ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಗು ಬೇಕು ಅನ್ನೋ ಆಸೆಯಿದ್ರೆ ಈ ಬೀಜಗಳನ್ನು ತಿನ್ನಲು ಶುರು ಮಾಡಿ, ಫಲವಂತಿಕೆ ಹೆಚ್ಚುತ್ತೆ; ಫೋಟೊಸ್

ಮಗು ಬೇಕು ಅನ್ನೋ ಆಸೆಯಿದ್ರೆ ಈ ಬೀಜಗಳನ್ನು ತಿನ್ನಲು ಶುರು ಮಾಡಿ, ಫಲವಂತಿಕೆ ಹೆಚ್ಚುತ್ತೆ; ಫೋಟೊಸ್

  • ಎಳ್ಳಿನಿಂದ ಹಿಡಿದು ಕುಂಬಳಕಾಯಿ ಬೀಜಗಳವರೆಗೆ, ಇಲ್ಲಿ ನೀಡಲಾಗಿರುವ ಬೀಜಗಳಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ಇವುಗಳನ್ನು ತಿನ್ನುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ. ಫೋಟೊ ಸಹಿತ ಮಾಹಿತಿ ಸಂಪೂರ್ಣ ಮಾಹಿತಿ ಇಲ್ಲಿದೆ.

ಏಳು ಬೀಜಗಳು - ಎಳ್ಳು, ಸೂರ್ಯಕಾಂತಿ, ಕುಂಬಳಕಾಯಿ, ಅಗಸೆ, ಚಿಯಾ, ಸೆಣಬು ಮತ್ತು ಅಲಿವ್ - ನಂಬಲಾಗದಷ್ಟು ಪೌಷ್ಟಿಕವಾಗಿವೆ ಮತ್ತು ಗರ್ಭಧರಿಸಲು ಯೋಜಿಸುವವರಿಗೆ ಅಥವಾ ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿಯಾಗಿದೆ. ಪೌಷ್ಟಿಕತಜ್ಞ ಜೂಹಿ ಕಪೂರ್ ಈ ಪ್ರತಿಯೊಂದು ಬೀಜಗಳು ಮಗುವಿನ ಯೋಜನೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸುತ್ತಾರೆ. 
icon

(1 / 8)

ಏಳು ಬೀಜಗಳು - ಎಳ್ಳು, ಸೂರ್ಯಕಾಂತಿ, ಕುಂಬಳಕಾಯಿ, ಅಗಸೆ, ಚಿಯಾ, ಸೆಣಬು ಮತ್ತು ಅಲಿವ್ - ನಂಬಲಾಗದಷ್ಟು ಪೌಷ್ಟಿಕವಾಗಿವೆ ಮತ್ತು ಗರ್ಭಧರಿಸಲು ಯೋಜಿಸುವವರಿಗೆ ಅಥವಾ ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿಯಾಗಿದೆ. ಪೌಷ್ಟಿಕತಜ್ಞ ಜೂಹಿ ಕಪೂರ್ ಈ ಪ್ರತಿಯೊಂದು ಬೀಜಗಳು ಮಗುವಿನ ಯೋಜನೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸುತ್ತಾರೆ. (Freepik)

1. ಎಳ್ಳು: ಭ್ರೂಣದ ಬೆಳವಣಿಗೆಗೆ ಅಗತ್ಯವಾದ ಸತುವು ಎಳ್ಳಿನ ಬೀಜಗಳಲ್ಲಿ ಹೆಚ್ಚಾಗಿದೆ. ಗರ್ಭಧಾರಣೆಗೆ ದೇಹವನ್ನು ಸಿದ್ಧಪಡಿಸಲು ಎಳ್ಳು ನೆರವಾಗುತ್ತದೆ. ಸತುವು ಹಾರ್ಮೋನ್ ನಿಯಂತ್ರಣ ಮತ್ತು ಫಲವತ್ತತೆಗೆ ಸಹಾಯ ಮಾಡುತ್ತದೆ. 
icon

(2 / 8)

1. ಎಳ್ಳು: ಭ್ರೂಣದ ಬೆಳವಣಿಗೆಗೆ ಅಗತ್ಯವಾದ ಸತುವು ಎಳ್ಳಿನ ಬೀಜಗಳಲ್ಲಿ ಹೆಚ್ಚಾಗಿದೆ. ಗರ್ಭಧಾರಣೆಗೆ ದೇಹವನ್ನು ಸಿದ್ಧಪಡಿಸಲು ಎಳ್ಳು ನೆರವಾಗುತ್ತದೆ. ಸತುವು ಹಾರ್ಮೋನ್ ನಿಯಂತ್ರಣ ಮತ್ತು ಫಲವತ್ತತೆಗೆ ಸಹಾಯ ಮಾಡುತ್ತದೆ. (Unsplash)

2. ಸೂರ್ಯಕಾಂತಿ ಬೀಜಗಳು: ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ. ಉತ್ಕರ್ಷಣ ನಿರೋಧಕವಾಗಿದ್ದು, ತಾಯಿ ಮತ್ತು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮಗುವಿನ ನರನಾಳದ ದೋಷಗಳನ್ನು ತಡೆಗಟ್ಟಲು ನಿರ್ಣಾಯಕವಾಗಿ ಕೆಲಸ ಮಾಡುತ್ತೆ
icon

(3 / 8)

2. ಸೂರ್ಯಕಾಂತಿ ಬೀಜಗಳು: ಇದರಲ್ಲಿ ವಿಟಮಿನ್ ಇ ಹೇರಳವಾಗಿದೆ. ಉತ್ಕರ್ಷಣ ನಿರೋಧಕವಾಗಿದ್ದು, ತಾಯಿ ಮತ್ತು ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮಗುವಿನ ನರನಾಳದ ದೋಷಗಳನ್ನು ತಡೆಗಟ್ಟಲು ನಿರ್ಣಾಯಕವಾಗಿ ಕೆಲಸ ಮಾಡುತ್ತೆ(Shutterstock)

3.ಕುಂಬಳಕಾಯಿ ಬೀಜಗಳು: ಪುರುಷ ಮತ್ತು ಸ್ತ್ರೀ ಫಲವತ್ತತೆಗೆ ಅತ್ಯಗತ್ಯವಾದ ಸತುವು ಕುಂಬಳಕಾಯಿ ಬೀಜಗಳಲ್ಲಿ ಹೇರಳವಾಗಿದೆ.  ಇವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತವೆ, ಇದು ಮಗುವಿನ ಮೆದುಳು ಮತ್ತು ಕಣ್ಣಿನ ಬೆಳವಣಿಗೆಗೆ ಮುಖ್ಯವಾಗಿದೆ. 
icon

(4 / 8)

3.ಕುಂಬಳಕಾಯಿ ಬೀಜಗಳು: ಪುರುಷ ಮತ್ತು ಸ್ತ್ರೀ ಫಲವತ್ತತೆಗೆ ಅತ್ಯಗತ್ಯವಾದ ಸತುವು ಕುಂಬಳಕಾಯಿ ಬೀಜಗಳಲ್ಲಿ ಹೇರಳವಾಗಿದೆ.  ಇವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸಹ ಹೊಂದಿರುತ್ತವೆ, ಇದು ಮಗುವಿನ ಮೆದುಳು ಮತ್ತು ಕಣ್ಣಿನ ಬೆಳವಣಿಗೆಗೆ ಮುಖ್ಯವಾಗಿದೆ. (Pixabay)

4. ಅಗಸೆ ಬೀಜಗಳು: ಹಾರ್ಮೋನುಗಳ ಸಮತೋಲನ ಮತ್ತು ಫಲವತ್ತತೆಯನ್ನು ಉತ್ತೇಜಿಸಲು  ಅಗಸೆ ಬೀಜಗಳು ಸಹಾಯ ಮಾಡುತ್ತವೆ. ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಅನ್ನು ಸಹ ಇವು ಒದಗಿಸುತ್ತವೆ, ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿಯಾಗಿದೆ. 
icon

(5 / 8)

4. ಅಗಸೆ ಬೀಜಗಳು: ಹಾರ್ಮೋನುಗಳ ಸಮತೋಲನ ಮತ್ತು ಫಲವತ್ತತೆಯನ್ನು ಉತ್ತೇಜಿಸಲು  ಅಗಸೆ ಬೀಜಗಳು ಸಹಾಯ ಮಾಡುತ್ತವೆ. ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಫೈಬರ್ ಅನ್ನು ಸಹ ಇವು ಒದಗಿಸುತ್ತವೆ, ಗರ್ಭಾವಸ್ಥೆಯಲ್ಲಿ ಪ್ರಯೋಜನಕಾರಿಯಾಗಿದೆ. (Freepik)

5. ಚಿಯಾ ಬೀಜಗಳು: ನಾರಿನಾಂಶ ಅತ್ಯುತ್ತಮ ಮೂಲ ಚಿಯಾ ಬೀಜಗಳು, ಇದು ಗರ್ಭಾವಸ್ಥೆಯಲ್ಲಿ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಸಸ್ಯ ಆಧಾರಿತ ಪ್ರೋಟೀನ್‌ಗಳು ಸಮೃದ್ಧವಾಗಿವೆ. 
icon

(6 / 8)

5. ಚಿಯಾ ಬೀಜಗಳು: ನಾರಿನಾಂಶ ಅತ್ಯುತ್ತಮ ಮೂಲ ಚಿಯಾ ಬೀಜಗಳು, ಇದು ಗರ್ಭಾವಸ್ಥೆಯಲ್ಲಿ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಸಸ್ಯ ಆಧಾರಿತ ಪ್ರೋಟೀನ್‌ಗಳು ಸಮೃದ್ಧವಾಗಿವೆ. (pixabay)

6. ಸೆಣಬಿನ ಬೀಜಗಳು: ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಸೆಣಬಿನ ಬೀಜಗಳಲ್ಲಿ ಹೇರಳವಾಗಿರುತ್ತವೆ. ಮಗುವಿನ ಮೆದುಳು ಮತ್ತು ಕಣ್ಣಿನ ಬೆಳವಣಿಗೆಗೆ ಇವು ಮುಖ್ಯವಾಗಿದೆ. ಸಸ್ಯ ಆಧಾರಿತ ಪ್ರೋಟೀನ್ ನ ಉತ್ತಮ ಮೂಲವಾಗಿದೆ. 
icon

(7 / 8)

6. ಸೆಣಬಿನ ಬೀಜಗಳು: ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಸೆಣಬಿನ ಬೀಜಗಳಲ್ಲಿ ಹೇರಳವಾಗಿರುತ್ತವೆ. ಮಗುವಿನ ಮೆದುಳು ಮತ್ತು ಕಣ್ಣಿನ ಬೆಳವಣಿಗೆಗೆ ಇವು ಮುಖ್ಯವಾಗಿದೆ. ಸಸ್ಯ ಆಧಾರಿತ ಪ್ರೋಟೀನ್ ನ ಉತ್ತಮ ಮೂಲವಾಗಿದೆ. (Pixabay)

7. ಅಲಿವ್ ಬೀಜಗಳು (ಗಾರ್ಡನ್ಕ್ರೆಸ್ ಬೀಜಗಳು): ಇವುಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿವೆ, ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಫಲವತ್ತತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. 
icon

(8 / 8)

7. ಅಲಿವ್ ಬೀಜಗಳು (ಗಾರ್ಡನ್ಕ್ರೆಸ್ ಬೀಜಗಳು): ಇವುಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿವೆ, ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಫಲವತ್ತತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. 


ಇತರ ಗ್ಯಾಲರಿಗಳು