ಥೈರಾಯಿಡ್ ಸಮಸ್ಯೆಯಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಕಾಳಿನ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು
- Benefits Of Coriander Seeds: ಭಾರತೀಯ ಮಸಾಲೆ ಪದಾರ್ಥಗಳ ಪೈಕಿ ಕೊತ್ತಂಬರಿ ಬೀಜಕ್ಕೆ ವಿಶೇಷ ಪ್ರಧಾನ್ಯವಿದೆ. ಕೊತ್ತಂಬರಿ ಕಾಳು ಇಲ್ಲದೇ ಭಾರತೀಯರ ಸಾಂಬಾರು ತಯಾರಾಗಲು ಸಾಧ್ಯವೇ ಇಲ್ಲ ಎನ್ನಬಹುದು. ಇಂತಿಪ್ಪ ಕೊತ್ತಂಬರಿ ಸೇವನೆಯಿಂದ ಆರೋಗ್ಯಕ್ಕೆ ಒಂದಲ್ಲ, ಎರಡಲ್ಲ ನೂರಾರು ಪ್ರಯೋಜನಗಳಿವೆ. ಕೊತ್ತಂಬರಿ ಬೀಜದ ಆರೋಗ್ಯ ಪ್ರಯೋಜನಗಳು ಹೀಗಿವೆ.
- Benefits Of Coriander Seeds: ಭಾರತೀಯ ಮಸಾಲೆ ಪದಾರ್ಥಗಳ ಪೈಕಿ ಕೊತ್ತಂಬರಿ ಬೀಜಕ್ಕೆ ವಿಶೇಷ ಪ್ರಧಾನ್ಯವಿದೆ. ಕೊತ್ತಂಬರಿ ಕಾಳು ಇಲ್ಲದೇ ಭಾರತೀಯರ ಸಾಂಬಾರು ತಯಾರಾಗಲು ಸಾಧ್ಯವೇ ಇಲ್ಲ ಎನ್ನಬಹುದು. ಇಂತಿಪ್ಪ ಕೊತ್ತಂಬರಿ ಸೇವನೆಯಿಂದ ಆರೋಗ್ಯಕ್ಕೆ ಒಂದಲ್ಲ, ಎರಡಲ್ಲ ನೂರಾರು ಪ್ರಯೋಜನಗಳಿವೆ. ಕೊತ್ತಂಬರಿ ಬೀಜದ ಆರೋಗ್ಯ ಪ್ರಯೋಜನಗಳು ಹೀಗಿವೆ.
(1 / 8)
ʼನಾವು ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಸಿಗುವ ಪದಾರ್ಥಗಳನ್ನು ಆರೋಗ್ಯದ ವಿಷಯದಲ್ಲಿ ಹೆಚ್ಚು ನಂಬುವುದಿಲ್ಲ. ಆದರೆ ಖಂಡಿತ ಇವು ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತವೆ. ಅವುಗಳಲ್ಲಿ ಒಂದು ಧನಿಯಾ ಅಥವಾ ಕೊತ್ತಂಬರಿ ಬೀಜ. ಇವು ಖಾದ್ಯಗಳಿಗೆ ವಿಶಿಷ್ಟ ಪರಿಮಳ ನೀಡುವುದು ಮಾತ್ರವಲ್ಲ, ಇದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆʼ ಎಂದು ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಇತ್ತೀಚಿನ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
(Pixabay)(2 / 8)
ಕೊತ್ತಂಬರಿ ಬೀಜದಲ್ಲಿ ಅಂಶವು ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ. ಇದರ ಸೇವನೆಯಿಂದ ದೇಹದಿಂದ ಹೆಚ್ಚುವರಿ ಸೋಡಿಯಂ ಮತ್ತು ನೀರಿನಾಂಶವನ್ನು ಹೊರ ಹಾಕಲು ನೆರವಾಗುತ್ತದೆ. ಇದು ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.
(Freepik)(3 / 8)
ಕೊತ್ತಂಬರಿ ಬೀಜಗಳು ಅಂತಃಸ್ರಾವಕ ಗ್ರಂಥಿಗಳಿಂದ ಹಾರ್ಮೋನುಗಳ ಸರಿಯಾದ ಸ್ರವಿಸುವಿಕೆಗೆ ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಕೊತ್ತಂಬರಿ ಬೀಜದಿಂ ಸಹಾಯವಾಗುತ್ತದೆ. ಕೊತ್ತಂಬರಿ ನೀರು ಸೇವನೆಯಿಂದ ಥೈರಾಯಿಡ್ ಸಮಸ್ಯೆಗೂ ಪರಿಹಾರ ಸಿಗುತ್ತದೆ.
(Pinterest)(4 / 8)
ಇದರಲ್ಲಿನ ಎಥೋಲಿಕ್ ಸಾರವು ಮಧುಮೇಹ ವಿರೋಧಿ ಗುಣವನ್ನು ಹೊಂದಿದೆ. ಇದು ಗ್ಲೂಕೋಸ್ ಸಾಂದ್ರತೆಯ ಇಳಿಕೆ ಮತ್ತು ಬೀಟಾ ಕೋಶಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಮಧುಮೇಹದ ನಿಯಂತ್ರಣವೂ ಸಾಧ್ಯ.
(Pixabay)(5 / 8)
ಕೊತ್ತಂಬರಿ ಬೀಜಗಳು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಜೀರ್ಣಾಂಗವ್ಯೂಹ ಆರೋಗ್ಯ ಸುಧಾರಣೆಯನ್ನು ಉತ್ತೇಜಿಸುತ್ತದೆ.
(Pexel)(6 / 8)
ಕೊತ್ತಂಬರಿ ಬೀಜವು ಸ್ಟೆರಾಲ್‌ಗಳ ಪ್ರಮುಖ ಮೂಲವಾಗಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
(7 / 8)
ಕೊತ್ತಂಬರಿ ಕಾಳು ಹೊಸ ಕೂದಲು ಬೆಳೆಯಲು ಬೇರುಗಳನ್ನು ಉತ್ತೇಜಿಸುವ ಮೂಲಕ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಅಕಾಲಿಕ ಬಾಲನೆರೆಯನ್ನೂ ವಿಳಂಬಗೊಳಿಸುತ್ತದೆ.
ಇತರ ಗ್ಯಾಲರಿಗಳು






