Summer Tips: ಬೇಸಿಗೆಯಲ್ಲಿ ಈ 10 ಹಣ್ಣುಗಳ ಅತಿಯಾದ ಸೇವನೆ ಆರೋಗ್ಯ ಸಮಸ್ಯೆಯನ್ನ ಹೆಚ್ಚಿಸುತ್ತೆ
- ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಸಿಯಿಂದ ಪಾರಾಗಲು ಹಣ್ಣಿನ ಜ್ಯೂಸ್‌ಗಳ ಮೊರೆಹೋಗುತ್ತಾರೆ. ಆದರೆ ಕೆಲ ಹಣ್ಣುಗಳ ಅತಿಯಾದ ಸೇವೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವೆಲ್ಲ ಹಣ್ಣುಗಳು ಆರೋಗ್ಯ ಸಮಸ್ಯೆ ಹೆಚ್ಚಿಸುತ್ತವೆ ಅನ್ನೋದನ್ನ ತಿಳಿಯಿರಿ.
- ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಸಿಯಿಂದ ಪಾರಾಗಲು ಹಣ್ಣಿನ ಜ್ಯೂಸ್‌ಗಳ ಮೊರೆಹೋಗುತ್ತಾರೆ. ಆದರೆ ಕೆಲ ಹಣ್ಣುಗಳ ಅತಿಯಾದ ಸೇವೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವೆಲ್ಲ ಹಣ್ಣುಗಳು ಆರೋಗ್ಯ ಸಮಸ್ಯೆ ಹೆಚ್ಚಿಸುತ್ತವೆ ಅನ್ನೋದನ್ನ ತಿಳಿಯಿರಿ.
(1 / 11)
ಹಣ್ಣುಗಳ ಸೇವೆ ಮನುಷ್ಯನಿಗೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಬೇಸಿಗೆಯಲ್ಲಿ ಅತಿಯಾದ ಸೇವನೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
(2 / 11)
ಕಲ್ಲಂಗಡಿ - ಬೇಸಿಗೆಯ ದಾಹವನ್ನು ತಣಿಸಲು ಕಲ್ಲಂಗಡಿ ಅತ್ಯುತ್ತಮವಾದ ಹಣ್ಣಾಗಿದೆ. ಇದರಲ್ಲಿ ನೀರು ಹಾಗೂ ಫೈಬರ್ ಅಂಶಗಳು ಹೆಚ್ಚಾಗಿರುವುದರಿಂದ ಹಲವುು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಕಲ್ಲಂಗಡಿ ಹಣ್ಣನನ್ನು ಅತಿಯಾಗಿ ಸೇವಿಸುವುದರಿಂದ ಸೂಕ್ಷ್ಮ ಜೀರ್ಣಾಂಗ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.(Pexel)
(3 / 11)
ಮಾವಿನ ಹಣ್ಣು - ನೈಸರ್ಗಿಕ ಸಕ್ಕರೆ ಹಾಗೂ ನಾರಿನಾಂಶ ಇರುವ ಮಾವು ಬೇಸಿಗೆಯಲ್ಲಿ ಮಾರುಕಟ್ಟೆಗೆ ಬಂದು ಜನರ ದಾಹವನ್ನು ತಣಿಸುತ್ತದೆ. ಆದರೆ ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಜಠರದ ಸಮಸ್ಯೆಗೆ ಕಾರಣವಾಗಬಹುದು ಎಂದು ಮುಂಬೈ ಮೂಲದ ಆಹಾರ ತಜ್ಞ ಹರ್ಷಿಲ್ ಶರ್ಮಾ ಹೇಳಿದ್ದಾರೆ.(Pexel)
(4 / 11)
ಅನಾನಸ್ - ಅನಾನಸ್‌ನಲ್ಲಿ ಬ್ರೊಮೆಲೈನ್ ಅಂಶವನ್ನು ಹೊಂದಿರುತ್ತದೆ. ಅನಾನಸ್ ಅನ್ನು ಅನಿಯಮಿತವಾಗಿ ಸೇವಿಸಿದರೆ ಜೀರ್ಣಾಂಗದಲ್ಲಿ ಕಿರಿಕಿರಿ ಅಥವಾ ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.(Pexel)
(5 / 11)
ಪ್ಲಾಮ್ ಹಣ್ಣು - ಈ ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್ ಅಂಶಗಳು ಸಮೃದ್ಧವಾಗಿವೆ. ಪ್ಲಮ್ ಹಣ್ಣಿನ ಅತಿಯಾದ ಸೇವೆ ಅದರಲ್ಲಿರುವ ಫೈಬರ್ ಹಾಗೂ ಸೋರ್ಬಿಟೋಲ್ ಅಂಶವು ಜೀರ್ಣಕ್ರಿಯೆಗೆ ಸವಾಲುಗಳನ್ನು ಉಂಟುಮಾಡಬಹುದು.(Pexel)
(6 / 11)
ಚೆರ್ರಿ ಹಣ್ಣುಗಳು - ಬೇಸಿಗೆಯ ಆನಂದವನ್ನು ಹೆಚ್ಚಿಸುವ ಹಣ್ಣುಗಳ ಪೈಕಿ ಚೆರ್ರಿ ಹಣ್ಣು ಕೂಡ ಒಂದು. ಆದರೆ ಇದನ್ನು ಅನಿಯಮಿತವಾಗಿ ಸೇವಿಸಿದರೆ ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ಆಹಾರ ತಜ್ಞರು ತಿಳಿಸಿದ್ದಾರೆ.(Pexel)
(7 / 11)
ಆ್ಯಪಲ್ - ವರ್ಷಪೂರ್ತಿ ಸಿಗುವ ಆ್ಯಪಲ್ ಹಣ್ಣಿನಲ್ಲಿ ಫೈಬರ್ ಮತ್ತು ಫ್ರಕ್ಟೋಸ್ ಸಮೃದ್ಧವಾಗಿದೆ. ಸೇಬು ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಅತಿಯಾದ ಸೇವನೆಯಿಂದ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದು ಜಠರಗರುಳಿ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಹರ್ಷಲ್ ಶರ್ಮಾ ಹೇಳಿದ್ದಾರೆ.(Pexel)
(8 / 11)
ಪೇರಳೆ - ಆ್ಯಪಲ್‌ನಂತೆ ಪೇರಳೆಯಲ್ಲೂ ಫೈಬರ್ ಹಾಗೂ ಫ್ರಕ್ಟೋಸ್ ಹೆಚ್ಚಾಗಿದೆ. ಪೌಷ್ಟಿಕಾಂಶ ಹೆಚ್ಚಿಸುವ ಈ ಹಣ್ಣು ಬೇಸಿಗೆಗೆ ಉತ್ತಮ ಆಯ್ಕೆಯಾಗಿದೆ. ಆದರೆ ಇದನ್ನು ಅನಿಯಮಿತವಾಗಿ ತಿಂದರೆ ಜೀರ್ಣಾಂಗ ಸಮಸ್ಯೆಗೆ ಕಾರಣವಾಗುತ್ತೆ. ಅಸ್ವಸ್ಥೆತೆಯೂ ಉಂಟಾಗುತ್ತದೆ.(Pexel)
(9 / 11)
ಅಂಜೂರದ ಹಣ್ಣು - ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಅಂಜೂರ ಕೂಡ ಒಂದಾಗಿದೆ. ಇದರಲ್ಲಿ ಫೈಬರ್ ಅಂಶಗಳು ಹೆಚ್ಚಿವೆ. ಅತಿಯಾದ ಇದನ್ನ ಅತಿಯಾಗಿ ಸೇವಿಸಿದರೆ ಜೀರ್ಣಕಾರಿ ಅಸ್ವಸ್ಥೆತೆಗೆ ಕಾರಣವಾಗಬಹುದು.(Pexel)
(10 / 11)
ಕಿವಿ ಹಣ್ಣು - ಕಿವಿ ಹಣ್ಣು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನೂ ಕೂಡ ಅತಿಯಾಗಿ ತಿಂದರೆ ಇದರಲ್ಲಿರುವ ಫೈಬರ್ ಹಾಗೂ ಆಕ್ವಿನಿಡಿನ್ ಕೆಲವೊಮ್ಮೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.(Pexel)
ಇತರ ಗ್ಯಾಲರಿಗಳು