Arbi Leaves: ಬೊಜ್ಜು ಕರಗುವುದರಿಂದ ರಕ್ತದೊತ್ತಡ ನಿಯಂತ್ರಿಸುವವರೆಗೆ, ಕೆಸುವಿನ ಸೊಪ್ಪಿನ ಅದ್ಭುತ ಆರೋಗ್ಯ ಪ್ರಯೋಜನಗಳಿವು
Health Benefits Of Arbi Leaves: ಮಳೆಗಾಲದಲ್ಲಿ ಹೇರಳವಾಗಿ ಬೆಳೆಯುವ ಕೆಸುವಿನ ಸೊಪ್ಪನ್ನು ಬಾಯಿ ತುರಿಸುತ್ತದೆ ಎಂಬ ಕಾರಣಕ್ಕೆ ಹಲವರು ತಿನ್ನುವುದಿಲ್ಲ. ಕೆಲವರಿಗೆ ಇದರ ರುಚಿ ಹಿಡಿಸುವುದಿಲ್ಲ. ಅದೇನೇ ಇದ್ದರೂ ಕೆಸುವಿನ ಸೊಪ್ಪು ಸೇವನೆಯಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಇದರಿಂದ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
(1 / 8)
ಕೆಸುವಿನ ಸೊಪ್ಪಿಗೆ ಕರಾವಳಿ ಭಾಗದಲ್ಲಿ ಹೆಚ್ಚು ಬೇಡಿಕೆ. ಕೆಸುವಿನ ಪತ್ರೊಡೆ ಜಗತ್‌ಪ್ರಸಿದ್ಧ. ಕೆಸುವಿನ ಸೊಪ್ಪಿನಿಂದ ಇನ್ನೂ ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕರಾವಳಿಯಲ್ಲಿ ವರ್ಷಕ್ಕೊಮ್ಮೆಯಾದ್ರೂ ಮಳೆಗಾಲದಲ್ಲಿ ಕೆಸುವಿನ ಖಾದ್ಯ ಸೇವಿಸುವ ಅಭ್ಯಾಸವಿದೆ. ಹಲವರಿಗೆ ಹಿಡಿಸದ ಈ ಕೆಸುವಿನದಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎನ್ನುವುದು ಸುಳ್ಳಲ್ಲ. (shutterstock)
(2 / 8)
ಕೆಸುವಿನ ಎಲೆಯಲ್ಲಿ ಕಬ್ಬಿಣಾಂಶ, ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅನೇಕ ಪೋಷಕಾಂಶಗಳು ಇರುತ್ತವೆ. ಇದರಲ್ಲಿರುವ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. (shutterstock)
(3 / 8)
ಕೆಸುವಿನ ಎಲೆಗಳನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಅಧಿಕ ರಕ್ತದೊತ್ತಡ ವಿರೋಧಿ ಗುಣಗಳು ಒತ್ತಡವನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.(shutterstock)
(4 / 8)
ಕೆಸುವಿನ ಸೊಪ್ಪನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಗಾಗ ಟ್ಯಾರೋ ಎಲೆ ಅಥವಾ ಕೆಸುವಿನ ಸೊಪ್ಪು ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ ಸಿ ಪೂರೈಕೆಯಾಗುತ್ತದೆ. (shutterstock)
(5 / 8)
ಈ ಎಲೆಯಲ್ಲಿರುವ ನಾರಿನಾಂಶ ದೇಹದ ಶಕ್ತಿಯ ಮಟ್ಟವನ್ನು ಕಾಪಾಡುವುದು ಮಾತ್ರವಲ್ಲದೆ ಹಸಿವನ್ನು ನಿಯಂತ್ರಿಸುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ವ್ಯಕ್ತಿಗೆ ಸಹಾಯ ಮಾಡುತ್ತದೆ.(shutterstock)
(6 / 8)
ಕಬ್ಬಿಣ ಮತ್ತು ನಾರಿನಂಥ ಅಗತ್ಯ ಪೋಷಕಾಂಶಗಳು ಕೆಸುವಿನ ಎಲೆಯಲ್ಲಿ ಸಮೃದ್ಧವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಟ್ಯಾರೋ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಇದರಿಂದ ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸಬಹುದು.(shutterstock)
(7 / 8)
ಕೆಸುವಿನ ಎಲೆಯನ್ನು ಯಾವುದೇ ಕಾರಣಕ್ಕೂ ಹಸಿ ತಿನ್ನಲು ಸಾಧ್ಯವಿಲ್ಲ. ತಿಂದರೆ ಆರೋಗ್ಯಕ್ಕೆ ತೊಂದರೆಯಾಗುವುದು ಖಚಿತ. ಕುದಿಸಿ ಅಥವಾ ಬೇರೆ ಯಾವುದೇ ತರಕಾರಿಯೊಂದಿಗೆ ಬೆರೆಸಿ ಚೆನ್ನಾಗಿ ಬೇಯಿಸಿದ ನಂತರವೇ ಸೇವಿಸಬೇಕು. ನಿಮಗೆ ಅಲರ್ಜಿ ಇದ್ದರೆ ಇದನ್ನು ತಿನ್ನುವ ಮುನ್ನ ತಜ್ಞರನ್ನು ಸಂಪರ್ಕಿಸಿ. ಮಳೆಗಾಲದಲ್ಲಿ ಹುಳಭಾದೆ ಹೆಚ್ಚಿಸಿರುವ ಕಾರಣ ಬಳಸುವ ಮುನ್ನ ಚೆನ್ನಾಗಿ ತೊಳೆಯಬೇಕು. ಇದರಿಂದ ಚಟ್ನಿ, ಪಲ್ಯ, ತಂಬುಳಿ ಕೂಡ ಮಾಡಬಹುದು. (shutterstock)
ಇತರ ಗ್ಯಾಲರಿಗಳು