ವೇಗವಾಗಿ ತಿಂದು ಮುಗಿಸುವ ಅಭ್ಯಾಸ ನಿಮಗೂ ಇದೆಯಾ? ಆರೋಗ್ಯಕ್ಕೆ ಹಾನಿಯಾದೀತು ಜೋಕೆ, ನಿಧಾನವಾಗಿ ತಿನ್ನಲು ಇಲ್ಲಿವೆ ಸಲಹೆ
- ನಿಮಗೆ ಆಗಾಗ ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಯಂಥ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನಿಮ್ಮ ಆಹಾರ ಸೇವನೆಯ ಕ್ರಮ ಸರಿಯಿಲ್ಲ ಎಂದರ್ಥ. ಇದಕ್ಕಾಗಿ ನೀವು ತಿನ್ನುವ ವೇಗವನ್ನು ತುಸು ಕಡಿಮೆ ಮಾಡುವುದೊಂದೇ ದಾರಿ. ಇದರೊಂದಿಗೆ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಬಹುದು.
- ನಿಮಗೆ ಆಗಾಗ ಹೊಟ್ಟೆ ಉಬ್ಬರ ಮತ್ತು ಅಸಿಡಿಟಿಯಂಥ ಜೀರ್ಣಕಾರಿ ಸಮಸ್ಯೆಗಳಿದ್ದರೆ, ನಿಮ್ಮ ಆಹಾರ ಸೇವನೆಯ ಕ್ರಮ ಸರಿಯಿಲ್ಲ ಎಂದರ್ಥ. ಇದಕ್ಕಾಗಿ ನೀವು ತಿನ್ನುವ ವೇಗವನ್ನು ತುಸು ಕಡಿಮೆ ಮಾಡುವುದೊಂದೇ ದಾರಿ. ಇದರೊಂದಿಗೆ ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸಬಹುದು.
(1 / 6)
ಊಟವನ್ನು ವೇಗವಾಗಿ ಸೇವಿಸುವುದರಿಂದ ನಿಮ್ಮ ದೇಹವನ್ನು 'ಫೈಟ್ ಅಥವಾ ಫ್ಲೈಟ್' ಮೋಡ್‌ಗೆ ತಳ್ಳಬಹುದು, ಎಂದು ಪೌಷ್ಟಿಕತಜ್ಞರಾದ ಕರಿಷ್ಮಾ ಶಾ ಹೇಳುತ್ತಾರೆ. ಇದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗಬಹುದು. ಅಲ್ಲದೆ ಹೊಟ್ಟೆಯುಬ್ಬರ, ಗ್ಯಾಸ್ ಮತ್ತು ಆಸಿಡಿಟಿಯಂಥ ಸಮಸ್ಯೆಗಳಿಗೆ ಕಾರಣವಾಗಬಹುದು.(Freepik)
(2 / 6)
ತ್ವರಿತವಾಗಿ ತಿನ್ನುವುದರ ಮೂಲಕ ನೀವು ಅವಸರದಿಂದ ಊಟ ಮುಗಿಸಬಹುದು. ಆದರೆ, ಇದರಿಂದ ದೇಹದ ಮೇಲೆ ಒತ್ತಡ ಬೀಳುತ್ತದೆ. ಅಲ್ಲದೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. (Freepik)
(3 / 6)
ವೇಗವಾಗಿ ತಿಂದರೆ, ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ನಮ್ಮ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ. ಇದು ಉಬ್ಬರ, ಗ್ಯಾಸ್ ಮತ್ತು ಆಸಿಡ್ ರಿಫ್ಲಕ್ಸ್‌ನಂಥ ಅಹಿತಕರ ರೋಗಲಕ್ಷಣಗಳಿಗೆ ಕಾರಣವಾಗಬಹುದು. (Freepik)
(4 / 6)
ಇದೇ ವೇಳೆ, ನಿಧಾನವಾಗಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ತಿನ್ನುವ ವೇಗವನ್ನು ನಿಧಾನಗೊಳಿಸುವುದರಿಂದ ದೇಹಕ್ಕೆ ಊಟದ ವೇಳೆ ಹೆಚ್ಚುವರಿ ವಿಶ್ರಾಂತಿ ಸಿಗುತ್ತದೆ. ಅಲ್ಲದೆ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ.(Freepik)
(5 / 6)
ಆಹಾರವನ್ನು ಬಾಯಿಗಿಟ್ಟು ಜಗಿಯುವ ವೇಳೆ ನಿಮ್ಮ ಚಮಚ ಅಥವಾ ಫೋರ್ಕ್ ಅನ್ನು ಕೆಳಗಿಳಿಸಿ. ಇದೇ ಸಮಯದಲ್ಲಿ ಮತ್ತೊಂದು ತುತ್ತು ಬಾಯಿಗೆ ಹಾಕಿಕೊಳ್ಳುವುದು ಬೇಡ. ಆಹಾರವನ್ನು ಚೆನ್ನಾಗಿ ಜಗಿದು ನುಂಗಿ.
ಇತರ ಗ್ಯಾಲರಿಗಳು