Heart Attack: ಹೃದಯಾಘಾತದ ಕುರಿತು ಭಯಪಡಬೇಡಿ, ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಈ ಆಹಾರಗಳನ್ನು ಸೇವಿಸಿ
- Heart Attacks Prevent Foods: ಈಗ ಎಲ್ಲಾ ವಯೋಮಾನದವರಿಗೆ ಹೃದಯಾಘಾತದ ಕುರಿತು ಭಯವಿದೆ. ಬೆಳ್ಳುಳ್ಳಿ, ಶುಂಠಿ ಸೇರಿದಂತೆ ವಿವಿಧ ಆಹಾರಗಳು ರಕ್ತ ಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತವೆ. ಹೃದಯಾಘಾತದ ಅಪಾಯ ಕಡಿಮೆ ಮಾಡಲು ಸಹಕರಿಸುವ ಕೆಲವು ಆಹಾರಗಳ ವಿವರ ಇಲ್ಲಿದೆ.
- Heart Attacks Prevent Foods: ಈಗ ಎಲ್ಲಾ ವಯೋಮಾನದವರಿಗೆ ಹೃದಯಾಘಾತದ ಕುರಿತು ಭಯವಿದೆ. ಬೆಳ್ಳುಳ್ಳಿ, ಶುಂಠಿ ಸೇರಿದಂತೆ ವಿವಿಧ ಆಹಾರಗಳು ರಕ್ತ ಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತವೆ. ಹೃದಯಾಘಾತದ ಅಪಾಯ ಕಡಿಮೆ ಮಾಡಲು ಸಹಕರಿಸುವ ಕೆಲವು ಆಹಾರಗಳ ವಿವರ ಇಲ್ಲಿದೆ.
(1 / 6)
ಆಹಾರ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕೆಟ್ಟದ್ದು. ನಾವು ಏನು ಸೇವಿಸುತ್ತೇವೆ ಎನ್ನುವುದು ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತ ಪರಿಚಲನೆ ವ್ಯವಸ್ಥೆಯ ಮೇಲೂ ಆಹಾರ ಪ್ರಭಾವ ಬೀರುತ್ತದೆ. "ಆಹಾರವು ರಕ್ತ ಹೆಪ್ಪುಗಟ್ಟುವಿಕೆ ವಿರುದ್ಧ ಹೋರಾಡುವ ನೈಸರ್ಗಿಕ ರಕ್ಷಣಾ ವ್ಯವಸ್ಥೆಯಾಗಿದೆ. ಆರೋಗ್ಯಕರ ರಕ್ತಪರಿಚಲನೆಗೆ ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಪ್ರಮುಖ ಪಾತ್ರವಹಿಸುತ್ತದೆ" ಎಂದು ಪೌಷ್ಠಿಕತಜ್ಞೆ ಅಂಜಲಿ ಹೇಳಿದ್ದಾರೆ.(Unsplash)
(2 / 6)
ರಕ್ತ ಹೆಪ್ಪುಗಟ್ಟುವಿಕೆಯು ಹೃದಯಘಾತವಾಗುವ ಸಾಧ್ಯತೆಯನ್ನು ನಿರ್ಧರಿಸುತ್ತದೆ. ಕೆಲವು ಆಹಾರಗಳು ರಕ್ತಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇನ್ನು ಕೆಲವು ಆಹಾರಗಳು ರಕ್ತ ಅಂಟಿಕೊಳ್ಳುವಂತೆ ಮತ್ತು ಹೆಪ್ಪುಗಟ್ಟುವಂತೆ ಮಾಡುತ್ತವೆ. ಹೃದಯದ ಆರೋಗ್ಯಕ್ಕೆ ಸೂಕ್ತವಾದ ಮತ್ತು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಕೆಲವು ಆಹಾರಗಳ ವಿವರ ಇಲ್ಲಿದೆ.(Unsplash)
(3 / 6)
ಕಪ್ಪು ಅಣಬೆ: ಇದು ರಕ್ತ ಹೆಪ್ಪುಗಟ್ಟುವಿಕೆ ತಡೆಯುವ ಗುಣಲಕ್ಷಣ ಹೊಂದಿದೆ. ರಕ್ತದ ಪ್ಲೇಟ್‌ಲೆಟ್‌ಗಳು ಒಟ್ಟಿಗೆ ಅಂಟಿಕೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ.(Unsplash)
(4 / 6)
ಶುಂಠಿ ಮತ್ತು ಬೆಳ್ಳುಳ್ಳಿ: ಇದು ರಕ್ತವನ್ನು ತೆಳುವಾಗಿಸಲು ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟ್ಟಿದ್ದರೆ ಕರಗಿಸುತ್ತದೆ. (Unsplash)
(5 / 6)
ಈರುಳ್ಳಿ: ಪ್ರತಿನಿತ್ಯ ಬಳಸುವ ಈರುಳ್ಳಿ ಕೂಡ ಹೃದಯದ ಆರೋಗ್ಯಕ್ಕೆ ಸಹಕಾರಿ. ಈರುಳ್ಳಿಯಲ್ಲಿರುವ ಸಂಯುಕ್ತಗಳು ಪ್ಲೇಟ್‌ಲೆಟ್‌ಗಳು ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅಂಜಲಿ ಮುಖರ್ಜಿ ಹೇಳಿದ್ದಾರೆ. (Unsplash)
ಇತರ ಗ್ಯಾಲರಿಗಳು