Medicinal Plants: ಈ 5 ಔಷಧೀಯ ಸಸ್ಯಗಳನ್ನು ಮನೆಯಲ್ಲಿ ಬೆಳೆಸಿದರೆ ಡಾಕ್ಟರ್‌ ಬಳಿಗೆ ಹೋಗುವ ಅಗತ್ಯ ಕಡಿಮೆಯಾಗುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Medicinal Plants: ಈ 5 ಔಷಧೀಯ ಸಸ್ಯಗಳನ್ನು ಮನೆಯಲ್ಲಿ ಬೆಳೆಸಿದರೆ ಡಾಕ್ಟರ್‌ ಬಳಿಗೆ ಹೋಗುವ ಅಗತ್ಯ ಕಡಿಮೆಯಾಗುತ್ತೆ

Medicinal Plants: ಈ 5 ಔಷಧೀಯ ಸಸ್ಯಗಳನ್ನು ಮನೆಯಲ್ಲಿ ಬೆಳೆಸಿದರೆ ಡಾಕ್ಟರ್‌ ಬಳಿಗೆ ಹೋಗುವ ಅಗತ್ಯ ಕಡಿಮೆಯಾಗುತ್ತೆ

Medicinal Plants:  ಆಯುರ್ವೇದದಲ್ಲಿ ಹಲವಾರು ಔಷಧೀಯ ಗಿಡಮೂಲಿಕೆಗಳಿವೆ. ಅವುಗಳಲ್ಲಿ ಕೆಲವನ್ನು ಮನೆಯ ಬಳಿ ಬೆಳೆದುಕೊಂಡರೆ ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತವೆ. ಅಂತಹ ಈ 5 ಗಿಡಗಳನ್ನು ನಿಮ್ಮ ಗಾರ್ಡನ್‌ನಲ್ಲಿ ಬೆಳೆಸಿದರೆ ಪದೇ ಪದೆ ಡಾಕ್ಟರ್ ಬಳಿ ಹೋಗುವ ಅಗತ್ಯವಿರುವುದಿಲ್ಲ. 

ಗಾರ್ಡನಿಂಗ್ ಮಾಡೋದು ಹಲವರಿಗೆ ಇಷ್ಟದ ಹವ್ಯಾಸ. ಬಹುತೇಕರ ಮನೆಯ ಕೈದೋಟದಲ್ಲಿ ಬಣ್ಣ ಬಣ್ಣದ ಹೂವಿನ ಗಿಡಗಳು, ತರಕಾರಿಗಳು ಗಿಡಗಳು ಇರುತ್ತವೆ. ಕೆಲವರು ತಮ್ಮ ತೋಟದಲ್ಲಿ ಗಿಡಮೂಲಿಕೆ, ಔಷಧೀಯ ಸಸಿಗಳನ್ನೂ ನೆಟ್ಟಿರುತ್ತಾರೆ.  ಆದರೆ ಈ 5 ಗಿಡಮೂಲಿಕೆ ಸಸ್ಯಗಳನ್ನು ನಿಮ್ಮ ಕೈದೋಟದಲ್ಲಿದ್ದರೆ ಡಾಕ್ಟರ್ ಬಳಿಗೆ ಹೋಗುವ ಅವಶ್ಯಕತೆ ಕಡಿಮೆಯಾಗುತ್ತದೆ.
icon

(1 / 7)

(PC: Canva)

ಅಲೋವೆರಾವನ್ನು ಆಯುರ್ವೇದದಲ್ಲಿ ಗಿಡಮೂಲಿಕೆಗಳ ರಾಜ ಎಂದು ಹೇಳಲಾಗುತ್ತದೆ. ಇದನ್ನು ಬಳಸುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ಸುಲಭವಾಗಿ ಮನೆಯಲ್ಲಿ  ನೆಡಬಹುದು. ಇದು ಹೆಚ್ಚು ಕಾಳಜಿಯ ಅಗತ್ಯವಿಲ್ಲದ ಸಸ್ಯವಾಗಿದೆ. ಕೆಲವರು ಇದನ್ನು ಚರ್ಮದ ಆರೈಕೆಗಾಗಿ ಬಳಸುತ್ತಾರೆ. ಯಾವುದೇ ಆಂತರಿಕ ನೋವಿಗೆ ಚಿಕಿತ್ಸೆ ನೀಡಲು ಅಲೋವೆರಾವನ್ನು ಬಳಸಬಹುದು. ಇದು ಅಂದ ಹೆಚ್ಚಿಸುವ ಜೊತೆಗೆ ನೋವು ಶಮನಕಾರಿಯೂ ಹೌದು.
icon

(2 / 7)

ನಿತ್ಯಹರಿದ್ವರ್ಣ ಅಥವಾ ನಿತ್ಯಪುಷ್ಪ ಹೂವಿನ ಗಿಡವನ್ನು ಬೆಳೆಸಲು ವಿಶೇಷ ಕಾಳಜಿ ಅಗತ್ಯವಿಲ್ಲ. ನೀವು ಅದನ್ನು ಒಳಾಂಗಣದಲ್ಲಿ ನೆಟ್ಟ ನಂತರ ಅದು ಚೆನ್ನಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಇದರ ಹೂವುಗಳು ಬಿಳಿ ಅಥವಾ ನೇರಳೆ, ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ನಿತ್ಯಹರಿದ್ವರ್ಣ ಹೂವಿನ ಎಲೆಗಳು ಆಲ್ಕಲಾಯ್ಡ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
icon

(3 / 7)

ತುಳಸಿ ಗಿಡವು ಪ್ರತಿ ಭಾರತೀಯ ಮನೆಯಲ್ಲೂ ಇರುತ್ತದೆ. ನಿಮ್ಮ ಮನೆಯಲ್ಲಿ ಒಂದೂ ತುಳಸಿ ಗಿಡ ಇಲ್ಲ ಎಂದಾದರೆ, ಅದನ್ನು ನೆಡಲು ಮರೆಯದಿರಿ. ಏಕೆಂದರೆ ಅದರ ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ,  ಅದ್ಭುತವಾದ ಮೂಲಿಕೆಯಾಗಿದೆ. ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ತುಳಸಿಯ ಬಲವಾದ ಪರಿಮಳ ಸಾಕು. ಇದಲ್ಲದೆ, ಅದರ ಎಲೆಗಳನ್ನು ಚಳಿಗಾಲದಲ್ಲಿ ಚಹಾದಲ್ಲಿ ಬಳಸಬಹುದು. ಗಂಟಲು ನೋವು ಹಾಗೂ ಕೆಮ್ಮು ನಿವಾರಣೆಗೆ ಇದು ಬಹಳ ಉತ್ತಮ. 
icon

(4 / 7)

ಮನೆಯಲ್ಲಿ ಪುದೀನಾ ಗಿಡ ನೆಡಿ. ಈ ತಾಜಾ ಪರಿಮಳಯುಕ್ತ ಗಿಡದ ಎಲೆಯನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ನೀವು ಸ್ವಲ್ಪ ಕಾಳಜಿ ವಹಿಸಿದರೆ ದಟ್ಟವಾದ ಪುದೀನಾವನ್ನು ಬೆಳೆದುಕೊಳ್ಳಲು ಸಾಧ್ಯವಿದೆ. ಅದರ ಚಹಾವನ್ನು ಕುಡಿಯುವುದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆ ಸುಧಾರಣೆಗೂ ಇದು ಉತ್ತಮ.
icon

(5 / 7)

ನುಗ್ಗೆ ಪ್ರಸಿದ್ಧವಾದ ಸಸ್ಯ, ಇದು ಔಷಧೀಯ ಗುಣಗಳ ಆಗರವೂ ಹೌದು. ಇದನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದು. ಈ ಸಸ್ಯದ ಎಲೆಗಳು ಚಿಕ್ಕದಾಗಿರುತ್ತವೆ.  ಇದರ ಹೂವುಗಳು ಬಿಳಿಯಾಗಿರುತ್ತದೆ.  ಎಲೆಗಳು, ಹೂಗಳು ಮತ್ತು ನುಗ್ಗೆಕಾಯಿಯನ್ನು ಕೂಡ ತಿನ್ನಲು ಬಳಸಲಾಗುತ್ತದೆ. ಅದರ ಎಲೆಗಳಿಂದ ಚಹಾವನ್ನು ತಯಾರಿಸಬಹುದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಇತರ ಗ್ಯಾಲರಿಗಳು