ಏಸಿ ರೂಮ್‌ನಿಂದ ನೇರವಾಗಿ ಬಿಸಿಲಿಗೆ ಹೋಗುವ ಮುನ್ನ ಎಚ್ಚರ, ಈ 5 ಅಂಶಗಳು ಆರೋಗ್ಯಕ್ಕೆ ಹಾನಿ ಮಾಡಬಹುದು
ಏಸಿ ಕೋಣೆಯಿಂದ ನೀವು ನೇರವಾಗಿ ಉರಿ ಬಿಸಿಲಿಗೆ ತೆರಳಿದರೆ ಆರೋಗ್ಯಕ್ಕೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದೆ ಎಂದು ಅರ್ಥ. ಎಸಿಯಿಂದ ಹೊರಬಂದು ಬಿಸಿಲಿಗೆ ಹೋಗುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳಿವು.
(1 / 8)
ಬಿಸಿಲಿನ ಬೇಗೆ ಮತ್ತು ಬಿಸಿ ಗಾಳಿಯಿಂದ ರಕ್ಷಿಸಿಕೊಳ್ಳಲು ಜನರು ತಮ್ಮ ಮನೆ ಮತ್ತು ವಾಹನಗಳಲ್ಲಿ ಎಸಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಕಚೇರಿಗಳಲ್ಲೂ ಏಸಿ ಇರುವುದು ಸಾಮಾನ್ಯ. ಎಸಿಯ ತಂಪಾದ ಗಾಳಿಯು ದೇಹವನ್ನು ತಂಪಾಗಿಸಿ, ದೇಹವನ್ನು ಉಲ್ಲಾಸದಿಂದಿಡುತ್ತದೆ. ಆದರೆ ಹವಾನಿಯಂತ್ರಣ ವ್ಯವಸ್ಥೆ ಇರುವ ಕೋಣೆಯಿಂದ ನೇರವಾಗಿ ಸೂರ್ಯನ ಬೆಳಕಿಗೆ ಹೋದರೆ, ನಿಮಗೆ ತಿಳಿಯದಂತೆ ನೀವು ಆರೋಗ್ಯವನ್ನು ಅಪಾಯಕ್ಕೆ ಒಡ್ಡುತ್ತಿದ್ದೀರಿ ಎಂದರ್ಥ. ಎಸಿಯಿಂದ ಹೊರಬಂದ ತಕ್ಷಣ ಬಿಸಿಲಿಗೆ ಹೋಗುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಹಾನಿಯಾಗುತ್ತದೆ ನೋಡಿ.
(Pic Credit: Shutterstock)(2 / 8)
ಎಸಿ ಕೋಣೆಯ ತಂಪಾದ ತಾಪಮಾನ ಮತ್ತು ಹೊರಗಿನ ಶಾಖದ ನಡುವಿನ ವ್ಯತ್ಯಾಸವು ದೇಹವನ್ನು ಆಘಾತಗೊಳಿಸುತ್ತದೆ. ಇದರಿಂದಾಗಿ ವ್ಯಕ್ತಿಯ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿ ಹಠಾತ್ ಬದಲಾವಣೆ ಉಂಟಾಗಬಹುದು, ಇದು ಹೃದಯ ರೋಗಿಗಳಿಗೆ ಅಪಾಯಕಾರಿ.
(Pic Credit: Shutterstock)(3 / 8)
ಹವಾನಿಯಂತ್ರಣ ವ್ಯವಸ್ಥೆಯಿರುವ ಕೋಣೆಯಲ್ಲಿ ಇದ್ದಾಗ ದೇಹದ ತೇವಾಂಶ ಕಡಿಮೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಬಿಸಿಲಿಗೆ ಹೊರಗೆ ಹೋದಾಗ, ದೇಹದಿಂದ ಬಹಳಷ್ಟು ಬೆವರು ಹರಿಯುತ್ತದೆ. ಇದು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸುತ್ತದೆ. ವ್ಯಕ್ತಿಯು ನಿರ್ಜಲೀಕರಣದಿಂದ ಬಳಲಿದಾಗ, ತಲೆನೋವು, ಆಯಾಸ ಮತ್ತು ತಲೆತಿರುಗುವಿಕೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
(Pic Credit: Shutterstock)(4 / 8)
ಶೀತ ವಾತಾವರಣದಿಂದ ಇದ್ದಕ್ಕಿದ್ದಂತೆ ಬೆಚ್ಚಗಿನ ವಾತಾವರಣಕ್ಕೆ ಹೋಗುವುದು ಮೂಗು ಮತ್ತು ಗಂಟಲಿನ ಲೋಳೆಯ ಪೊರೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಶೀತ, ಕೆಮ್ಮು ಅಥವಾ ಗಂಟಲು ನೋವಿಗೆ ಕಾರಣವಾಗಬಹುದು. ಈಗಾಗಲೇ ಅಲರ್ಜಿ ಅಥವಾ ಆಸ್ತಮಾ ಇರುವ ಜನರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
(Pic Credit: Shutterstock)(5 / 8)
ಹವಾನಿಯಂತ್ರಣ ವ್ಯವಸ್ಥೆಯ ಕೋಣೆಯ ತಂಪಾದ, ಶುಷ್ಕ ಗಾಳಿ ಮತ್ತು ಸೂರ್ಯನ ಶಾಖ, ಯುವಿ ಕಿರಣಗಳ ಸಂಯೋಜನೆಯು ಚರ್ಮವನ್ನು ಶುಷ್ಕ ಮತ್ತು ಸೂಕ್ಷ್ಮವಾಗಿಸುತ್ತದೆ. ಇದು ಬಿಸಿಲಿನ ಬೇಗೆಯ ಪರಿಣಾಮ, ಚರ್ಮದ ಕಿರಿಕಿರಿ ಅಥವಾ ಅಲರ್ಜಿಯನ್ನು ಉಂಟುಮಾಡಬಹುದು.
(Pic Credit: Shutterstock)(6 / 8)
ಎಸಿಯ ಶುಷ್ಕ ಗಾಳಿ ಮತ್ತು ಸೂರ್ಯನ ಪ್ರಕಾಶಮಾನವಾದ ಬೆಳಕು ಕಣ್ಣುಗಳಲ್ಲಿ ಶುಷ್ಕತೆ, ಕಿರಿಕಿರಿ ಅಥವಾ ಕಣ್ಣು ಕೆಂಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಇದು ದೀರ್ಘಕಾಲದವರೆಗೆ ಸಂಭವಿಸಿದಲ್ಲಿ ಕಣ್ಣುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
(Pic Credit: Shutterstock)(7 / 8)
ತಾಪಮಾನದಲ್ಲಿನ ಹಠಾತ್ ಬದಲಾವಣೆಗಳು ಸ್ನಾಯು ಸೆಳೆತ ಅಥವಾ ನೋವನ್ನು ಉಂಟು ಮಾಡಬಹುದು. ಅದರಲ್ಲೂ ದೈಹಿಕ ಚಟುವಟಿಕೆ ಕಡಿಮೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸುತ್ತದೆ.
ಇತರ ಗ್ಯಾಲರಿಗಳು