Hing Benefits: ಅಡುಗೆ ರುಚಿಯಾಗಲು ಬಳಸುವ ಚಿಟಿಕೆ ಇಂಗು ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಕಾರಿ ಅಂದ್ರೆ ನಂಬಲೇಬೇಕು
Hing benefits: ಪ್ರತಿನಿತ್ಯ ನಾವು ಮಾಡುವ ಅಡುಗೆಗೆ ಚಿಟಿಕೆ ಇಂಗು ಬಳಸುವುದರಿಂದ ಆಹಾರ ಖಾದ್ಯಗಳ ಘಮ ಹೆಚ್ಚುತ್ತದೆ. ಇಂಗಿನ ಬಳಕೆಯಿಂದ ಅಡುಗೆಯ ರುಚಿ ವೃದ್ಧಿಸುವುದು ಮಾತ್ರವಲ್ಲ ಚಿಟಿಕೆ ಇಂಗಿನಿಂದ ಆರೋಗ್ಯಕ್ಕೆ ಬೆಟ್ಟದಷ್ಟು ಪ್ರಯೋಜನಗಳಿವೆ. ಇದರಿಂದ ದೇಹಕ್ಕೆ ಏನೆಲ್ಲಾ ಲಾಭವಿದೆ ನೋಡಿ.
(1 / 8)
ಭಾರತೀಯ ಆಹಾರ ಖಾದ್ಯಗಳ ತಯಾರಿಕೆಯಲ್ಲಿ ಇಂಗಿಗೆ ವಿಶೇಷ ಸ್ಥಾನವಿದೆ. ಬಹಳ ಹಿಂದಿನಿಂದಲೂ ಅಡುಗೆಗೆ ಇಂಗು ಬಳಸುವ ಪದ್ಧತಿ ರೂಢಿಯಲ್ಲಿತ್ತು. ನಮ್ಮ ಆಹಾರದಲ್ಲಿ ಚಿಟಿಕೆ ಇಂಗು ಸೇರಿಸುವ ಮೂಲಕ ಆರೋಗ್ಯವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ತಿಳಿಯಲು ಇದನ್ನು ಓದಿ.
(2 / 8)
ಇಂಗು ಭಾರತೀಯ ಪಾಕಪದ್ಧತಿಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆ. ಅದರಲ್ಲೂ ಪುಳಿಯೋಗರೆ, ಸಾಂಬಾರ್‌ನಂತಹ ಖಾದ್ಯಗಳಿಗೆ ಇಂಗು ಇಲ್ಲದೆ ರುಚಿಯೇ ಇರುವುದಿಲ್ಲ. ರುಚಿಯ ಹೊರತಾಗಿ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
(3 / 8)
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಇಂಗು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
(4 / 8)
ಇಂಗಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೋಂಕನ್ನು ತಡೆಗಟ್ಟಲು ಮತ್ತು ಯಾವುದೇ ಗಾಯಗಳ ಗುಣಪಡಿಸುವಿಕೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ತ್ವಚೆಯ ಸೌಂದರ್ಯಕ್ಕೆ ಬಳಸುವ ಫೇಸ್‌ಪ್ಯಾಕ್‌ಗಳಲ್ಲಿ ಚಿಟಿಕೆ ಇಂಗು ಹಾಕಿ ಮುಖಕ್ಕೆ ಹಚ್ಚಿದರೆ ತ್ವಚೆಯ ಆರೋಗ್ಯವೂ ಹೆಚ್ಚುತ್ತದೆ.
(5 / 8)
ಇಂಗಿನ ಉರಿಯೂತದ ಗುಣಲಕ್ಷಣಗಳು ಮುಟ್ಟಿನ ಸೆಳೆತ ಮತ್ತು ಇತರ ಪಿಎಂಎಸ್ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಪಿರಿಯಡ್ಸ್ ಸಮಯದಲ್ಲಿ ಅಧಿಕ ರಕ್ತಸ್ರಾವವನ್ನು ಸಹ ನಿಯಂತ್ರಿಸುತ್ತದೆ.
(6 / 8)
ಒಂದು ಅಧ್ಯಯನದ ಪ್ರಕಾರ, ಇಂಗನ್ನು ಆಯುರ್ವೇದ ಔಷಧದಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿಗಾಗಿ ದೀರ್ಘಕಾಲ ಬಳಸಲಾಗುತ್ತಿದೆ.
(7 / 8)
ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಅದರ ಕ್ಷಾರೀಯ ಗುಣಲಕ್ಷಣಗಳಿಂದಾಗಿ, ಇದು ಹೊಟ್ಟೆಯ ಆಮ್ಲೀಯತೆ ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ಕಡಿಮೆ ಮಾಡುತ್ತದೆ.
ಇತರ ಗ್ಯಾಲರಿಗಳು