾರಿಸುತ್ತದೆ. ಈ ಎಣ್ಣೆಯು ಕೂದಲನ್ನು ಬಲವಾಗಿಸಲು, ಹೊಳೆಯುವಂತೆ ಮಾಡುವುದಲ್ಲದೆ, ಕೂದಲು ಉದುರುವುದನ್ನು ತಡೆಯುತ್ತದೆ.
icon

(3 / 9)

ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ವಾಯು, ಮಲಬದ್ಧತೆ ಮುಂತಾದ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಲ್ಲದೆ, ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ ಹಾಗೂ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
icon

(4 / 9)

ತೆಂಗಿನ ಎಣ್ಣೆಯಲ್ಲಿ ಆಂಟಿವೈರಸ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಹಾರದಲ್ಲಿ ತೆಂಗಿನ ಎಣ್ಣೆಯನ್ನು ಸೇರಿಸಬಹುದು.
icon

(5 / 9)

ತೆಂಗಿನ ಎಣ್ಣೆಯಲ್ಲಿ ಉತ್ತಮ ರೀತಿಯ ಸ್ಯಾಚುರೇಟೆಡ್ ಕೊಬ್ಬುಗಳಿವೆ, ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ.
icon

(6 / 9)

ತೆಂಗಿನ ಎಣ್ಣೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರತಿದಿನ 1 ರಿಂದ 2 ಟೀ ಚಮಚ ತಿನ್ನಬಹುದು. ಸಲಾಡ್, ಸ್ಮೂಥಿ ಅಥವಾ ಇತರ ಆಹಾರಗಳೊಂದಿಗೆ ಬೆರೆಸಿ ತಿನ್ನಬಹುದು. ರಾತ್ರಿ ಮಲಗುವ ಮುನ್ನ ಮುಖಕ್ಕೆ ಸ್ವಲ್ಪ ಎಣ್ಣೆ ಹಚ್ಚುವುದರಿಂದ ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ.
icon

(7 / 9)

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
icon

(8 / 9)

(Pinterest )

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ
icon

(9 / 9)

ಇತರ ಗ್ಯಾಲರಿಗಳು