ವೀರ್ಯದ ಪ್ರಮಾಣ ಹೆಚ್ಚುವುದರಿಂದ ಮಲಬದ್ಧತೆ ನಿವಾರಣೆವರೆಗೆ; ಪಡುವಲಕಾಯಿ ಸೇವನೆಯಿಂದ ಆರೋಗ್ಯಕ್ಕಿದೆ ಇಷ್ಟೊಂದು ಪ್ರಯೋಜನ
ನಾವು ಸೇವಿಸುವ ತರಕಾರಿಗಳು ನಮ್ಮ ಹಸಿವನ್ನ ನೀಗಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನ ನೀಡುತ್ತವೆ. ಆರೋಗ್ಯಕ್ಕೆ ಬೆಸ್ಟ್ ಎನ್ನಿಸುವ ತರಕಾರಿಗಳಲ್ಲಿ ಪಡುವಲಕಾಯಿ ಕೂಡ ಒಂದು. ಇದು ತಿನ್ನಲು ಸಪ್ಪೆ ಅನ್ನಿಸಿದ್ರೂ ಇದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಇದರ ಎಲೆ ಕೂಡ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
(1 / 7)
ಪಡುವಲಕಾಯಿಯಲ್ಲಿ ನೀರಿನಾಂಶ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಇದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಇದು ಮೂಲವ್ಯಾಧಿ ನಿವಾರಣೆಗೂ ಸಹಕಾರಿ. ಪುರುಷರು ಹೆಚ್ಚು ಹೆಚ್ಚು ಪಡುವಲಕಾಯಿ ತಿನ್ನಬೇಕು. ಇದರಿಂದ ಅವರಲ್ಲಿ ವೀರ್ಯಾಣುವಿನ ಪ್ರಮಾಣ ವೃದ್ಧಿಯಾಗುತ್ತದೆ. ಮಾತ್ರವಲ್ಲ, ಪುರುಷರಲ್ಲಿ ಬಂಜೆತನದ ಸಮಸ್ಯೆ ನಿವಾರಣೆಗೂ ಸೋರೆಕಾಯಿ ಉತ್ತಮ
(2 / 7)
ಪಡುವಲಕಾಯಿಯು ಮೂತ್ರಪಿಂಡದ ಆರೋಗ್ಯ ಸುಧಾರಣೆಗೆ ಬಹಳ ಉತ್ತಮ. ಇದು ಮೂತ್ರಪಿಂಡದಲ್ಲಿರುವ ವಿಷಾಂಶಗಳನ್ನು ಹೊರ ಹಾಕುತ್ತದೆ. ಕಿಡ್ನಿಸ್ಟೋನ್ ನಿವಾರಣೆಗೂ ಸೋರೆಕಾಯಿ ಉತ್ತಮ.
(3 / 7)
ಪಡುವಲಕಾಯಿ ತಿನ್ನುವುದರಿಂದ ಕರುಳಿನ ಹುಣ್ಣು ನಿವಾರಣೆಯಾಗುತ್ತದೆ. ಇದರಿಂದ ನಾರಿನಾಂಶ ಹಾಗೂ ನೀರಿನಾಂಶ ಸಮೃದ್ಧವಾಗಿರುವ ಕಾರಣ ತೂಕ ಇಳಿಸಿಕೊಳ್ಳಲು ಕೂಡ ಸಹಕಾರಿ. ಇದು ಕೊಬ್ಬು ಕರಗಿಸುವ ಸಾಮರ್ಥ್ಯವನ್ನೂ ಹೊಂದಿದೆ.
(4 / 7)
ಪಡುವಲಕಾಯಿ ತಿನ್ನುವುದರಿಂದ ದೇಹ ತೇವಾಂಶ ಸಮೃದ್ಧವಾಗಿರುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಬಿ6 ಅಂಶವಿದ್ದು, ಇದು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ, ಇದು ನರಗಳ ಪ್ರಚೋದನೆಯನ್ನು ಸುಧಾರಿಸುತ್ತದೆ .
(5 / 7)
ಪಡುವಲಕಾಯಿ ಒತ್ತಡ ಹಾಗೂ ಆತಂಕ ನಿವಾರಣೆಗೂ ಸಹಕಾರಿ. ಇದು ನರಗಳ ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ. ಉತ್ತಮ ನಿದ್ದೆಗೆ ಸಹಕರಿಸುತ್ತದೆ. ಇದು ಯೃಕತ್ತಿನ ಸಮಸ್ಯೆ ನಿವಾರಣೆಗೂ ಸಹಕಾರಿ. ಇದರ ಹಾಗೂ ಎಲೆಗಳನ್ನು ಜಾಂಡಿಸ್ ನಿವಾರಣೆಗೂ ಬಳಸಲಾಗುತ್ತದೆ.
(6 / 7)
ಪಡುವಲಕಾಯಿಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಾರ್ಬೋಹೈಡ್ರೇಟ್, ಖನಿಜಗಳು, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಅಯೋಡಿನ್, ಪೊಟ್ಯಾಸಿಯಮ್‌ನಂತಹ ದೇಹಕ್ಕೆ ಅಗತ್ಯ ಇರುವ ಪೋಷಕಾಂಶಗಳಿವೆ.
ಇತರ ಗ್ಯಾಲರಿಗಳು