ವೇಗವಾಗಿ ತೂಕ ಇಳಿಯೋದು ಮಾತ್ರವಲ್ಲ, ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ರಸ ಸೇವಿಸುವುದರಿಂದ ದೇಹಕ್ಕೆ ಸಿಗುತ್ತೆ ಇಷ್ಟೊಂದು ಪ್ರಯೋಜನ
Health Benefits Of Curry Leaves Juice: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕರಿಬೇವಿನ ಎಲೆಗಳು ದೇಹದಲ್ಲಿನ ಬೊಜ್ಜು ನಿವಾರಿಸಿ ತೂಕ ಇಳಿಯಲು ಸಹಾಯ ಮಾಡುತ್ತದೆ. ಮತ್ತು ರಕ್ತಹೀನತೆಯ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ. ಕರಿಬೇವಿನ ಎಲೆಯ ರಸವನ್ನು ಪ್ರತಿನಿತ್ಯ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿದ್ರೆ ನೀವೂ ಕೂಡ ಪ್ರತಿದಿನ ಕುಡಿತೀರಿ.
(1 / 8)
ಉಪ್ಪಿಟ್ಟು-ಅವಲಕ್ಕಿಯ ಒಗ್ಗರಣೆಯಿಂದ ಸಾಂಬಾರ್- ದಾಲ್‌ವರೆಗೆ ಬಹುತೇಕ ಎಲ್ಲಾ ಅಡುಗೆ ರುಚಿಯ ಹೆಚ್ಚಿಸುವ ಕಾರಣದಿಂದ ಭಾರತೀಯ ಅಡುಗೆ ಮನೆಯಲ್ಲಿ ಕರಿಬೇವಿಗೆ ಅಗ್ರಸ್ಥಾನವಿದೆ. ಆಹಾರದ ಘಮ ಹೆಚ್ಚಿಸುವ ಕರಿಬೇವಿನಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ ಎಂದರೆ ನಂಬಲೇಬೇಕು.(shutterstock)
(2 / 8)
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕರಿಬೇವಿನ ಎಲೆಗಳು ದೇಹದಲ್ಲಿನ ಬೊಜ್ಜು ನಿವಾರಿಸುತ್ತದೆ. ಜೊತೆಗೆ ರಕ್ತಹೀನತೆಯನ್ನು ಕಡಿಮೆ ಮಾಡುವಲ್ಲೂ ಇದು ಪ್ರಯೋಜನಕಾರಿ. ಕರಿಬೇವಿನ ಎಲೆಯ ರಸವನ್ನು ಪ್ರತಿನಿತ್ಯ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ. (shutterstock)
(3 / 8)
ಕರಿಬೇವಿನ ಎಲೆಯಲ್ಲಿ ವಿಟಮಿನ್ ಬಿ2, ವಿಟಮಿನ್ ಬಿ1 ಮತ್ತು ವಿಟಮಿನ್ ಎ, ಐರನ್, ಕ್ಯಾಲ್ಸಿಯಂ, ಪ್ರೊಟೀನ್‌ನಂತಹ ಪೋಷಕಾಂಶಗಳ ಜೊತೆಗೆ ಮಧುಮೇಹ ವಿರೋಧಿ, ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಮೈಕ್ರೋಬಿಯಲ್ ಗುಣಗಳಿವೆ. ಇದು ದೇಹವನ್ನು ಅನೇಕ ರೋಗಗಳಿಂದ ದೂರವಿಡುವ ಮೂಲಕ ವ್ಯಕ್ತಿಯನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.(shutterstock)
(4 / 8)
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಮಧುಮೇಹ ರೋಗಿಗಳಿಗೆ, ಕರಿಬೇವಿನ ಎಲೆಯ ರಸದ ಸೇವನೆಕ್ಕಿಂತ ಉತ್ತಮ ಔಷಧ ಇಲ್ಲ. ಇದರಲ್ಲಿರುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಇದರಲ್ಲಿರುವ ಫೈಬರ್ ದೇಹದಲ್ಲಿ ಹಠಾತ್ ಇನ್ಸುಲಿನ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.(shutterstock)
(5 / 8)
ಕರಿಬೇವಿನ ಎಲೆಯಲ್ಲಿರುವ ವಿಟಮಿನ್ ಎ ಅಂಶ ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಕರಿಬೇವಿನ ಎಲೆಯ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕಣ್ಣಿನ ಪೊರೆಯನ್ನು ತಡೆಯಬಹುದು.(shutterstock)
(6 / 8)
ದೇಹದಲ್ಲಿ ಬೊಜ್ಜು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ನಿಮಗೆ ಅನ್ನಿಸಿದರೆ, ತಕ್ಷಣ ಕರಿಬೇವಿನ ಎಲೆಯ ರಸವನ್ನು ಕುಡಿಯಲು ಆರಂಭಿಸಿ. ಕರಿಬೇವಿನ ಎಲೆಗಳು ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತವೆ. ತೂಕ ನಷ್ಟಕ್ಕೆ ಡಿಟಾಕ್ಸ್ ಅತ್ಯುತ್ತಮ ವಿಧಾನವೆಂದು ಪರಿಗಣಿಸಲಾಗುತ್ತದೆ. ದೇಹವನ್ನು ಸರಿಯಾಗಿ ನಿರ್ವಿಷಗೊಳಿಸಿದಾಗ, ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದಿಲ್ಲ.(shutterstock)
(7 / 8)
ನೀವು ಆಗಾಗ್ಗೆ ರಕ್ತಹೀನತೆಯಿಂದ ಬಳಲುತ್ತಿದ್ದರೆ, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸವನ್ನು ಕುಡಿಯಿರಿ. ಕರಿಬೇವಿನ ಎಲೆಗಳಲ್ಲಿ ಬಹಳಷ್ಟು ಕಬ್ಬಿಣಾಂಶವಿದೆ. ದೇಹದಲ್ಲಿನ ರಕ್ತದ ಕೊರತೆಯನ್ನು ಕಡಿಮೆ ಮಾಡುವ ಮೂಲಕ ಆಯಾಸ ಮತ್ತು ದೌರ್ಬಲ್ಯದಂತಹ ಸಮಸ್ಯೆಗಳನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು