ಈ ತರಕಾರಿಗಳ ಸಿಪ್ಪೆ ಎಸೆಯೋ ಅಭ್ಯಾಸ ನಿಮ್ಗೂ ಇದ್ಯಾ? ಹಾಗಿದ್ರೆ ನಿಮ್ಮಷ್ಟು ದಡ್ಡರಿಲ್ಲ, ಯಾಕೆ ಅಂತ ನೋಡಿ
ನಾವು ಬಗೆಬಗೆಯ ತರಕಾರಿಗಳನ್ನು ತಿನ್ನುತ್ತೇವೆ. ಆದರೆ ಕೆಲವು ತರಕಾರಿಗಳನ್ನು ತಿನ್ನುವ ಅಥವಾ ಸಾರು, ಸಾಂಬಾರ್ ಮಾಡುವ ಮುನ್ನ ಸಿಪ್ಪೆಯನ್ನು ಎಸೆಯುತ್ತೇವೆ. ಈ ಸಿಪ್ಪೆಗಳು ಸಾಕಷ್ಟು ಪೋಷಕಾಂಶವನ್ನು ಹೊಂದಿದ್ದು, ಇದು ನಮ್ಮ ದೇಹ ಹಾಗೂ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಹಾಗಾದ್ರೆ ಯಾವೆಲ್ಲ ತರಕಾರಿಯ ಸಿಪ್ಪೆಗಳು ಆರೋಗ್ಯಕ್ಕೆ ಉತ್ತಮ ನೋಡಿ.
(1 / 7)
ಸಾಮಾನ್ಯವಾಗಿ ಆಲೂಗೆಡ್ಡೆ, ಮೂಲಂಗಿ, ಗೆಣಸು, ಕುಂಬಳಕಾಯಿ ಮುಂತಾದ ನಿತ್ಯ ಬಳಸುವ ತರಕಾರಿಗಳ ಸಿಪ್ಪೆಯನ್ನು ಕತ್ತರಿಸಿ ಎಸೆಯುತ್ತೇವೆ. ಇದರಿಂದ ನಾವು ನಮಗೆ ನಷ್ಟ ಮಾಡಿಕೊಂಡಂತೆ, ಯಾಕೆಂದರೆ ಸಿಪ್ಪೆಯಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಇವು ನಮ್ಮ ಚರ್ಮ ಹಾಗೂ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
(2 / 7)
ಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ಸಾಕಷ್ಟು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಆದರೆ ಕುಂಬಳಕಾಯಿ ಸಿಪ್ಪೆ ಇದಕ್ಕಿಂತ ಹೆಚ್ಚು ಪ್ರಯೋಜನಕಾರಿ. ಇದು ದೇಹವನ್ನು ಸದೃಢವಾಗಿರಿಸುವುದಲ್ಲದೆ, ಚರ್ಮಕ್ಕೆ ತುಂಬಾ ಉತ್ತಮ. ಆದ್ದರಿಂದ ಕುಂಬಳಕಾಯಿಯ ಸಿಪ್ಪೆ ತೆಗೆಯದೇ ಅದನ್ನು ತಿನ್ನಬೇಕು.
(3 / 7)
ತೂಕ ಇಳಿಕೆ ಸೇರಿ ದೇಹಕ್ಕೆ ಹಲವು ಪ್ರಯೋಜನ ನೀಡುವ ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಉತ್ತಮ. ಏಕೆಂದರೆ ಇದು ಸಾಕಷ್ಟು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇವು ಆರೋಗ್ಯ ಮತ್ತು ಚರ್ಮಕ್ಕೆ ತುಂಬಾ ಅವಶ್ಯ. ಸೌತೆಕಾಯಿಯಲ್ಲಿ ಶೇ 90ರಷ್ಟು ನೀರಿನಾಂಶವಿರುತ್ತದೆ. ಇದು ಮುಖಕ್ಕೆ ಹೊಳಪನ್ನು ನೀಡುತ್ತದೆ. ಆದ್ದರಿಂದ, ಸೌತೆಕಾಯಿಯನ್ನು ಸಿಪ್ಪೆಯೊಂದಿಗೆ ತಿನ್ನಬೇಕು.
(4 / 7)
ಗೆಣಸಿನ ಸಿಪ್ಪೆ ಸಹ ಸಾಕಷ್ಟು ಪೋಷಕಾಂಶವನ್ನು ಹೊಂದಿರುತ್ತವೆ. ವಿಟಮಿನ್ ಸಿ, ಇ, ನಾರಿನಾಂಶ, ಬೀಟಾ ಕ್ಯಾರೋಟಿನ್ ಅಂಶ ಇದರಲ್ಲಿ ಕಂಡುಬರುತ್ತದೆ. ಇದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ.
(5 / 7)
ಆಲೂಗೆಡ್ಡೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಎ ಇದೆ. ಇದನ್ನು ಸಿಪ್ಪೆಯೊಂದಿಗೆ ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
(6 / 7)
ಮೂಲಂಗಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದರ ಜೊತೆಗೆ, ಇದು ಚರ್ಮವನ್ನು ಶುದ್ಧೀಕರಿಸುತ್ತದೆ ಮತ್ತು ನಿರ್ವಿಷಗೊಳಿಸುತ್ತದೆ. ಚರ್ಮ ಸಂಬಂಧಿತ ಕಾಯಿಲೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು