ಪದೇ ಪದೇ ಜಂಕ್ ಫುಡ್ ತಿನ್ಬೇಕು ಅನ್ನಿಸೋದು, ನೋಡಿದಾಗ ಬಾಯಲ್ಲಿ ನೀರು ಬರೋದು ಯಾಕೆ; ಇದರ ಹಿಂದಿನ ಕಾರಣ ಹೀಗಿದೆ
ಜಂಕ್ ಫುಡ್ ತಿಂದ್ರೆ ಆರೋಗ್ಯ ಕೆಡುತ್ತೆ ಅಂತ ಗೊತ್ತಿದ್ರೂ ಅದನ್ನು ತಿನ್ನದೇ ಇರಲು ಮನಸ್ಸು ಒಪ್ಪುವುದಿಲ್ಲ. ನಿಮಗೂ ಜಂಕ್ ಫುಡ್ ಅಂದ್ರೆ ಇಷ್ಟನಾ, ಜಂಕ್ ಫುಡ್ ನೋಡಿದ ಕೂಡಲೇ ಆಸೆ ಆಗುತ್ತಾ, ಎಷ್ಟೇ ಬೇಡ ಅಂದ್ಕೊಂಡ್ರು ಮನಸ್ಸು ಕೇಳದೆ ಮತ್ತೆ ತಿಂತೀರಾ, ಹಾಗಾದರೆ ಜಂಕ್‌ಫುಡ್‌ಗಳ ಆಸೆ ಹೆಚ್ಚಲು ಕಾರಣವೇನು ಎಂಬುದನ್ನು ನೋಡಿ.
(1 / 7)
ಜಂಕ್ ಫುಡ್‌ಗಳಲ್ಲಿ ಸಕ್ಕರೆ ಮತ್ತು ಉಪ್ಪಿನಾಂಶ ಹೆಚ್ಚಾಗಿರುತ್ತದೆ, ಇವು ನಮ್ಮ ಮೆದುಳಿನ್ನು ಪ್ರಚೋದಿಸುತ್ತವೆ. ಮೆದುಳು ಪ್ರಚೋದಿಸಲ್ಪಟ್ಟಾಗ, ಡೋಪಮೈನ್‌ನಂತಹ ಉತ್ತಮ ಭಾವನೆಯನ್ನು ಉಂಟು ಮಾಡುವ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಆ ಕಾರಣದಿಂದ ನಮ್ಮ ಮನಸ್ಸು ಅತ್ತ ಹೆಚ್ಚು ಸೆಳೆಯುತ್ತದೆ.
(2 / 7)
ಜಂಕ್ ಫುಡ್ ಅನ್ನು ಭಾವನಾತ್ಮಕ ಅನುಭವವಾಗಿ ನೋಡುವುದು ಇನ್ನೊಂದು ಕಾರಣ. ಅಂದರೆ ಜಂಕ್ ಫುಡ್ ಮೇಲೆ ನಮಗೆ ವಿಶೇಷ ಒಲವು ಇರುತ್ತದೆ. ಆಗಾಗ ಇದನ್ನು ತಿನ್ನದೇ ಇದ್ದರೆ ಏನನ್ನೋ ಕಳೆದುಕೊಂಡ ಭಾವ ನಮ್ಮದಾಗುತ್ತದೆ. ಹಾಗಾಗಿ ಅದನ್ನು ನೋಡಿದಾಗ ಬೇಡವೆಂದರೂ ನಮಗೆ ಮನಸ್ಸು ತಡೆಯುವುದಿಲ್ಲ.
(3 / 7)
ಜಂಕ್ ಫುಡ್ ಸುಲಭವಾಗಿ ಸಿಗುತ್ತದೆ. ಇಂದಿನ ಜೀವನಶೈಲಿಗೆ ರೆಡಿ ಟು ಈಟ್ ಜಂಕ್ ಫುಡ್‌ಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ ಕೂಡ. ಫುಡ್ ಡೆಲಿವರಿ ಅಪ್ಲಿಕೇಶನ್‌ಗಳು ನಮ್ಮ ಬೆರಳ ತುದಿಯಲ್ಲಿರುವಾಗ, ನಮ್ಮ ಕಡುಬಯಕೆಗಳನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗುತ್ತಿಲ್ಲ.
(4 / 7)
ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರ್ಕೆಟಿಂಗ್ ಮತ್ತು ಜನರು ಆಕರ್ಷಿಸುವ ವಿವಿಧ ವಿಧಾನಗಳನ್ನು ಬಳಸುತ್ತವೆ. ನಮಗೆ ತಿನ್ನುವ ಮನಸ್ಸಿಲ್ಲದಿದ್ದರೂ, ಅವುಗಳನ್ನು ನೋಡಿದಾಗ ತಿನ್ನದೇ ಇರಲು ಮನಸ್ಸಾಗುವುದಿಲ್ಲ. ಯಾಕೆಂದರೆ ಆ ಚಿತ್ರಗಳೇ ನಮ್ಮನ್ನು ಅಷ್ಟು ಸೆಳೆಯುತ್ತವೆ.
(6 / 7)
ಸಾಮಾನ್ಯವಾಗಿ ಇತ್ತೀಚಿನ ಜನರು ಹಸಿವನ್ನು ನಿಯಂತ್ರಣ ಮಾಡಿಕೊಂಡಿರುತ್ತಾರೆ. ಹಾಗಾಗಿ ಇವರಿಗೆ ತಕ್ಷಣಕ್ಕೆ ಕಂಡ ಆಹಾರ ಹೆಚ್ಚು ರುಚಿ ಎನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಜಂಕ್‌ಫುಡ್‌ಗಳೇ ಹೆಚ್ಚು ಎದುರು ಕಾಣಿಸುತ್ತವೆ. ಹಾಗಾಗಿ ಇದನ್ನು ತಿನ್ನುವ ಮನಸ್ಸು ಮಾಡುತ್ತೇವೆ.
ಇತರ ಗ್ಯಾಲರಿಗಳು