Curd Benefits: ಪ್ರತಿದಿನ ಮೊಸರು ತಿನ್ನುವುದರಿಂದ ಯಾವೆಲ್ಲಾ ರೋಗಗಳನ್ನು ತಡೆಯಬಹುದು; ತಜ್ಞರ ಟಿಪ್ಸ್
- Curd Benefits: ಪ್ರತಿದಿನ ಮೊಸರು ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ. ಯಾವೆಲ್ಲಾ ರೋಗಗಳನ್ನು ತಡೆಯಬಹುದು ಅನ್ನೋದರ ವಿವರ ಇಲ್ಲಿದೆ.
- Curd Benefits: ಪ್ರತಿದಿನ ಮೊಸರು ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ. ಯಾವೆಲ್ಲಾ ರೋಗಗಳನ್ನು ತಡೆಯಬಹುದು ಅನ್ನೋದರ ವಿವರ ಇಲ್ಲಿದೆ.
(1 / 7)
ಜಗತ್ತಿನಾದ್ಯಂತ ಬಳಸುವ ಆಹಾರ ಪದಾರ್ಥಗಳಲ್ಲಿ ಮೊಸರು ಕೂಡ ಒಂದು. ನಿತ್ಯ ಮೊಸರು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ರುಚಿ ಹಾಗೂ ಕೆನೆಭರಿತ ಮೊಸರು ನಿಮ್ಮ ಆರೋಗ್ಯಕ್ಕೆ ಅದ್ಭುತ ನೆರವು ನೀಡುತ್ತೆ. ಮಧುಮೇಹದಂತಹ ವಿವಿಧ ಕಾಯಿಲೆಗಳನ್ನು ತಡೆಯಲು ಮೊಸರು ಸಹಾಯ ಮಾಡುತ್ತದೆ.
(2 / 7)
ನಿತ್ಯ ಮೊಸರು ಸೇವನೆಯಿಂದ ರೋಗನಿರೋಧ ಶಕ್ತಿಯನ್ನು ಹೆಚ್ಚಳವಾಗುತ್ತದೆ. ಮೊಸರಿನಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯ ಹೆಚ್ಚಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಇದು ಸಹಾಯ ನೆರವಾಗುತ್ತದೆ.
(3 / 7)
ಮೊಸರು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಮೊಸರಿನಲ್ಲಿರುವ ಲೈವ್ ಬ್ಯಾಕ್ಟೀರಿಯಾ ಅಥವಾ ಪ್ರೊಬಯಾಟಿಕ್‌ಗಳು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
(4 / 7)
ಪ್ರತಿದಿನ ಮೊಸರು ತಿನ್ನವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದರ ಜೊತೆಗೆ ಹೃದಯದ ರಕ್ತನಾಳ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
(5 / 7)
ಆಸ್ಟಿಯೊಪೊರೊಸಿಸ್ ಸಮಸ್ಯೆಯನ್ನು ತಡೆಗಟ್ಟಲು ಮೊಸರು ಸಹಕಾರಿಯಾಗಿದೆ. ಆಸ್ಟಿಯೊಪೊರೊಸಿಸ್ ಎನ್ನುವುದು ದುರ್ಬಲಗೊಂಡ ಮೂಳೆಗಳ ಮತ್ತು ಮುರಿತದ ಅಪಾಯದ ಒಂದು ಸ್ಥಿತಿಯಾಗಿದೆ. ನಿಯಮಿತವಾಗಿ ಮೊಸರು ಸೇವಿಸುವುದರಿಂದ ಮೊಳೆಗಳು ಬಲಗೊಳ್ಳುತ್ತವೆ.
(6 / 7)
ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕೊಲೊನ್ ಕ್ಯಾನ್ಸರ್ ಜಗತ್ತಿನಾದ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ನಿಯಮಿತವಾಗಿ ಮೊಸರು ಸೇವಿಸುವುದರಿಂದ ಈ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ.
ಇತರ ಗ್ಯಾಲರಿಗಳು