ನಿಂಬೆಹಣ್ಣಿನ ಜೊತೆ 5 ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು, ದೇಹಕ್ಕೆ ವಿಷವಾಗಬಹುದು ತಿಳಿದಿರಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಂಬೆಹಣ್ಣಿನ ಜೊತೆ 5 ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು, ದೇಹಕ್ಕೆ ವಿಷವಾಗಬಹುದು ತಿಳಿದಿರಲಿ

ನಿಂಬೆಹಣ್ಣಿನ ಜೊತೆ 5 ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು, ದೇಹಕ್ಕೆ ವಿಷವಾಗಬಹುದು ತಿಳಿದಿರಲಿ

ಬೇಸಿಗೆ ಕಾಲದಲ್ಲಿ ನಿಂಬೆಹಣ್ಣಿನ ಬಳಕೆ ಕೊಂಚ ಜಾಸ್ತಿ ಎನ್ನಬಹುದು. ಬಿಸಿಲಿನ ಝಳಕ್ಕೆ ನಿಂಬೆ ಪಾನಕ ಹಾಯ್ ಎನ್ನಿಸುತ್ತದೆ. ಆದರೆ ಈ ಕೆಲವು ಪದಾರ್ಥಗಳನ್ನು ನಿಂಬೆಹಣ್ಣಿನ ಜೊತೆ ತಿನ್ನಲೇಬಾರದು. ಅದು ದೇಹಕ್ಕೆ ವಿಷವಾಗಬಹುದು.

ನಿಂಬೆಹಣ್ಣು ಬಹುಪಯೋಗಿ, ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಆರೋಗ್ಯಕ್ಕೂ ನಿಂಬೆಹಣ್ಣು ಉತ್ತಮ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಬೇಸಿಗೆಯಲ್ಲಿ ನಿಂಬೆ ಪಾನಕ, ಜ್ಯೂಸ್ ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ. ಕೆಲವೊಂದು ಆಹಾರ ಖಾದ್ಯಗಳಿಗೆ ಒಂದೆರಡು ಹನಿ ನಿಂಬೆರಸ ಹಾಕುವುದರಿಂದ ಅದರ ರುಚಿ ದುಪ್ಪಟ್ಟಾಗುತ್ತದೆ.
icon

(1 / 7)

(Shutterstock)

ಆದರೆ ನಿಂಬೆಹಣ್ಣನ್ನು ಎಲ್ಲಾ ಪದಾರ್ಥಗಳ ಜೊತೆ ಸೇವಿಸುವಂತಿಲ್ಲ. ಕೆಲವೊಂದು ಪದಾರ್ಥಗಳ ಜೊತೆ ನಿಂಬೆ ಸೇವಿಸುವುದರಿಂದ ದೇಹಕ್ಕೆ ಪ್ರಯೋಜನವಾಗುವುದಕ್ಕಿಂತ ಹಾನಿಯಾಗುವುದೇ ಹೆಚ್ಚು. ಇದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಎದುರಾಗಬಹುದು. ಹಾಗಾದರೆ ನಿಂಬೆಹಣ್ಣಿನ ಜೊತೆ ಯಾವೆಲ್ಲಾ ವಸ್ತು ತಿನ್ನಬಾರದು ನೋಡಿ.
icon

(2 / 7)

ಹಾಲು ಹಾಗೂ ಹಾಲಿನಿಂದ ತಯಾರಿಸುವ ಯಾವುದೇ ವಸ್ತುವಿನೊಂದಿಗೆ ನಿಂಬೆಹಣ್ಣು ಸೇವಿಸಬಾರದು. ನಿಂಬೆ ಒಂದು ಹುಳ್ಳಿ ಹಣ್ಣಾಗಿದ್ದು, ಇದರಲ್ಲಿ ಸಿಟ್ರಸ್ ಅಂಶ ಅಧಿಕವಾಗಿರುತ್ತದೆ. ನೀವು ಹಾಲು, ಮೊಸರು ಅಥವಾ ಹಾಲಿನ ಇತರ ಯಾವುದೇ ಉತ್ಪನ್ನಗಳ ಜೊತೆ ನಿಂಬೆಹಣ್ಣು ಸೇವಿಸಿದರೆ ಗ್ಯಾಸ್, ಸುಡುವ ಸಂವೇದನೆ, ವಾಂತಿ ಅಥವಾ ಅತಿಸಾರದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಹಾಲು ಕುಡಿದ ನಂತರ ನಿಂಬೆಹಣ್ಣು  ಅಥವಾ ನಿಂಬೆಹಣ್ಣಿನಿಂದ ತಯಾರಿಸಿದ ಯಾವುದೇ ಪಾನೀಯ ಅಥವಾ ಆಹಾರ ಪದಾರ್ಥಗಳನ್ನು ಸೇವಿಸಬೇಡಿ
icon

(3 / 7)

ಮಾವು, ಬಾಳೆಹಣ್ಣು, ಕಲ್ಲಂಗಡಿ, ಸೇಬು ಮುಂತಾದ ಸಿಹಿ ಹಣ್ಣುಗಳ ಜೊತೆ ನಿಂಬೆಹಣ್ಣು ಬೆರೆಸಿ ತಿನ್ನಬಾರದು. ನಿಂಬೆ ರಸವನ್ನು ಸಿಹಿ ಹಣ್ಣುಗಳೊಂದಿಗೆ ಬೆರೆಸಿ ಸೇವಿಸಿದಾಗ ಅದು ಎದೆಯುರಿ, ಗ್ಯಾಸ್ಟ್ರಿಕ್‌ ಮತ್ತು ಹೊಟ್ಟೆತಯುಬ್ಬರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
icon

(4 / 7)

ನಿಂಬೆಹಣ್ಣು ಹುಳಿ ರುಚಿಯನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ ಟೊಮೆಟೊ, ಹುಣಸೆಹಣ್ಣು ಅಥವಾ ವಿನೆಗರ್‌ನಂತಹ ತುಂಬಾ ಹುಳಿ ಆಹಾರ ಪದಾರ್ಥಗಳೊಂದಿಗೆ ಅದನ್ನು ತಿನ್ನುವುದರಿಂದ ಸಮಸ್ಯೆಯಾಗಬಹುದು. ವಾಸ್ತವವಾಗಿ, ಹುಳಿ ಅಂಶ ಇರುವ ಪದಾರ್ಥಗಳಲ್ಲಿ ಆಮ್ಲದ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಹುಳಿ ಪದಾರ್ಥಗಳನ್ನು ಒಟ್ಟಿಗೆ ತಿಂದಾಗ, ಅದು ಹೊಟ್ಟೆಯ ಕಿರಿಕಿರಿ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಆಹಾರದಲ್ಲಿ ಟೊಮೆಟೊ, ಹುಣಸೆಹಣ್ಣು ಅಥವಾ ವಿನೆಗರ್‌ನಂತಹ ಯಾವುದೇ ಹುಳಿ ಅಂಶ ಇರುವ ಪದಾರ್ಥ ಇದ್ದಾಗ ನಿಂಬೆಹಣ್ಣನ್ನು ತಪ್ಪಿಸಲು ಪ್ರಯತ್ನಿಸಿ.
icon

(5 / 7)

ಮೊಟ್ಟೆ ಅಥವಾ ಮೊಟ್ಟೆ ಆಧಾರಿತ ಯಾವುದೇ ಉತ್ಪನ್ನಗಳೊಂದಿಗೆ ನಿಂಬೆಹಣ್ಣು ತಿನ್ನುವುದನ್ನು ತಪ್ಪಿಸಬೇಕು. ವಾಸ್ತವವಾಗಿ, ಮೊಟ್ಟೆ ಪ್ರೊಟೀನ್‌ನ ಪ್ರಮುಖ ಮೂಲವಾಗಿದೆ. ಆದರೆ ನಿಂಬೆ ರಸವನ್ನು ಹಾಗೂ ಮೊಟ್ಟೆ ಸೇರಿದಾಗ ಅದು ಮೊಟ್ಟೆಯಲ್ಲಿರುವ ಪ್ರೊಟೀನ್ ಅನ್ನು ನಾಶಪಡಿಸುತ್ತದೆ. ಇದಲ್ಲದೆ, ನಿಂಬೆಯಿಂದಾಗಿ ಮೊಟ್ಟೆಯ ರುಚಿಯಲ್ಲಿ ಕೂಡ ಬದಲಾವಣೆಗಳಾಗಬಹುದು. ಆದ್ದರಿಂದ, ಮೊಟ್ಟೆಗಳಿಂದ ಮಾಡಿದ ಭಕ್ಷ್ಯಗಳಿಗೆ ನಿಂಬೆ ರಸವನ್ನು ಸೇರಿಸಬಾರದು.
icon

(6 / 7)

ಇಂಗು ಮತ್ತು ಗರಂ ಮಸಾಲದೊಂದಿಗೆ ನಿಂಬೆಹಣ್ಣು ತಿನ್ನುವುದನ್ನು ಸಹ ತಪ್ಪಿಸಬೇಕು. ವಾಸ್ತವವಾಗಿ ಇಂಗು ಮತ್ತು ಗರಂ ಮಸಾಲ ತುಂಬಾ ಖಾರವಾಗಿರುತ್ತವೆ. ನಿಂಬೆಹಣ್ಣನ್ನು ಅವುಗಳ ಜೊತೆ ತಿಂದರೆ, ಹೊಟ್ಟೆಯ ಕಿರಿಕಿರಿ ಮತ್ತು ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಉಂಟಾಗಬಹುದು.
icon

(7 / 7)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು