ಮಲಗುವ ಮುನ್ನ ಮೂಗಿಗೆ 2 ಹನಿ ದೇಸಿ ತುಪ್ಪ ಹಾಕುವ ಅಭ್ಯಾಸ ಮಾಡಿ, ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಲಗುವ ಮುನ್ನ ಮೂಗಿಗೆ 2 ಹನಿ ದೇಸಿ ತುಪ್ಪ ಹಾಕುವ ಅಭ್ಯಾಸ ಮಾಡಿ, ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ

ಮಲಗುವ ಮುನ್ನ ಮೂಗಿಗೆ 2 ಹನಿ ದೇಸಿ ತುಪ್ಪ ಹಾಕುವ ಅಭ್ಯಾಸ ಮಾಡಿ, ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ

  • ದೇಸಿ ತುಪ್ಪ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಇದನ್ನು ಮೂಗಿಗೆ ಹಾಕಿಕೊಳ್ಳುವುದರಿಂದಲೂ ಪ್ರಯೋಜನಗಳಿವೆ. ಪ್ರತಿದಿನ 2 ಹನಿ ದೇಸಿ ತುಪ್ಪ ಮೂಗಿಗೆ ಹಾಕುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.

ಭಾರತೀಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ದೇಸಿ ತುಪ್ಪ ಇದ್ದೇ ಇರುತ್ತದೆ. ಇದು ಆಹಾರಗಳಿಗೆ ರುಚಿ ನೀಡುವ ಜೊತೆಗೆ ಆರೋಗ್ಯಕ್ಕೂ ಉತ್ತಮ. ಆ ಕಾರಣಕ್ಕೆ ಖಾದ್ಯಗಳನ್ನು ತಯಾರಿಸುವಾಗ ತುಪ್ಪ ಬಳಸುತ್ತಾರೆ. ಆದರೆ ಇದರ ಸೇವನೆ ಮಾತ್ರವಲ್ಲ ಇದನ್ನು ಮೂಗಿಗೆ ಬಿಟ್ಟುಕೊಳ್ಳುವುದರಿಂದ ಕೂಡ ಸಾಕಷ್ಟು ಪ್ರಯೋಜನಗಳಿವೆ. ರಾತ್ರಿ ಮಲಗುವ ಮುನ್ನ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದೆರಡು ಹನಿ ದೇಸಿ ತುಪ್ಪವನ್ನು ಮೂಗಿಗೆ ಬಿಟ್ಟುಕೊಳ್ಳಬೇಕು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
icon

(1 / 8)

(Shutterstock)

ಇತ್ತೀಚಿನ ದಿನಗಳಲ್ಲಿ, ಅತಿಯಾದ ಒತ್ತಡದಿಂದಾಗಿ ನಿರಂತರ ತಲೆನೋವಿನ ಸಮಸ್ಯೆ ಜನರಲ್ಲಿ ಸಾಮಾನ್ಯವಾಗಿದೆ. ಅನೇಕ ಜನರಿಗೆ ಮೈಗ್ರೇನ್ ಸಮಸ್ಯೆಯೂ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಮೂಗಿಗೆ ಎರಡು ಹನಿ ದೇಸಿ ತುಪ್ಪವನ್ನು ಹಾಕಿಕೊಂಡರೆ,  ತಲೆನೋವಿನಂತಹ ಸಮಸ್ಯೆಗಳಿಂದ  ಪರಿಹಾರ ಪಡೆಯಬಹುದು.
icon

(2 / 8)

ಅತಿಯಾದ ಒತ್ತಡ ಅಥವಾ ಅತಿಯಾಗಿ ಯೋಚಿಸುವುದರಿಂದ ಹಲವರಿಗೆ ರಾತ್ರಿ ಹೊತ್ತು ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿ ಮಲಗುವ ಮುನ್ನ ಮೂಗಿಗೆ ತುಪ್ಪ ಹಾಕಿಕೊಂಡರೆ, ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ. ಇದು ನಿಮಗೆ ಆಳವಾದ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
icon

(3 / 8)

ಮೂಗಿಗೆ ಎರಡು ಹನಿ ದೇಸಿ ತುಪ್ಪ ಹಾಕುವುದರಿಂದ ಮೆದುಳಿನ ಕಾರ್ಯವೂ ಸುಧಾರಿಸುತ್ತದೆ. ಆಯುರ್ವೇದದ ಪ್ರಕಾರ, ತುಪ್ಪವು ಮೆದುಳಿನ ನರಗಳನ್ನು ಉತ್ತೇಜಿಸುತ್ತದೆ, ಇದು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಇದು ಮೆದುಳಿನ ನರಗಳಿಗೆ ಪೋಷಣೆಯನ್ನು ಒದಗಿಸುತ್ತದೆ ಮತ್ತು ಒತ್ತಡದಿಂದ ಪರಿಹಾರವನ್ನು ನೀಡುತ್ತದೆ.
icon

(4 / 8)

ಮೂಗಿನಲ್ಲಿ ಎರಡು ಹನಿ ಬೆಚ್ಚಗಿನ ದೇಸಿ ತುಪ್ಪವನ್ನು ಹಾಕುವುದರಿಂದ ಶೀತ ಮತ್ತು ಮೂಗು ಕಟ್ಟಿಕೊಳ್ಳುವಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇದಲ್ಲದೆ, ದೇಸಿ ತುಪ್ಪವು ಮೂಗು ಒಣಗುವುದು, ತುರಿಕೆ ಮತ್ತು ಸೋಂಕಿನ ಸಮಸ್ಯೆಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನಿಮ್ಮ ಮೂಗಿನಲ್ಲಿರುವ ಧೂಳಿನಿಂದಾಗಿ ಪದೇ ಪದೇ ಸೀನು ಬರುತ್ತಿದ್ದರೆ, ದೇಸಿ ತುಪ್ಪವನ್ನು ಮೂಗಿಗೆ ಹಾಕಿಕೊಳ್ಳಬಹುದು.
icon

(5 / 8)

ಮೂಗಿಗೆ ಎರಡು ಹನಿ ದೇಸಿ ತುಪ್ಪ ಹಾಕುವುದರಿಂದ ಕೂದಲು ಬಲಗೊಳ್ಳುತ್ತದೆ. ಇದು ಕೂದಲು ಉದುರುವಿಕೆಯ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಕೂದಲು ಒಣಗಿದಂತಿದ್ದು, ಪದೇ ಪದೇ ಕೂದಲು ಉದುರುತ್ತಿದ್ದರೆ ಮೂಗಿಗೆ ತುಪ್ಪ ಬಿಟ್ಟುಕೊಳ್ಳುವುದರಿಂದ ಪರಿಹಾರ ಕಂಡುಕೊಳ್ಳಬಹುದು.
icon

(6 / 8)

ಮೂಗಿಗೆ ಎರಡು ಹನಿ ದೇಸಿ ತುಪ್ಪ ಹಾಕುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಯಾವಾಗಲೂ ಏನಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಬೆಳಿಗ್ಗೆ ಎದ್ದ ನಂತರ ಅಥವಾ ಮಲಗುವ ಮುನ್ನ ಮೂಗಿಗೆ ಎರಡು ಹನಿ ಎಣ್ಣೆಯನ್ನು ಹಾಕಿಕೊಳ್ಳಬೇಕು.
icon

(7 / 8)

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
icon

(8 / 8)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು