Garlic Benefits: ಶೀತ, ಕೆಮ್ಮಿಗೆ ರಾಮಬಾಣ ಬೆಳ್ಳುಳ್ಳಿ; ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಸಿಗಬಹುದಾದ 6 ಆರೋಗ್ಯ ಪ್ರಯೋಜನಗಳಿವು
Garlic Benefits: ಸಸ್ಯಾಹಾರಿ ಖಾದ್ಯಗಳಿಂದ ಹಿಡಿದು ಮಾಂಸಾಹಾರಿ ಭಕ್ಷ್ಯಗಳವರೆಗೆ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಖಾದ್ಯಗಳಿಗೆ ಮಾತ್ರವಲ್ಲ ಇದು ಶೀತ, ಕೆಮ್ಮು ನಿವಾರಣೆಗೂ ಸಹಕಾರಿಯಾಗಿದೆ. ಇದರಲ್ಲಿ ಸಾಕಷ್ಟು ವೈದ್ಯಕೀಯ ಗುಣಗಳಿದ್ದು, ಆಯುರ್ವೇದದಲ್ಲಿ ಇದರ ಉಲ್ಲೇಖವಿದೆ. ತಲೆಮಾರುಗಳಿಂದ ಅಡುಗೆ ಮನೆಗಳಲ್ಲಿ ಬೆಳ್ಳುಳ್ಳಿ ಬಳಕೆ ಚಾಲ್ತಿಯಲ್ಲಿದೆ.
(1 / 9)
ಬೆಳ್ಳುಳ್ಳಿಯಲ್ಲಿ ಸಾಕಷ್ಟು ವೈದ್ಯಕೀಯ ಗುಣಗಳಿವೆ. ಖಾದ್ಯಗಳಿಗೆ ಮಾತ್ರ ಸೀಮಿತವಾಗಿರದ ಬೆಳ್ಳುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯ ಔಷಧ ಗುಣಗಳ ಉಲ್ಲೇಖವಿದೆ. ಭಾರತೀಯ ಪಾಕಪದ್ಧತಿಯಂತೆ ಅಡುಗೆ ಮನೆಗಳಲ್ಲಿ ಬೆಳ್ಳುಳ್ಳಿ ಬಳಕೆ ತಲೆಮಾರುಗಳಿಂದ ಚಾಲ್ತಿಯಲ್ಲಿದೆ. ಇಂತಹ ಬೆಳ್ಳುಳ್ಳಿಯನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಸಿಗಬಹುದಾದ 6 ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.
(PC: Pixabay)(2 / 9)
ಬೆಳ್ಳುಳ್ಳಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ವಿಟಮಿನ್ ಸಿ, ವಿಟಮಿನ್ ಬಿ 6 ಮತ್ತು ಮ್ಯಾಂಗನೀಸ್‌ಗಳು ಸಮೃದ್ಧವಾಗಿವೆ. ಹಾಗೆಯೇ ಇತರ ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಉತ್ತಮ.
(Pixabay)(3 / 9)
ಬೆಳ್ಳುಳ್ಳಿಯು ಶೀತ ಮತ್ತು ಕೆಮ್ಮನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ವೈರಾಣು ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕುಗಳ ವಿರುದ್ಧ ಹೋರಾಡಲು ಶರೀರಕ್ಕೆ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮಿನ ಚಿಕಿತ್ಸೆಗಾಗಿ ಮನೆಮದ್ದಾಗಿ ಬಳಸಲಾಗುತ್ತದೆ.
(Pixabay)(4 / 9)
ಬೆಳ್ಳುಳ್ಳಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿರ್ವಹಿಸುವುದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
(Pixabay)(5 / 9)
ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಉರಿಯೂತ ನಿವಾರಕ ಗುಣವಿದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯಕರ ಹೃದಯವನ್ನು ಉತ್ತೇಜಿಸುತ್ತದೆ.
(Pixabay)(6 / 9)
ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದಕ್ಕೆ ಅಗತ್ಯವಾದ ಇನ್ಸುಲಿನ್‌ನ ಸಂವೇದನಾ ತೀವ್ರತೆಯನ್ನು ಬೆಳ್ಳುಳ್ಳಿ ಹೆಚ್ಚಿಸುತ್ತದೆ.ಇದು ಮಧುಮೇಹಿಳಿಗೆ ಹೆಚ್ಚು ಪ್ರಯೋಜನಕಾರಿ. ಏಕೆಂದರೆ ಇದು ರಕ್ತದ ಗ್ಲುಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ.
(Pixabay)(7 / 9)
ಬೆಳ್ಳುಳ್ಳಿ ರೋಗನಿರೋಧಕ ಕಾರ್ಯವನ್ನು ಬೆಂಬಲಿಸುತ್ತದೆ ಮತ್ತು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ.
(Pixabay)(8 / 9)
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
(Pixabay)ಇತರ ಗ್ಯಾಲರಿಗಳು