Protein Deficiency: ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳಿವು, ಸಕಾಲದಲ್ಲಿ ಗುರುತಿಸಿಲ್ಲ ಅಂದ್ರೆ ಅಪಾಯ ಖಚಿತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Protein Deficiency: ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳಿವು, ಸಕಾಲದಲ್ಲಿ ಗುರುತಿಸಿಲ್ಲ ಅಂದ್ರೆ ಅಪಾಯ ಖಚಿತ

Protein Deficiency: ದೇಹದಲ್ಲಿ ಪ್ರೊಟೀನ್ ಕೊರತೆ ಸೂಚಿಸುವ ಲಕ್ಷಣಗಳಿವು, ಸಕಾಲದಲ್ಲಿ ಗುರುತಿಸಿಲ್ಲ ಅಂದ್ರೆ ಅಪಾಯ ಖಚಿತ

ಮನುಷ್ಯ ದೇಹಕ್ಕೆ ಅತ್ಯಗತ್ಯ ಪೋಷಕಾಂಶಗಳಲ್ಲಿ ಪ್ರೊಟೀನ್ ಕೂಡ ಒಂದು. ಇದು ಸ್ನಾಯುಗಳು, ಅಂಗಾಂಶಗಳು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪ್ರೊಟೀನ್ ಕೊರತೆಯಿದ್ದರೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ.

ನಮ್ಮ ದೇಹವು 10,000ಕ್ಕೂ ಹೆಚ್ಚು ವಿಭಿನ್ನ ಪ್ರೊಟೀನ್‌ಗಳನ್ನು ಹೊಂದಿರುತ್ತದೆ. ಕೂದಲಿನಿಂದ ಮೂಳೆಯವರೆಗೆ ದೇಹದ ಪ್ರತಿಯೊಂದು ಭಾಗದಲ್ಲೂ ಪ್ರೊಟೀನ್ ಇರುತ್ತದೆ. ಇವು ಜೀವಕೋಶ ಬೆಳವಣಿಗೆ, ರಿಪೇರಿ, ಅಭಿವೃದ್ಧಿಗೆ ಸಹಾಯ ಮಾಡುತ್ತವೆ. ಪ್ರೊಟೀನ್‌ಗಳು ಅಮೈನೋ ಆಮ್ಲಗಳು ಎಂಬ ಅಣುಗಳ ಸಂಯೋಜನೆಯಿಂದ ಮಾಡಲ್ಪಟ್ಟಿವೆ.  ದೇಹವು ಸರಿಯಾಗಿ ಕಾರ್ಯನಿರ್ವಹಿಸಲು 20 ವಿಭಿನ್ನ ಅಮೈನೋ ಆಮ್ಲಗಳ ಅಗತ್ಯವಿದೆ. ಇದು ಅವುಗಳಲ್ಲಿ 11 ಅನ್ನು ದೇಹವು ಉತ್ಪಾದಿಸುತ್ತದೆ. ಉಳಿದ 9 ಅನ್ನು ನಾವು ತಿನ್ನುವ ಆಹಾರದಿಂದ ದೇಹಕ್ಕೆ ಅಮೈನೋ ಆಮ್ಲವನ್ನು ಪೂರೈಸಬೇಕಿದೆ.
icon

(1 / 10)

(freepik)

ಪ್ರೊಟೀನ್ ಕೊರತೆಯು ದೇಹದ ಮೇಲೆ ಹಲವು ರೀತಿಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಬಹುದು. ಈ ಸಮಸ್ಯೆಯನ್ನು ಸಕಾಲದಲ್ಲಿ ಗುರುತಿಸಿ ಪರಿಹಾರ ಕಂಡುಕೊಳ್ಳದಿದ್ದರೆ, ಮೂಳೆಗಳು ದುರ್ಬಲಗೊಳ್ಳುತ್ತವೆ. ಅಲ್ಲದೇ ಒಂದೊಂದೇ ಸಮಸ್ಯೆಗಳು ಶುರುವಾಗುತ್ತವೆ. ಇಂದು ದೇಹದಲ್ಲಿ ಪ್ರೊಟೀನ್ ಕೊರತೆಯನ್ನು ಸೂಚಿಸುವ ಮುಖ್ಯ ಲಕ್ಷಣಗಳ ಬಗ್ಗೆ ತಿಳಿಯೋಣ.
icon

(2 / 10)

ಪ್ರೊಟೀನ್ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೆರಾಟಿನ್ ಎಂಬ ಪ್ರೊಟೀನ್‌ ಕೂದಲಿನ ರಕ್ಷಣೆಗೆ ನೆರವಾಗುತ್ತದೆ. ಆದರೆ ಇದರ ಕೊರತೆಯಾದಾಗ ಅತಿಯಾಗಿ ಕೂದಲು ಉದುರುವುದು, ತಲೆಹೊಟ್ಟಿನ ಸಮಸ್ಯೆ ಮುಂತಾದವು ಎದುರಾಗಬಹುದು. ಅಲ್ಲದೇ ಇದು ಇತರ ಗಂಭೀರ ಸಮಸ್ಯೆಗಳ ಸೂಚಕವೂ ಆಗಿರಬಹುದು ಎಚ್ಚರ.
icon

(3 / 10)

ಪದೇ ಪದೇ ಹಸಿವಾಗುವುದು, ಸುಸ್ತು ಕೂಡ ಪ್ರೊಟೀನ್ ಕೊರತೆಯನ್ನು ಸೂಚಿಸುವ ಲಕ್ಷಣವಾಗಿದೆ. ಹಾಗಾಗಿ ಇದನ್ನು ನೀವು ನಿರ್ಲಕ್ಷ್ಯ ಮಾಡುವಂತಿಲ್ಲ. 
icon

(4 / 10)

ಪ್ರೊಟೀನ್ ಕೊರತೆ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಚರ್ಮ ಒಣ ನಿಸ್ತೇಜವಾಗುವುದು ಸಿಪ್ಪೆ ಏಳುವಂತಾಗುವುದು ಪ್ರೊಟೀನ್ ಕೊರತೆಯ ಲಕ್ಷಣವಾಗಿರಬಹುದು. ಇದರ ಕೊರತೆಯಿಂದ ದದ್ದುಗಳು ಮತ್ತು ಮೂಗೇಟುಗಳು ಹೆಚ್ಚು ವೇಗವಾಗಿ ಕಾಣಿಸಿಕೊಳ್ಳುತ್ತವೆ.
icon

(5 / 10)

ದೇಹದಲ್ಲಿ ಪ್ರೊಟೀನ್ ಕೊರತೆಯಿದ್ದರೆ,  ವ್ಯಕ್ತಿಯು ಬೇಗನೆ ದಣಿದಂತೆ ಹಾಗೂ ದುರ್ಬಲನಂತೆ ಕಾಣಿಸಬಹುದು. ಸ್ನಾಯುಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಈ ಸ್ಥಿತಿಯು ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
icon

(6 / 10)

ಪ್ರೊಟೀನ್‌ ಕೊರತೆಯಿಂದ ಪದೇ ಪದೇ ಮೂಡ್ ಚೇಂಜ್ ಆಗಬಹುದು. ಇದು ನಮ್ಮ ಯೋಚನಾಶಕ್ತಿಯ ಮೇಲೂ ಪರಿಣಾಮ ಬೀರಬಹುದು. ಇದರಿಂದ ಗಮನಶಕ್ತಿ, ಏಕಾಗ್ರತೆಯ ಕೊರತೆಯೂ ಉಂಟಾಗಬಹುದು.
icon

(7 / 10)

ಪ್ರೊಟೀನ್ ಕೊರತೆಯು ದೇಹದ ಮೇಲೆ ಹಲವು ರೀತಿಯ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಕಾಲಾನಂತರದಲ್ಲಿ, ರೋಗದ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಕುಂಠಿತವಾಗಬಹುದು. ಪ್ರೊಟೀನ್ ಕೊರತೆಯಿರುವಾಗ, ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ದೇಹವು ರೋಗಗಳಿಗೆ ಗುರಿಯಾಗುತ್ತದೆ.
icon

(8 / 10)

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(10 / 10)

ಇತರ ಗ್ಯಾಲರಿಗಳು