ರಕ್ತದೊತ್ತಡ ನಿವಾರಣೆಯಿಂದ ತೂಕ ಇಳಿಕೆವರೆಗೆ, ಪ್ರತಿದಿನ ದಾಸವಾಳ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ
- ಚಹಾ, ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತೆ ಎಂಬ ಮಾತನ್ನು ನೀವು ಕೇಳಿರಬಹುದು. ಅದರ ಬದಲಿಗೆ ಏನು ಕುಡಿಯಬಹುದು ಅಂತ ಯೋಚಿಸ್ತಾ ಇದ್ರೆ, ದಾಸವಾಳ ಚಹಾ ಉತ್ತಮ ಆಯ್ಕೆ, ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೂ ಇದೆ ನೂರಾರು ಪ್ರಯೋಜನ. ಪ್ರತಿದಿನ ದಾಸವಾಳ ಚಹಾ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
- ಚಹಾ, ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತೆ ಎಂಬ ಮಾತನ್ನು ನೀವು ಕೇಳಿರಬಹುದು. ಅದರ ಬದಲಿಗೆ ಏನು ಕುಡಿಯಬಹುದು ಅಂತ ಯೋಚಿಸ್ತಾ ಇದ್ರೆ, ದಾಸವಾಳ ಚಹಾ ಉತ್ತಮ ಆಯ್ಕೆ, ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೂ ಇದೆ ನೂರಾರು ಪ್ರಯೋಜನ. ಪ್ರತಿದಿನ ದಾಸವಾಳ ಚಹಾ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ.
(1 / 8)
ದಾಸಾವಾಳ ಹೂವನ್ನು ಪೂಜೆಗೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಹೂವು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆ ಕಾರಣಕ್ಕೆ ಇದನ್ನು ಪ್ರತಿದಿನ ಚಹಾ ರೂಪದಲ್ಲಿ ಸೇವಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ರಕ್ತದೊತ್ತಡ ನಿವಾರಣೆಯಿಂದ ತೂಕ ಇಳಿಕೆವರೆಗೆ ಪ್ರತಿದಿನ ದಾಸವಾಳ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.
(2 / 8)
ದಾಸವಾಳದ ಹೂವಿನ ಚಹಾವು ಗಾಢ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಈ ಚಹಾದಲ್ಲಿ ಕೆಫೀನ್ ಇರುವುದಿಲ್ಲ. ಆದ್ದರಿಂದ ಇದನ್ನು ಯಾವುದೇ ಭಯವಿಲ್ಲದೇ ಇದನ್ನು ಪ್ರತಿದಿನ ಕುಡಿಯಬಹುದು. ಆಯುರ್ವೇದದಲ್ಲೂ ಇದಕ್ಕೆ ವಿಶೇಷ ಮಹತ್ವವಿದೆ.
(3 / 8)
ದಾಸವಾಳದ ಹೂವುಗಳನ್ನು ಒಣಗಿಸಿ ಅವುಗಳಿಂದ ಚಹಾ ತಯಾರಿಸಿ ಕುಡಿದರೆ ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು. ಆಲ್ಝೈಮರ್ ಮತ್ತು ಸಂಧಿವಾತದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸಹ ಈ ಚಹಾ ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದು.
(4 / 8)
ಈ ಚಹಾ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಯೋಜನಕಾರಿ, ಇದರ ನಿರಂತರ ಸೇವನೆಯಿಂದಾಗ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಿದೆ.
(5 / 8)
ತೂಕ ಇಳಿಸಲು ದಾಸವಾಳದ ಹೂವು ಬಹಳ ಪರಿಣಾಮಕಾರಿ ಎಂದು ವಿವಿಧ ಅಧ್ಯಯನಗಳು ತೋರಿಸಿವೆ. ದಾಸವಾಳದ ಹೂವಿನ ರಸವು ಬೊಜ್ಜಿನ ಸಮಸ್ಯೆಯನ್ನು ಹೋಗಲಾಡಿಸಲು ಉಪಯುಕ್ತವಾಗಿದೆ. ಇದು ಚರ್ಮ ಮತ್ತು ಕೂದಲಿನ ಆರೈಕೆಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
(6 / 8)
ದಾಸವಾಳದ ಚಹಾ ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದು. ಈ ಚಹಾವು ದೇಹದಿಂದ ವಿವಿಧ ವಿಷಕಾರಿ ಅಂಶಗಳನ್ನು ತೆಗೆದುಹಾಕುವ ಮೂಲಕ ಆರೋಗ್ಯವನ್ನು ಸುಧಾರಿಸುತ್ತದೆ
(7 / 8)
ದಾಸಾವಾಳ ಹೂ ಚಹಾ ಮಾಡುವ ವಿಧಾನ: ಈ ಚಹಾಕ್ಕೆ 3-4 ದಾಸವಾಳದ ಹೂವುಗಳು ಬೇಕಾಗುತ್ತವೆ. ಈ ಹೂವುಗಳನ್ನು ಚೆನ್ನಾಗಿ ತೊಳೆದು ಒಣಗಿಸಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ನೀರು ಬಿಸಿ ಮಾಡಿ. ಅದಕ್ಕೆ ಒಣಗಿದ ದಾಸವಾಳ ಹೂವುಗಳನ್ನು ಸೇರಿಸಿ. ಕುದಿಸಿದ ನಂತರ ಅದನ್ನು ಫಿಲ್ಟರ್ ಮಾಡಬೇಕು. ಅದಕ್ಕೆ ನಿಂಬೆ ರಸವನ್ನು ಹಿಂಡಿ. ರುಚಿಗೆ ಜೇನುತುಪ್ಪ ಬೇಕಿದ್ದರೆ ಸೇರಿಸಬಹುದು.
ಇತರ ಗ್ಯಾಲರಿಗಳು