Garlic Benefits: ಬೆಳಗೆದ್ದು ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕಾಗುವ 8 ಅದ್ಭುತ ಪ್ರಯೋಜನಗಳಿವು
- Garlic Health Benefits: ಹೃದಯದ ಆರೋಗ್ಯ ಸುಧಾರಿಸುವುದರಿಂದ ತ್ವಚೆಯ ಕಾಂತಿ ಹೆಚ್ಚುವವರೆಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಈ ಬೆಳ್ಳುಳ್ಳಿ ಸೇವನೆಯಿಂದ ದೇಹಕ್ಕಾಗುವ 8 ಅದ್ಭುತ ಪ್ರಯೋಜನಗಳು ಇಲ್ಲಿವೆ.
- Garlic Health Benefits: ಹೃದಯದ ಆರೋಗ್ಯ ಸುಧಾರಿಸುವುದರಿಂದ ತ್ವಚೆಯ ಕಾಂತಿ ಹೆಚ್ಚುವವರೆಗೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಈ ಬೆಳ್ಳುಳ್ಳಿ ಸೇವನೆಯಿಂದ ದೇಹಕ್ಕಾಗುವ 8 ಅದ್ಭುತ ಪ್ರಯೋಜನಗಳು ಇಲ್ಲಿವೆ.
(1 / 11)
ಭಾರತದ ಸಾಂಬಾರು ಪದಾರ್ಥಗಳಲ್ಲಿ ಬೆಳ್ಳುಳ್ಳಿಗೆ ವಿಶೇಷ ಸ್ಥಾನವಿದೆ. ನಾವು ಪ್ರತಿ ಅಡುಗೆಗೂ ಬೆಳ್ಳುಳ್ಳಿ ಬಳಸುವುದು ಸಾಮಾನ್ಯ. ಬೆಳ್ಳುಳ್ಳಿ ಬಳಸುವುದರಿಂದ ಆಹಾರ ಖಾದ್ಯಗಳ ರುಚಿ ದುಪ್ಪಟ್ಟಾಗುತ್ತದೆ. ಆದರೆ ಬೆಳ್ಳುಳ್ಳು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಪ್ರತಿದಿನ ಬೆಳಗೆದ್ದು ಒಂದೆರಡು ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕೆ ನೂರಾರು ಪ್ರಯೋಜನಗಳಿವೆ.
(2 / 11)
ಬೆಳ್ಳುಳ್ಳಿಯಲ್ಲಿ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ಆಂಟಿಆಕ್ಸಿಡೆಂಟ್, ರಂಜಕ, ಕಬ್ಬಿಣ, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ತಾಮ್ರ, ಸತು, ಥಯಾಮಿನ್ ಮತ್ತು ರೈಬೋಫ್ಲಾವಿನ್ ಅಂಶವಿದೆ. ಇಷ್ಟೆಲ್ಲಾ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಸಹಜವಾಗಿಯೇ ಹಲವಾರು ರೋಗಗಳಿಂದ ಮುಕ್ತಿ ಹೊಂದುತ್ತೀರಿ.
(3 / 11)
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಪ್ರತಿದಿನ ಬೆಳ್ಳುಳ್ಳಿಯ ಎಸಳು ತಿನ್ನುವುದರಿಂದ ಶೀತ, ಕೆಮ್ಮು, ಜ್ವರ ಅಥವಾ ಇತರ ಸಾಂಕ್ರಾಮಿಕ ರೋಗಗಳಿಂದ ದೇಹವನ್ನು ರಕ್ಷಿಸಿಕೊಳ್ಳಬಹುದು. ಬೆಳ್ಳುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
(4 / 11)
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಹಸಿ ಬೆಳ್ಳುಳ್ಳಿಯನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಬಹಳ ಸುಲಭವಾಗಿ ನಿಯಂತ್ರಿಸಬಹುದು. ಬೆಳ್ಳುಳ್ಳಿಯ ಸಾರವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಆ ಮೂಲಕ ಹೃದಯರಕ್ತನಾಳದ ತೊಂದರೆಗಳನ್ನು ನಿಯಂತ್ರಿಸುತ್ತದೆ.
(5 / 11)
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ: ಬೆಳ್ಳುಳ್ಳಿಯ ದೈನಂದಿನ ಸೇವನೆಯು ಕೊಲೆಸ್ಟ್ರಾಲ್ ಮಟ್ಟದಿಂದ ನಿಯಂತ್ರಿಸುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿದ್ದರೆ, ಹೃದಯದ ಸಮಸ್ಯೆಗಳು ಬರುವುದಿಲ್ಲ.
(6 / 11)
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಯಕೃತ್ತು ಮತ್ತು ಮೂತ್ರಕೋಶದ ಕಾರ್ಯವನ್ನು ಸುಧಾರಿಸುತ್ತದೆ. ಇದಲ್ಲದೇ ಬೆಳ್ಳುಳ್ಳಿ ತಿನ್ನುವುದರಿಂದ ಅತಿಸಾರ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳ್ಳುಳ್ಳಿ ತಿನ್ನುವ ಅಭ್ಯಾಸ ನಿಮ್ಮ ಜೀರ್ಣಕಾರಿಯನ್ನು ವೃದ್ಧಿಸುತ್ತದೆ. ಇದರಿಂದ ಹಸಿವಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.
(7 / 11)
ದೇಹದಲ್ಲಿರುವ ವಿಷಾಂಶವನ್ನು ತೆಗೆದುಹಾಕುತ್ತದೆ: ಬೆಳ್ಳುಳ್ಳಿಯಲ್ಲಿರುವ ಗಂಧಕವು ದೇಹದಲ್ಲಿರುವ ವಿಷಾಂಶವನ್ನು ತೊಡೆದು ಹಾಕುತ್ತದೆ ಮತ್ತು ಇದರಿಂದ ಸಂಪೂರ್ಣ ದೇಹ ಆರೋಗ್ಯದಿಂದಿರುತ್ತದೆ.
(8 / 11)
ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ: ನೀವು ಮಧುಮೇಹಿಗಳಾಗಿದ್ದರೆ, ಪ್ರತಿದಿನ ಹಸಿ ಬೆಳ್ಳುಳ್ಳಿಯನ್ನು ತಿನ್ನುವ ಅಭ್ಯಾಸ ಮಾಡಬಹುದು. ಪ್ರತಿದಿನ ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಜಗಿಯುವುದರಿಂದ ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
(9 / 11)
ತೂಕ ನಿಯಂತ್ರಣ: ಪ್ರತಿದಿನ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ಚಯಾಪಚಯ ಸುಧಾರಿಸುತ್ತದೆ ಮತ್ತು ನಿಮ್ಮ ದೇಹವು ಹೆಚ್ಚುವರಿ ಕೊಬ್ಬನ್ನು ಹೊರಹಾಕುತ್ತದೆ. ಇದು ತೂಕವನ್ನು ನಿಯಂತ್ರಣಕ್ಕೂ ಸಹಕಾರಿ.
(10 / 11)
ತ್ವಚೆಯನ್ನು ಕಾಂತಿಯುತವಾಗಿಸುತ್ತದೆ: ಬೆಳ್ಳುಳ್ಳಿ ತಿನ್ನುವುದರಿಂದ ಚರ್ಮದ ಸುಕ್ಕುಗಳು ಕಡಿಮೆಯಾಗಿ ಚರ್ಮವು ಕಾಂತಿಯುತವಾಗುತ್ತದೆ. ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ನಿಮ್ಮ ತ್ವಚೆಯು ಹೊಳಪು ಮತ್ತು ಯೌವನವನ್ನು ಪಡೆಯುತ್ತದೆ.
ಇತರ ಗ್ಯಾಲರಿಗಳು